Shubhashaya News

ನಿಂಬರ್ಗಾ ಜಿ.ಪಂ ಮುಂದುವರೆಸಲು ಮನವಿ

ಆಳಂದ ತಾಲೂಕಿನ ನಿಂಬರ್ಗಾ ಜಿ.ಪಂ ಕ್ಷೇತ್ರವನ್ನು ಈ ಹಿಂದಿನಂತೆ ಮುಂದುವರೆಸಿಕೊಂಡು ಹೋಗಲು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಚುನಾವಣಾ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಿಂಬರ್ಗಾ ಗ್ರಾಮವು ಹೋಬಳಿ ಕೇಂದ್ರವಾಗಿದ್ದು ಜಿ.ಪಂ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ಅತೀ ದೊಡ್ಡ ಗ್ರಾಮವಾಗಿದೆ ಕಳೆದ 30 ವರ್ಷಗಳಿಂದ ಜಿ.ಪಂ ಮುಖ್ಯ ಕೇಂದ್ರ ಸ್ಥಾನವಾಗಿ ಕಾರ್ಯನಿರ್ವಹಿಸಿದೆ ಆದರೆ ಈಗ ಕ್ಷೇತ್ರ ಪುನರ್ ವಿಂಗಡಣೆಯ ಸಂದರ್ಭದಲ್ಲಿ ಕೇಂದ್ರ ಸ್ಥಾನವನ್ನು ಬದಲಾಯಿಸಿ ಬೇರೊಂದು ಗ್ರಾಮಕ್ಕೆ ವರ್ಗಾಯಿಸಿರುವುದನ್ನು ಮರು ಪರಿಶೀಲಿಸಿ ಈ ಹಿಂದಿನಂತೆಯೇ ನಿಂಬರ್ಗಾ ಜಿ.ಪಂ ಕ್ಷೇತ್ರವನ್ನು ಮುಂದುವರಿಸಿಕೊಂಡು ಹೋಗಲು ಆದೇಶಿಸಿಬೇಕೆಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

Leave A Reply

Your email address will not be published.