Shubhashaya News

ಕಳಚದ ಕಳ್ಳರ ಪಟ್ಟ–ಎಲ್ಲೇ ಕಳ್ಳತನ ನಡೆದರು ಪಾರ್ದಿಗಳನ್ನೇ ಟಾರಗೇಟ್

"ಶಿಕ್ಷಣ ಹಕ್ಕಿಗೆ ತಡೆ–ಪಾರ್ದಿ ತಾಂಡಾ ಭವಿಷ್ಯ ಕತ್ತಲಲ್ಲಿ"

ಆಳಂದ: ಕಮಸರ ನಾಯಕ ಪಾರ್ದಿ ತಾಂಡಾ ಸ್ಥಿತಿ

ಆಳಂದ: ಕಸರನಾಯಕ ಪಾರ್ದಿ ತಾಂಡಾ ನಿವಾಸಿಗಳು ತಮ್ಮ ಸಂಕಷ್ಟಗಳನ್ನು ತೋಡಿಕೊಂಡರು.

ಆಳಂದ: ಸರ್ಕಾರಗಳು ಶಿಕ್ಷಣ, ಆರ್ಥಿಕ, ಉದ್ಯೋಗದಂತ ಸೇವೆಗಳ ಅನುಷ್ಠಾನ ಮಾಡಿ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಣೆ ಕಾಲಘಟದಲೂ ಇಲ್ಲೊಂದು ತಾಂಡಾದಲ್ಲಿ ಇಂದಿಗೂ ಹೇಳಿಕೊಳ್ಳಲು ಶಾಲೆಯಿಲ್ಲ. ಕುಡಿಯುವ ನೀರು ಸಾರಿಗೆ ಮತ್ತು ಖಾಸಗಿ ವಾಹನ ಸೌಕರ್ಯಗಳಿಲ್ಲದೆ ಜನ ಜೀವನ ಸ್ಥಿತಿ ನರಕಯಾತನೆ ಅನುಭವಿಸುವ ದುಸ್ಥಿತಿ ಮುಂದುವರೆದಿದೆ.
ಪಟ್ಟಣದ ಸಮೀಪದ ಕುಮಸ್ಸರ ನಾಯಕ ತಾಂಡಾವು ಮೂಲಭೂತ ಸೌಲಭ್ಯಗಳಿಗೂ ವಂಚಿತ, ಮಕ್ಕಳ ಭವಿಷ್ಯ ತೊಲಗುತ್ತಿದೆ, ಭಾರತವು ಸ್ವಾತಂತ್ರ್ಯ ಪಡೆದ 78 ವರ್ಷಗಳಾದರೂ, ಸಾಕ್ಷರತಾ ಹಕ್ಕು ಇನ್ನೂ ಹಲವಾರು ಗ್ರಾಮಗಳಿಗೆ ಕನಸು ಮಾತ್ರ. ಈ ಕುಮಸರ ನಾಯಕ ತಾಂಡಾದ ಪರಿಸ್ಥಿತಿ ಇದಕ್ಕೆ ದೊಡ್ಡ ಉದಾಹರಣೆ. ಇಲ್ಲಿನ 400ಕ್ಕೂ ಹೆಚ್ಚು ಜನಸಂಖ್ಯೆಯೊಂದಿಗೆ ಈ ಗ್ರಾಮ ಕಾನೂನುಬಾಹಿರ ಚಟುವಟಿಕೆಗಳಿಗೆ ಹೆಸರಾಗಿದ್ದರೂ, ಅವರ ದೊಡ್ಡ ಪಿಡುಗು ಶಿಕ್ಷಣ ಹಕ್ಕಿನ ತೊಡಕು ಉಂಟಾಗಿದೆ.
