Shubhashaya News

ಜಿಡಗಾ ಶ್ರೀಮಠದಿಂದ ಶೈಕ್ಷಣಿಕ ವರ್ಷದ ಆರಂಭೋತ್ಸವ

ಸಮವಸ್ತ್ರ, ಕಲಿಕಾ ಕಿಟ್ ವಿತರಣೆ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಡಾ. ಮುರುಘರಾಜೇಂದ್ರ ಶ್ರೀ ಘೋಷಣೆ

ಆಳಂದ: ಜಿಡಗಾ ಶಿವಯೋಗಿ ಜ್ಞಾನಮಂದಿರ ಉಚಿತ ವಸತಿ ಶಾಲೆಯಲ್ಲಿ ನಡೆದ ಶೈಕ್ಷಣಿಕ ವರ್ಷದ ಆರಂಭೋತ್ಸವ, ೧೦ನೇ ವಿದ್ಯಾರ್ಥಿಗಳ ಬೀಳ್ಕೊಡುಗೆ ಸನ್ಮಾನಿಸಿ ಜಿಡಗಾ ಮುಗಳಖೋಡ-ಕೊಟನೂರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ನಿರ್ಮಿಸುವ ಮಹತ್ವಾಕಾಂಕ್ಷೆಯೊAದಿಗೆ ಜಿಡಗಾ ಶ್ರೀಮಠವು ತನ್ನ ಶಿಕ್ಷಣ ಸೇವೆಯನ್ನು ಮತ್ತಷ್ಟು ವಿಸ್ತರಿಸಿದ್ದು, ೭೦ ಎಕರೆ ಪ್ರದೇಶದಲ್ಲಿ ಸುಮಾರು ೧೦೦ ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಶಿಕ್ಷಣ ಸಂಕೀರ್ಣ ನಿರ್ಮಿಸಿ, ಒಟ್ಟು ೧೦ ಸಾವಿರ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ನೀಡುವ ಮಹತ್ವದ ಸಂಕಲ್ಪವನ್ನು ಕೈಗೊಂಡಿದೆ ಎಂದು ಜಿಡಗಾ ಮುಗಳಖೋಡ-ಕೊಟನೂರ ಮಠದ ಪೀಠಾಧಿಪತಿ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳು ಘೋಷಿಸಿದರು.
ತಾಲೂಕಿನ ಜಿಡಗಾದ ನವಕಲ್ಯಾಣ ಮಠದ ಶಿವಯೋಗಿ ಜ್ಞಾನಮಂದಿರ ಉಚಿತ ವಸತಿ ಶಾಲೆಯಲ್ಲಿ ನಡೆದ ನೂತನ ಶೈಕ್ಷಣಿಕ ವರ್ಷದ ಆರಂಭೋತ್ಸವ, ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿ ಕಿಟ್ ವಿತರಣೆ ಮತ್ತು ೧೦ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಮೂರು ವರ್ಷಗಳ ಹಿಂದೆ ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆ ಆರಂಭಿಸಲಾಗಿತ್ತು. ಈಗ ಮೂರನೇ ಶೈಕ್ಷಣಿಕ ವರ್ಷಕ್ಕೆ ಕಾಲಿಟ್ಟಿರುವ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹಂತಹAತವಾಗಿ ಹೆಚ್ಚಿಸುವ ಬದಲು, ವರ್ಷಕ್ಕೆ ಸಾವಿರ ಮಕ್ಕಳಿಗೆ ಪ್ರವೇಶ ಕಲ್ಪಿಸುವ ಮೂಲಕ ಮುಂದಿನ ದಿನಗಳಲ್ಲಿ ಒಟ್ಟು ೧೦ ಸಾವಿರ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.
ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಶ್ರೀಮಠವು ೭೦ ಎಕರೆ ನಿವೇಶನ ಮೀಸಲಿಟ್ಟಿದ್ದು, ಸುಮಾರು ೧೦ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಶಾಲಾ ಕಟ್ಟಡಗಳು, ವಸತಿ ನಿಲಯಗಳು, ಕ್ರೀಡಾಂಗಣ ಸೇರಿದಂತೆ ಅತ್ಯಾಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ. ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದ ವಾತಾವರಣ ಕಲ್ಪಿಸಲಾಗುವುದು ಎಂದು ಹೇಳಿದರು.
