Shubhashaya News

ಗುರುವಿನ ಸನ್ಮಾರ್ಗವು ಬದುಕಿನ ಮೋಕ್ಷ ಪ್ರಾಪ್ತಿಗೆ ವರದಾನ: ಡಾ. ಚನ್ನಬಸವ ಶ್ರೀ

ಹತ್ತರಗಾ ಮಠದಲ್ಲಿ ಮಹಾಂತ ಶ್ರೀಗೆ ಗುರುವಂದನಾ ಅರ್ಪಣೆ

ಆಳಂದ: ಹತ್ತರಗಾ ಗ್ರಾಮದಲ್ಲಿನ ಶ್ರೀ ಮಹಾಂತೇಶ್ವರ ಮಠದಲ್ಲಿ ಪೀಠಾಧಿಪತಿ ಮಹಾಂತಲಿಂಗ ಶಿವಾಚಾರ್ಯರಿಗೆ ಆಯೋಜಿಸಿದ್ದ ಗುರುವಂದನಾ ಧರ್ಮ ಸಭೆಯಲ್ಲಿ ತುಲಾಭಾರವನ್ನು ಭಕ್ತಾದಿಗಳು ನೆರವೇರಿಸಿದರು. ಡಾ. ಅಭಿನವ ಚನ್ನಬಸವ ಶ್ರೀ, ರಾಜೇಂದ್ರ ಹಂದ್ರಾಳ, ಬಸವರಾಜ ಬಿರಾದಾರ ಮತ್ತಿತರು ಇದ್ದರು.