ಶಾಲೆಯೇ ಇಲ್ಲ–ಮಕ್ಕಳು ವ್ಯಾಸಂಗದಿಂದ ದೂರ:
ಈ ತಾಂಡಾದಲ್ಲಿರುವ 50ಕ್ಕೂ ಹೆಚ್ಚು ಮಕ್ಕಳಿದ್ದು ಇವರಿಗೆ ಶಾಲಾ ಶಿಕ್ಷಣ ದೊರೆಯುವ ಸಾಧ್ಯತೆ ಇಲ್ಲ. ಸಮೀಪದ ಶಾಲೆ ಮೂರು-ನಾಲ್ಕು ಕಿಲೋಮೀಟರ್ ದೂರದಲ್ಲಿದ್ದು, ಹೋಗಲು ರಸ್ತೆ ಇಲ್ಲ, ವಾಹನ ವ್ಯವಸ್ಥೆಯಿಲ್ಲ. ಸರ್ಕಾರದ ಶಿಕ್ಷಣ ಹಕ್ಕು ಕಾಯ್ದೆ ಪ್ರಕಾರ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶಾಲೆ ಇರಬೇಕು. ಆದರೆ ಸರ್ಕಾರದ ನಿರ್ಲಕ್ಷ್ಯ ಈ ಮಕ್ಕಳ ಭವಿಷ್ಯವನ್ನೇ ನಾಶಗೊಳಿಸುತ್ತಿದೆ ಎಂದು ಶಿಕ್ಷಣ ಪ್ರೇಮಿಗಳು ಅಳಲುತೊಡಿಕೊಂಡಿದ್ದಾರೆ.
ಅಂಗನವಾಡಿ ಕೇವಲ ಹೆಸರಿಗೆ: ಇಲ್ಲಿಯ ಏಕೈಕ ಸರಕಾರಿ ಸ್ಥಾಪನೆಯಾದ ಅಂಗನವಾಡಿ ಕೇಂದ್ರದಲ್ಲೂ ಮಕ್ಕಳು ಹೋಗುವುದಿಲ್ಲ. 52 ಮಕ್ಕಳು ದಾಖಲಾಗಿದ್ದರೂ, ಬಾಗಿಲು ತೆರೆದು ಕಾರ್ಯನಿರ್ವಹಿಸಿದ ದಿನವೇ ಇಲ್ಲ ಎಂಬ ಆರೋಪವಿದೆ. ಪೌಷ್ಠಿಕ ಆಹಾರ, ಆರೋಗ್ಯ ಸೇವೆಗಳು, ಬಾಲ್ಯ ವಿಕಾಸ ಎಲ್ಲವೂ ಇಲ್ಲ.
ಬಾಲ್ಯ ವಿವಾಹ, ಮಾದಕ ವ್ಯಸನ, ನಿರೀಕ್ಷೆಯಿಲ್ಲದ ಭವಿಷ್ಯ:
ಶಾಲೆಯ ಕೊರತೆಯ ಜೊತೆಗೆ ಈ ತಾಂಡಾದಲ್ಲಿ ಬಾಲ್ಯ ವಿವಾಹ ಮತ್ತು ಬಾಲಕಾರ್ಮಿಕತೆ ಜೋರಾಗಿದೆ. ಯುವಕರಿಗೆ ಕೆಲಸದ ಅನುಕೂಲವಿಲ್ಲ, ಅವರ ಜೀವನ ತಲುಪುತ್ತಿರುವ ಗುರಿಯೇ ಇಲ್ಲ. “ನಾವು ಶಿಕ್ಷಣ ಪಡೆಯದಿದ್ದ ಕಾರಣ ಈ ಪರಿಸ್ಥಿತಿಗೆ ಬಂದಿದ್ದೇವೆ, ನಮ್ಮ ಮುಂದಿನ ತಲೆಮಾರಿಗೂ ಇದೇ ದುಸ್ಥಿತಿ ಎದುರಾಗಬಾರದು” ಎಂದು ಪಾದಿ ತಾಂಡಾದ ಹಿರಿಯರು ಅಳಲು ತೋಡಿಕೊಳ್ಳುತ್ತಾರೆ.
