ಆಳಂದ: ಖಂಡಾಳ ಸರ್ಕಾರಿ ಪ್ರೌಢಶಾಲೆ 10ನೇ ವಿದ್ಯಾರ್ಥಿನಿ ಶಿವಾನಿ ಪ್ರತಿಭಾ ಕಾರಂಜಿ ರಾಜ್ಯಮಟ್ಟಕ್ಕೆ ಆಯ್ಕೆ ಹಿನ್ನೆಲೆಯಲ್ಲಿ ಶಾಲೆಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಆಳಂದ: ತಾಲೂಕಿನ ಖಂಡಾಳ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಶಿವಾನಿ ಧನರಾಜ ಕನಗರೆ ಪ್ರತಿಭಾ ಕಾರಂಜಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಕೀರ್ತಿ ತಂದಿದ್ದಾಳೆ.
ಈಚೆಗೆ ಕಲಬುರಗಿಯ ಸೆಂಟಮೇರಿ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ 8 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಶಿವಾನಿ, ಇದರಿಂದಾಗಿ ಜನವರಿ 27ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಈ ಸಾಧನೆಯಿಗಾಗಿ ಶಾಲೆಯಲ್ಲಿ ಪ್ರಭಾರಿ ಮುಖ್ಯಗುರು ಶ್ರೀನಾಥ್ ನಾಗೂರ ಅವರು ಶಿವಾನಿಗೆ ಸನ್ಮಾನಿಸಿದರು. ಈ ವೇಳೆ ಅತಿಥಿ ಶಿಕ್ಷಕರಾದ ದಸ್ತಗಿರ, ಸೋಮಶೇಖರ್, ದತ್ತಾತ್ರೇಯ, ರೇಣುಕಾ, ರಾಜಕುಮಾರ್, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿ ಗ್ರಾಮಸ್ಥರು ಹರ್ಷವನ್ನು ವ್ಯಕ್ತಪಡಿಸಿದರು.