ಆಳಂದ: ಲೌಕಿಕ ಬದುಕನಲ್ಲಿದ್ದುಕೊಂಡು ಅಲೌಕಿಕ ಮಾರ್ಗದ ಮೋಕ್ಷ ಪ್ರಾಪ್ತಿಯನ್ನು ಸಂಪಾದಿಸಲು ಗುರುವಿನ ಸನ್ಮಾರ್ಗವು ಗುರು ಉಪಾಸಕರಿಗೆ ವರದಾನವಾಗಲಿದೆ ಎಂದು ಆಳಂದ, ನಂದವಾಡಗಿ, ಜಾಲವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ನೂತನ ಪೀಠಾಧಿಪತಿ ಡಾ. ಅಭಿನವ ಚನ್ನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕೋತನ ಹಿಪ್ಪರಗಾ ಬಳಿಯ ಹತ್ತರಗಾ ಗ್ರಾಮದಲ್ಲಿನ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ತಮ್ಮ ಶಾಖಾ ಮಠದಲ್ಲಿ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳಿಗೆ ಹಮ್ಮಿಕೊಂಡ ಗುರುವಂದನಾ ಧಾರ್ಮಿಕ ಸಮಾರಂಭ ಹಾಗೂ ತುಲಾಭಾರ ಸೇವೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾನ ದಾರ್ಶನಿಕರು ಮತ್ತು ಗುರುಗಳು ನಮ್ಮ ಜೀವನದಲ್ಲಿ ಅತ್ಯಂತ ಮುಖ್ಯ ಪಾತ್ರವನ್ನು ವಹಿಸುತ್ತಾರೆ. ಅವರು ನಮ್ಮ ಬದುಕಿನಲ್ಲಿ ಆಗುವ ಅನೇಕ ಕಷ್ಟಗಳನ್ನು ದೂರ ಮಾಡುವ ಮೂಲಕ ನಮಗೆ ಸದ್ಗತಿ ಮತ್ತು ಶಾಂತಿಗೆ ತಪಸು ಪೂಜೆಯನ್ನು ನೆರವೇರಿಸುತ್ತಾರೆ ಎಂದರು.
ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳು ಜಗತ್ತನ್ನು ಸೃಷ್ಟಿಸುತ್ತಾರೆ, ಈ ಭೂಮಿಯ ಮೇಲೆ ಈ ತ್ರಿಮೂರ್ತಿಗಳ ರೂಪದಲ್ಲಿ ಶ್ರೀ ಮಹಾಂತಲಿಂಗ ಶಿವಾಚಾರ್ಯ ಗುರುಗಳು ತಮ್ಮ ಜೀವನವನ್ನು ತ್ರೀಕಾಲ ಇಷ್ಟಲಿಂಗಪೂಜೆಗೆ ಸಮರ್ಪಿಸಿದವರು, ಮತ್ತು ತಮ್ಮ ಶಕ್ತಿಯ ಮೂಲಕ ನಮ್ಮ ಹಿತಚಿಂತನೆಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಪ್ರತಿ ದಿನವೂ ನಾವು ನಮ್ಮದೊಂದು ಕಾರ್ಯ ಮಾಡುವಾಗ, ಗುರುಗಳ ಅನುಗ್ರಹದಿಂದ ನಮ್ಮ ಜೀವನ ಸುಖಮಯವಾಗಿರುತ್ತದೆ. ಅವರು ಧ್ಯಾನ ಮತ್ತು ಪ್ರಾರ್ಥನೆಗಳ ಮೂಲಕ ನಮ್ಮ ಪರವಾಗಿ ಭಗವಂತನ ದಯೆಯಿಗಾಗಿ ಪ್ರಾರ್ಥಿಸುತ್ತಾರೆ ಇದಕ್ಕಾಗಿಯ ಸಮಾಜದಲ್ಲಿ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಗುರುವಿಗೆ ಉನ್ನತ ಸ್ಥಾನವನ್ನು ನೀಡಲಾಗಿದೆ. ಮುಂದೆ ಗುರಿ, ಹಿಂದೆ ಗುರುಗಳಿದ್ದರೆ ಏನೆಯಲ್ಲ ಸಾಧನೆ ಸಾಧ್ಯವಿದೆ. “ತುಂಬಾ ಬಾರಿಯಾದ ಕಷ್ಟಗಳನ್ನು ಗುರುಗಳಿಗೆ ತಲುಪಿಸಲು ನಾವು ನಮ್ಮ ಭಾರವನ್ನು ತುಲಾಭಾರದ ಮೂಲಕ ಹೊತ್ತುಕೊಳ್ಳುತ್ತೇವೆ” ಎಂದು ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಅಭಿಪ್ರಾಯಪಟ್ಟರು.
ಗುರುವಂದನೆ ಹಾಗೂ ಗ್ರಾಮದ ಬಸವರಾಜ್ ಬಿರಾದಾರ ಕುಟುಂಬವು ಹಮ್ಮಿಕೊಂಡ ತುಲಾಭಾರ ಸೇವೆಯನ್ನು ಸ್ವೀಕರಿಸಿ ಆಶೀರ್ವಚನ ನೀಡಿದ ಹಿರಿಯ ಪೀಠಾಧಿಪತಿ ಶ್ರೀ ಮಹಾಂತಲಿಂಗ್ ಶಿವಾಚಾರ್ಯರು ಭಕ್ತರನ್ನುದ್ದೇಶಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಬಸಯ್ಯಾ ಶಾಸ್ತ್ರಿ ನಂದವಾಡಗಿ, ಹಿರಿಯ ಪತ್ರಕರ್ತ ಮಹಾದೇವ ವಡಗಾಂವ ಅವರು ಮಾತನಾಡಿದರು.
ಶರಣಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ರಾಜೇಂದ್ರ ಆರ್. ಹಂದ್ರಾಳ, ಬಸಯ್ಯಾ ಮಠಪತಿ ಕೋತನಹಿಪ್ಪರಗಾ, ಬಸವರಾಜ ಸ್ವಾಮಿ, ಮಲ್ಲಿನಾಥ ಬೇಡಜಿರ್ಗೆ, ಸುದರ್ಶನ ಪಾರಾಣೆ, ಶ್ರೀಮಂತ ಮನಗೊಳ, ಸಿದ್ರಾಮಪ್ಪ ಫಕಿರಗೊಳ, ರವಿಂದ್ರ ಬಿರಾದಾರ, ರಮೇಶ ಬಳಬಟಿ ಮತ್ತಿತರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಗ್ರಾಮ ಸೇರಿದಂತೆ ನೆರೆ ಹೊರೆಯ ಗ್ರಾಮಗಳ ಭಕ್ತಾದಿಗಳು ಪಾಳ್ಗೊಂಡಿದ್ದರು. ಕಲಾವಿದ ಜಮಾದಾರ ಅವರು ಭಕ್ತಿ ಗೀತೆಗಳು ಹಾಡಿದರು.

Leave A Reply

Your email address will not be published.