ಎಲ್ಲೇ ಕಳ್ಳತನ ನಡೆದರು ಪೊಲೀಸರು ಪಾರ್ದಿ ತಾಂಡಾಗಳ ಜನರನ್ನೇ ಟಾರ್ಗೆಟಮಾಡುತ್ತಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿಲ್ಲದಿದ್ದರು ಸಾಮಾನ್ಯ ಪ್ರಕರಣ ದಾಖಲಿಸಿ ಬಿಡುತ್ತಾರೆ. ಹೀಗಾಗಿ ಬೆಳೆದ ಮಕ್ಕಳು ತಾಂಡಾ ತೊರೆದು ಮುಂಬೈ, ಪುಣೆ ಮತ್ತು ಬೆಂಗಳೂರಂತ ನಗರಗಳಿಗೆ ವಲಸೆ ಹೋಗಿ ದುಡಿಯುತ್ತಿದ್ದಾರೆ. ಆದರೂ ಪೊಲೀಸ್‍ರು ಮಾತ್ರ ಎಲ್ಲ ಕಳ್ಳತನ ನಡೆದರೆ ಇಂದಿಗೂ ನಮ್ಮನ್ನೇ ಟಾರ್ಗೆಟ ಮಾಡುತ್ತಿದ್ದಾರೆ. ಹೀಗೆ ಎಷ್ಟು ದಿನಗಳಂತ ಸಹಿಸಿಕೊಳ್ಳಬೇಕು ಎಂದು ಹಿರಿಯರು ಕಣ್ಣೀರುಡುತ್ತಿರುವುದು ಮನಕಲುಕುವಂತಾಗಿದೆ.
ಸಮಸ್ಯೆಗೆ ಪರಿಹಾರ ಬೇಕು!
ಶಿಕ್ಷಣ ಇಲಾಖೆಯು ತಕ್ಷಣವೇ ಈ ತಾಂಡಾದಲ್ಲಿ ಪ್ರಾಥಮಿಕ ಶಾಲೆ ತೆರೆಯುವ, ಮೂಲಭೂತ ಸೌಲಭ್ಯ ಒದಗಿಸುವ ಕ್ರಮ ಕೈಗೊಳ್ಳಬೇಕು. ಬಾಲ್ಯ ವಿವಾಹ ತಡೆ, ಮಾದಕ ವ್ಯಸನ ನಿಗ್ರಹ, ಸರ್ಕಾರಿ ಯೋಜನೆಗಳ ಅನುμÁ್ಠನ ಇಲ್ಲಿನ ಬದುಕನ್ನು ಬೆಳಕಿಗೆ ತರಬಹುದು. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೂಡಲೇ ಇದಕ್ಕೆ ಸ್ಪಂದಿಸಬೇಕು ಎಂಬ ಕೂಗು ಕೇಳಿಬರಲಾರಂಭಿಸಿದೆ. ಈ ತಾಂಡಾದ ಜನತೆ “ನಮ್ಮ ಹಕ್ಕಿನ ಶಿಕ್ಷಣ ನಮ್ಮ ಊರಿಗೇ ಬರಬೇಕು” ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರ ಕಣ್ಣು ತೆರೆದು ಸ್ಪಂದಿಸುವ ಸಮಯ ಇದಾಗಿದೆ.
