ಹಾಸನದಲ್ಲಿ ಹೃದಯಾಘಾತ ಮರಣ ಮೃದಂಗ ಮುಂದುವರೆದಿದ್ದು ಇಂದು ಬೆಳಿಗ್ಗೆ ಅಷ್ಟೇ ಹೃದಯಘಾತಕ್ಕೆ ಹಾಸನ ಜಿಲ್ಲೆಯ ಪ್ರತ್ಯೇಕ ತಾಲೂಕುಗಳಲ್ಲಿನ ಒಟ್ಟು ಮೂರು ಜನರು ಬಳಿಯಾಗಿದ್ದರು. ಇದೀಗ ಹಾಸನ ಜಿಲ್ಲೆಯ ಜನರಾಯಪಟ್ಟಣದಲ್ಲಿ ಡಿ ಗ್ರೂಪ್ ನೌಕರರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಹೌದು ನಾಡಕಚೇರಿ ಡಿ ಗ್ರೂಪ್ ನೌಕರ ಕುಮಾರ್ (53) ಎನ್ನುವವರು ಸಾವನಪ್ಪಿದ್ದಾರೆ. ಚೆನ್ನರಾಯಪಟ್ಟಣ ತಾಲೂಕಿನ ನಲ್ಲೂರು ಗ್ರಾಮದ ನಿವಾಸಿಯಾಗಿರುವ ಅವರು ರಾತ್ರಿ ಮನೆಯಲ್ಲಿ ಮಲಗಿದ್ದಾಗ ಕುಮಾರ್ ಗೆ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಚನ್ನರಾಯಪಟ್ಟಣ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಆದರೆ ಅಷ್ಟರಲ್ಲೇ ಆಗಲಿ ಅವರು ಸಾವನ್ನಪ್ಪಿದ್ದಾರೆ.ಈ ಮೂಲಕ ಹಾಸನದಲ್ಲಿ ಇದುವರೆಗೂ ಕಳೆದ 40 ದಿನಗಳಲ್ಲಿ 22 ಜನರು ಸಾವನ್ನಪ್ಪಿದ್ದಾರೆ.
Comments are closed.