Shubhashaya News

ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಭಗವಂತರಾಯ್ ಕಾಣಿಕೆ

ಆಳಂದ: ತಡಕಲ್ ಮೋರಾರ್ಜಿ ದೇಸಾಯಿ ವಸತಿ ಶಾಲೆಗೆ ಹಳೆಯ ವಿದ್ಯಾರ್ಥಿ ಭಗವಂತರಾಯ ಅವರು ಕಂಪ್ಯೂಟರ್ ಮತ್ತು ಸಂಗೀತ ಸಾಮಗ್ರಿ ಖರೀದಿಗೆ ನೀಡಿದ ಸಹಾಯಧನ ಪ್ರಾಚಾರ್ಯ ಭೌರಮ್ಮಾ ಬಿರಾದಾರ, ಸಂಗೀತ ಶಿಕ್ಷಕ ಶಿವಶರಣಪ್ಪ ಪೂಜಾರಿ ಸ್ವೀಕರಿಸಿ ಪ್ರತಿಯಾಗಿ ಧಾನಿಗೆ ಗೌರವಿಸಿದರು.

ಆಳಂದ: ತಾಲೂಕು ತಡಕಲ್ ಗ್ರಾಮದ ಮೋರಾರ್ಜಿ ದೇಸಾಯಿ ವಸತಿ ಶಾಲೆಯ 2017ನೇ ಸಾಲಿನ ಹಳೆ ವಿದ್ಯಾರ್ಥಿ ಕು. ಭಗವಂತರಾಯ್ ಇಂದು ತನ್ನ ಕಿರು ಕಾಣಿಕೆ ಮೂಲಕ ಶಾಲೆಗೆ ಉದಾಹರಣೆಯಾದರು.
ಅವರು ಸುಮಾರು 70,000 ರಿಂದ 80,000 ರೂಪಾಯಿಯ ವೆಚ್ಚದಲ್ಲಿ ಎರಡು ಕಂಪ್ಯೂಟರ್ ಗಳನ್ನು ನೀಡಿದ್ದು, ಜೊತೆಗೆ ಶಾಲಾ ವಿದ್ಯಾರ್ಥಿಗಳ ಸಂಗೀತಾಭಿರುಚಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 10,000 ರೂಪಾಯಿ ದೇಣಿಗೆಯನ್ನು ಸಂಗೀತ ವಾದ್ಯಪರಿಕರಗಳ ಖರೀದಿಗೆ ನೀಡಿದರು.
ಇದರ ಮೂಲಕ ಅವರು ಪ್ರಸ್ತುತ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ, ಹಳೆ ವಿದ್ಯಾರ್ಥಿಗಳ ಶೈಕ್ಷಣಿಕ ಸಂಸ್ಥೆಗಳ ಬಗ್ಗೆ ಇರುವ ಆದರವನ್ನು ಪ್ರತಿಬಿಂಬಿಸಿದ್ದಾರೆ.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಭವರಮ್ಮಾ ಬಿರಾದಾರ, ಸಂಗೀತ ಶಿಕ್ಷಕ ಶಿವಶರಣಪ್ಪ ಪೂಜಾರಿ, ಶಿಕ್ಷಕ ಬಸವರಾಜ ಸಲಗರ, ಮಂಗಲಾ ಕಲಶೆಟ್ಟಿ, ವೀರಣ್ಣಾ ಕೊರಳ್ಳಿ, ದಿಗಂಬರ ದಾಸವಾಳ, ಅನೀಲ ಸುತಾರ, ರೇವಣಸಿದ್ಧಪ್ಪ, ರೂಪಾ ಪೋದ್ದಾರ, ಜಯಲಕ್ಷ್ಮೀ ಕಣಮಸ್, ವಿವೇಕಾನಂದ ಮಠ, ಕಿರಣ ಪಾಟೀಲ, ಮಹ್ಮದ್ ಶೇಖ ಇತರರು ಉಪಸ್ಥತರಿದ್ದು, ಶಾಲೆಗೆ ಕಾಣಿಕ ನೀಡಿದ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಿದರು.

Leave A Reply

Your email address will not be published.