ನಿವೇಶನ ಹಕ್ಕು ಪತ್ರಬೇಕಿದೆ:
ಗ್ರಾಪಂನಿಂದ ಈ ಹಿಂದೆ ಕಮಸರ್ ನಾಯಕ ಪಾರ್ದಿ ತಾಂಡಾಕ್ಕೆ ಮನೆಗಳು ನೀಡಿದ್ದಾರೆ.. ಈಗಲೂ ಮೂರು ಮನೆ ನೀಡಿದ್ದೇವೆ. ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನೀಡಲು ಸರ್ವೆ ಮಾಡಲಾಗುತ್ತಿದೆ. ಆದರೆ ಫಲಾನುಭವಿಗಳ ನಿವೇಶನದ ಹಕ್ಕು ಪತ್ರವಿಲ್ಲದಕ್ಕೆ ತಾಂತ್ರಕ ತೊಂದರೆ ಎದುರಾಗಿದೆ. ವಾಸಿಸುವ ಜಮೀನಿನ ಹಕ್ಕು ಪತ್ರವೇ ಇಲ್ಲ. ನಿವೇಶನ ತಕರಾರು ನಿವಾರಣೆಯಾಗಬೇಕು. ಕಿರು ನೀರು ಸರಬರಾಜು ಕೈಗೊಳ್ಳಲಾಗುತ್ತಿದೆ. ಈ ತಾಂಡಾದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯಿಲ್ಲ. 3 ಕಿ.ಮೀ ದೂರದ ಹನುಮಾನನಗರ ತಾಂಡಾಕ್ಕೆ ನಡೆದುಹೋಗಬೇಕು. ಇದಕ್ಕು ದಾರಿಯಿಲ್ಲ. ಶಾಲೆಯ ಅವಶ್ಯಕತೆ ಇದೆ ಎಂದು ವ್ಯಾಪ್ತಿಯ ಹಳ್ಳಿಸಲಗರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಗೋವಿಂದ ಮಂಡ್ಲೆ ಅವರು ತಿಳಿಸಿದ್ದಾರೆ.
ಹಿಂದೊಮ್ಮೆ ಅದ್ಭುತ ಪ್ರಯತ್ನ: ಪಾರ್ದಿ ತಾಂಡಾಗಳ ಅಭಿವೃದ್ಧಿ ಯತ್ನ ಅಷ್ಟರಲ್ಲೇ ನಿಂತಿತೇ?
ತಾಲೂಕಿನ ಐದಾರು ಪಾರ್ದಿ ತಾಂಡಾಗಳ ಜನಜೀವನದ ಸಮಗ್ರ ಸುಧಾರಣೆಗೆ ಎರಡು ದಶಕಗಳ ಹಿಂದೆ ಮಹತ್ವಾಕಾಂಕ್ಷಿ ಪ್ರಯತ್ನ ನಡೆದಿತ್ತು. ಪಟ್ಟಣದ ಎ.ವಿ. ಪಾಟೀಲ ಕಲ್ಯಾಣ ಮಂಟಪದಲ್ಲಿ ತಾಲೂಕು ಆಡಳಿತ ಆಶ್ರಯದಲ್ಲಿ ಪಾರ್ದಿ ಜನ ಜಾಗೃತಿ ಬೃಹತ್ ಸಮಾವೇಶವನ್ನು ಸ್ಥಳೀಯ ಪತ್ರಕರ್ತರ ಸಹಕಾರದಿಂದ ಆಯೋಜಿಸಲಾಗಿತ್ತು.
ಈ ಸಮಾರಂಭದಲ್ಲಿ ಕಂದಾಯ ಇಲಾಖೆಯ ಸಹಾಯದಿಂದ ಅಂದಿನ ತಹಸೀಲ್ದಾರ ರಾಜಾ ಪಟೇಲ್ ಅವರು ಅಂಗವಿಕಲ, ವಿಧವೆ ಮತ್ತು ವೃದ್ಧಾಪ್ಯ ಪಿಂಚಣಿಯಂತೆ ಹಲವಾರು ಸರ್ಕಾರೀ ಸೌಲಭ್ಯಗಳನ್ನು ತಕ್ಷಣವೇ ವಿತರಿಸಿದರು. ಅರಣ್ಯ ಇಲಾಖೆ ಸಸಿಗಳನ್ನು ವಿತರಿಸಿ ಹಸಿರಿನ ಪರಿವೇಶನಕ್ಕೆ ಪೆÇ್ರೀತ್ಸಾಹ ನೀಡಿತು.
