Shubhashaya News

ಬಿಜೆಪಿ ಸೇರಿದ ಮತ್ತೊಬ್ಬ ಪ್ರಭಾವಿ ಮುಖಂಡ ಯಾರು ಗೊತ್ತಾ?

ಯಾದಗಿರಿ  ಜಿಲ್ಲೆಯ ಮತ್ತೊಬ್ಬ ಪ್ರಭಾವಿ ಮುಖಂಡ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅವರ ಸೇರ್ಪಡೆಯಿಂದ ಈ ಭಾಗದಲ್ಲಿ ಬಿಜೆಪಿ ಮತ್ತಷ್ಟು ಪ್ರಬಲವಾಗಲಿದೆ ಎನ್ನಲಾಗುತ್ತಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಹಾಪುರ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನರೆಡ್ಡಿ ಯಾಳಗಿ ಇಂದು ತೆನೆಯ ಹೊರೆಯನ್ನು ಇಳಿಸಿ ಕಮಲ ಮುಡಿದಿದ್ದಾರೆ.
ಶಹಾಪುರ ಶಾಸಕ ಶರಣಬಸಪ್ಪ ದರ್ಶನಾಪುರ ಗರಡಿಯಲ್ಲಿ 25 ವರ್ಷಗಳ ಕಾಲ ಪಳಗಿದ್ದ ಅಮೀನರೆಡ್ಡಿ ಯಾಳಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಹಾಪುರ ವಿಧಾನಸಭೆ ಮತಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ 25 ಸಾವಿರ ಮತಗಳನ್ನು ಪಡೆದಿದ್ದರು.
ಶಹಾಪುರ ಭಾಗದಲ್ಲಿ ಪ್ರಬಲವಾಗಿರುವ ರೆಡ್ಡಿ ಜನಾಂಗವನ್ನು ಪ್ರತಿನಿಧಿಸುವ ಅವರು ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ. ಅಮೀನರೆಡ್ಡಿ ಯಾಳಗಿ ಅವರ ಆಗಮನದಿಂದ ಬಿಜೆಪಿ ಮುಂದಿನ ದಿನಗಳಲ್ಲಿ ಯಾವ ಕಮಾಲ್ ಮಾಡೋತ್ತೋ ಕಾದು ನೋಡಬೇಕಾಗಿದೆ.

Leave A Reply

Your email address will not be published.