“ಬಾಲ್ಯದಿಂದ ಇಂದಿನವರೆಗೆ ಪರಮಪೂಜ್ಯ ಲಿಂ. ಶಿವಯೋಗಿ ಸಿದ್ಧರಾಮೇಶ್ವರ ಮಹಾಸ್ವಾಮಿಗಳು ಕರುಣಿಸಿದ ಶ್ರೀಸಂಪತ್ತಿನ ಆಶೀರ್ವಾದವನ್ನು ಅನುಭವಿಸಿದ್ದೇನೆ. ಆದರೆ ಈಗ ನನ್ನ ಜೀವನದ ನಿಜವಾದ ಸಂತೋಷ, ಸಮೃದ್ಧಿ ಮತ್ತು ತೃಪ್ತಿ ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ ಅವರನ್ನು ದೇಶದ ಆಸ್ತಿಯನ್ನಾಗಿ ರೂಪಿಸುವ ಸಂಕಲ್ಪದಲ್ಲಿದೆ” ಎಂದು ಡಾ. ಮುರುಘರಾಜೇಂದ್ರ ಶ್ರೀ ಭಾವನಾತ್ಮಕವಾಗಿ ನುಡಿದರು.
ಶ್ರೀಮಠದಲ್ಲಿ ಪ್ರವೇಶ ಪಡೆದಿರುವ ಮಕ್ಕಳ ಪಾಲಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಉತ್ತಮ ಸಂಸ್ಕಾರ ಹಾಗೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಸಾಮರ್ಥ್ಯ ಬೆಳೆಸುವುದೇ ಶ್ರೀಮಠದ ಧ್ಯೇಯವಾಗಿದೆ. ಈ ಕಾರಣದಿಂದ ಶೈಕ್ಷಣಿಕ ಅವಧಿಯ ಮಧ್ಯದಲ್ಲಿ ಸಣ್ಣಪುಟ್ಟ ಕುಟುಂಬ ಕಾರ್ಯಕ್ರಮಗಳ ನೆಪದಲ್ಲಿ ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಹೋಗುವುದನ್ನು ಪಾಲಕರು ತಪ್ಪಿಸಬೇಕು. ಇದರಿಂದ ಅವರ ಶಿಕ್ಷಣಕ್ಕೆ ವ್ಯತ್ಯಯ ಉಂಟಾಗುತ್ತದೆ ಎಂದು ಅವರು ಸಲಹೆ ನೀಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ಹಾಗೂ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸಲಾಯಿತು. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಬೀಳ್ಕೊಡಲಾಯಿತು.
ಸಮಾರಂಭದಲ್ಲಿ ಚಿನ್ಮಗಿರಿ ಮಠದ ಶ್ರೀ ವೀರಮಹಾಂತ ಶಿವಾಚಾರ್ಯರು, ಜಿಪಂ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ, ಯೋಗಿರಾಜ ಶಾಸ್ತಿç ಖಾನಾಪೂರ, ಪ್ರಬುದ್ಧ ಆರ್. ಪಾಟೀಲ ಅವರು ಜಿಡಗಾ ಶ್ರೀಮಠದ ಕಾರ್ಯವನ್ನು ಶ್ಲಾಘೀಸಿ ಬಡಮಕ್ಕಳಿಗೆ ವರವಾಗಿದೆ ಎಂದರು.
ವೇದಿಕೆಯಲ್ಲಿ ಶಹಾಬಾದ ಮಠದ ಶ್ರೀ, ಚನ್ನವೀರಯ್ಯಾ ಸ್ವಾಮಿ, ಶಂಕರರಾವ್ ದೇಶಮುಖ, ಮಲ್ಲಪ್ಪ ಹತ್ತರಕಿ, ರೇವಣಸಿದ್ಧ ನಾಗೂರೆ, ಶಿವುಪುತ್ರಪ್ಪ ಪಾಟೀಲ, ಆನಂದ ಪಾಟೀಲ ಕೊರಳ್ಳಿ, ಶರಣು ಭೂಸನೂರ, ಅಣ್ಣಾರಾವ್ ಕಲವಗಾ, ರಾಜಶೇಖರ ಮಲಶೆಟ್ಟಿ, ವೀರಶೈವ ಮಹಾಸಭಾ ಅಧ್ಯಕ್ಷ ಶರಣಸಪ್ಪ ಪಾಟೀಲ, ಲಿಂಗರಾಜ ಪಾಟೀಲ, ಶ್ರೀಶೈಲ ಸುತಾರ ಮುನ್ನೊಳ್ಳಿ, ಡಾ.ಸಂಗಮೇಶ ಬಿರಾದಾರ, ಮುರಲೀಧರ ಎಕಲಾರಕರ್, ಬಸವೇಶ್ವರ ಕೃಷಿ ಕೇಂದ್ರದ ರಾಜಶೇಖರ ಪಾಟೀಲ, ಸಿದ್ಧರಾಮ ಯಾದವಾಡ, ಬಸಯ್ಯ ಹಿರೇಮಠ ಸೇರಿದಂತೆ ವಿವಿಧ ಭಾಗಗಳಿಂದ ಭಕ್ತಾದಿಗಳು ಭಾಗವಹಿಸಿದ್ದರು. ಬಸವರಾಜ ಚೋಪಾಟೆ ನಿರೂಪಿಸಿದರು. ಆಸ್ತಾನ ಕಲಾಬಳಗದಿಂದ ಭಕ್ತಗಾಯನ ನಡೆಯಿತು.

Leave A Reply

Your email address will not be published.