ಕಾರ್ಯಕ್ರಮದಲ್ಲಿ ಅಂದಿನ ಜಿಲ್ಲಾ ಎಸ್‍ಪಿ ಡಾ. ರಾಮಚಂದ್ರ ರಾವ್ ಅವರು ಪಾರ್ದಿ ಮಹಿಳೆಯರಿಗೆ ತಾವು ಖರೀದಿಸಿದ ಸೀರೆಗಳನ್ನು ವಿತರಿಸಿ ಅಭಿವೃದ್ಧಿಗೆ ಬೆಂಬಲ ವ್ಯಕ್ತಪಡಿಸಿದರು. ಪೆÇಲೀಸ್ ಇಲಾಖೆ ಅಂದಿನ ಡಿವೈಎಸ್‍ಪಿ ಅವರ ನೇತೃತ್ವದಲ್ಲಿ ಪಾರ್ದಿ ತಾಂಡಾಗಳ ಜನರ ಸಮಾವೇಶಕ್ಕೆ ಉಚಿತ ವಾಹನ ವ್ಯವಸ್ಥೆ ಮಾಡಿತ್ತು.
ಈ ಅದ್ಧೂರಿ ಸಮಾರಂಭದಲ್ಲಿ ಸ್ಥಳೀಯ ಮೂವರು ನ್ಯಾಯಾಧೀಶರು, ಶಾಸಕರಾದ ಬಿ.ಆರ್. ಪಾಟೀಲ, ಗ್ರಾಮೀಣ ಕ್ಷೇತ್ರ ಶಾಸಕರಾಗಿದ್ದ ರೇವುನಾಯಕ ಬೆಳಮಗಿ ಹಾಗೂ ಹಲವು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಭಾಗವಹಿಸಿದ್ದರು. ತಾಂಡಾಗಳ ಅಭಿವೃದ್ಧಿಗೆ ಸರ್ಕಾರೀ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಹಂಚುವುದಾಗಿ ಅಧಿಕಾರಿಗಳು ಭರವಸೆ ನೀಡಿದರು. ಆದಾಗ್ಯೂ, ಈ ಪ್ರಯತ್ನಗಳು ಕೇವಲ ಸಂಕಲ್ಪಪತ್ರಗಳಲ್ಲೇ ಉಳಿದುಕೊಂಡವು. ಅಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪಾರ್ದಿ ತಾಂಡಾಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಪತ್ರಕರ್ತರಿಂದ ಮನವಿ ಬರೆಯಲಾಗಿತು. ಆದರೆ, ಅಧಿಕಾರಿಗಳ ವರ್ಗಾವಣೆ ಮತ್ತು ಸಮರ್ಥ ನಿಯಂತ್ರಣದ ಕೊರತೆಯಿಂದ ಈ ಯೋಜನೆಗಳು ಅನುμÁ್ಠನಕ್ಕೇ ತುಕ್ಕುಹಿಡಿದುಕೊಂಡಿತು. ಈಗ, ಇಂತಹ ಮಹತ್ವಾಕಾಂಕ್ಷಿ ಯೋಜನೆಗಳು ಪುನರಾರಂಭಗೊಳ್ಳಬೇಕಾದ ಅಗತ್ಯವಿದೆ. ಆಡಳಿತ ವ್ಯವಸ್ಥೆಯು ಮತ್ತೊಮ್ಮೆ ಗಮನಹರಿಸಿ ಪಾರ್ದಿ ತಾಂಡಾಗಳ ಸಮಗ್ರ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಬೇಕಾಗಿದೆ ಎಂಬ ಕೂಗು ಕೇಳಿಬರುತ್ತಿದೆ.

Leave A Reply

Your email address will not be published.