Shubhashaya News

ಗುಂಡಗುರ್ತಿ ಗ್ರಾಪಂಗೆ ಅನ್ಯಾಯ

ಚಿತ್ತಾಪುರ: ಕೆಲ ಗ್ರಾಮಗಳನ್ನು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡುವ ಮೂಲಕ ಗುಂಡಗುರ್ತಿ ಗ್ರಾಮ ಪಂಚಾಯಿತಿಗೆ ಬಿಜೆಪಿ ಸರ್ಕಾರ ಅನ್ಯಾಯ ಮಾಡಿದೆ ಎಂದು ಗುಂಡಗುರ್ತಿ ತಾಲೂಕು ಪಂಚಾಯಿತಿ ಸದಸ್ಯ ಬಸವರಾಜ ಹೊಸಳ್ಳಿ ಹೇಳಿದ್ದಾರೆ.
ಗುಂಡಗುರ್ತಿ ಗ್ರಾಪಂ ವ್ಯಾಪ್ತಿಯಲ್ಲಿರುವ ಇಂಗನಕಲ್, ಮತ್ತಿಮೂಡ ಗ್ರಾಮಗಳು ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಸ್ಥಾನವಿರುವ ಗುಂಡಗುರ್ತಿ ಮಾತ್ರ ಚಿತ್ತಾಪುರ ತಾಲೂಕಿನಲ್ಲಿ ಬಿಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲಿನ ಇಂಗನಕಲ್ ಹಾಗೂ ಮತ್ತಿಮೂಡ ಚಿತ್ತಾಪುರ ತಾಲೂಕು ಸಮೀಪವಾಗಿರುವುದರಿಂದ ಚಿತ್ತಾಪುರ ತಾಲೂಕಿನಲ್ಲಿ ಇರಬೇಕಾಗಿತ್ತು ಎಂದು ಹೇಳಿದರು.
ಅದೇ ರೀತಿ ಪೇಠಶಿರೂರ ಗ್ರಾಮವು ಚಿತ್ತಾಪುರ ಹತ್ತಿರವಾಗಿದ್ದರೂ ಕಾಳಗಿ ತಾಲೂಕಿಗೆ ಸೇರ್ಪಡೆ ಮಾಡಿ ಅನ್ಯಾಯ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಗಿಂತ ಸ್ವಾರ್ಥ ಲಾಭಕ್ಕಾಗಿ ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಹೆಬ್ಬಾಳ ಅವರಿಗೆ ಅನೂಕೂಲಕ್ಕೆ ತಕ್ಕಂತೆ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಹಾಗೂ ಮುಗ್ಧ ಜನರಿಗೆ ಬಲಿಪಶು ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಲೂಕಿನ ತಾಪಂ, ಜಿಪಂ ಕ್ಷೇತ್ರಗಳ ಮರುವಿಗಂಡನೆಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳು ಒಡೆದು ಸಮೀಪ ಕ್ಷೇತ್ರಕ್ಕೆ ದೂರದ ಹಳ್ಳಿ ಇನ್ನೋಂದು ದೂರದ ಕ್ಷೇತ್ರಕ್ಕೆ ಸೇರಿಸಿ ಬದಲಾವಣೆ ಮಾಡಲಾಗಿದೆ. ಅದರಂತೆ ಕೆಲ ತಾಪಂ ಕ್ಷೇತ್ರಗಳು ತೆಗದು, ಒಡೆದು ದೂರದ ಪಂಚಾಯಿತಿಗಳಿಗೆ ಸೇರ್ಪಡೆ ಮಾಡಲಾಗಿದೆ. ಕೂಡಲೇ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮೊದಲಿನಂತೆ ಆಯಾ ಗ್ರಾಪಂ ಕೇಂದ್ರ ವ್ಯಾಪ್ತಿಯಲ್ಲಿನ ಗ್ರಾಮಗಳ ಯಥಸ್ಥಿತಿ ಕಾಪಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave A Reply

Your email address will not be published.