Shubhashaya News

ಬಸವ ಪ್ರತಿಮೆ ಅವಮಾನ ಖಂಡಿಸಿ ಆಳಂದನಲ್ಲಿ ಪ್ರತಿಭಟನೆ

ಆಳಂದ: ದಾಡಗಿ ಕ್ರಾಸ್ ಬಳಿಯ ಬಸವ ಪ್ರತಿಮೆಗೆ ಅವಮಾನ ಖಂಡಿಸಿ ಬಸವ ಸೇನೆ ನೇತೃತ್ವದಲ್ಲಿ ಅಭಿಮಾನಿಗಳು ಪ್ರತಿಭಟನೆ ನಡೆಸಿ ಗ್ರೇಡ್-2ತಹಸೀಲ್ದಾರ ಬಿ.ಜಿ.ಕುದರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಆಳಂದ: ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ದಾಡಗಿ ಕ್ರಾಸಬಳಿಯು ಸಾಂಸ್ಕøತಿಕ ನಾಯಕ ಹಾಗೂ ವಿಶ್ವಗುರು ಬಸವಣನವರ ಮೂರ್ತಿಗೆ ಅವಮಾನ ಮಾಡಿದ ಘಟನೆಗೆ ಸಂಬಂಧಿಸಿದಂತೆ, ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಬಸವಸೇನೆ ನೇತೃತ್ವದಲ್ಲಿ ಬಸವಾಭಿಮಾನಿಗಳು ಬೃಹತ್ ಪ್ರತಿಭಟನೆ ಕೈಗೊಂಡು ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ಗ್ರಾಮದೇವತಾ ಹನುಮಾನ ದೇವಸ್ಥಾನದಿಂದ ಶ್ರೀರಾಮ ಮಾರುಕಟ್ಟೆ ಮೂಲಕ ಬಸ್ ನಿಲ್ದಾಣವರೆಗೆ ಬಸವ ಸೇನೆ ಸಂಸ್ಥಾಪಕ ಅಧ್ಯಕ್ಷ, ಪುರಸಭೆ ಮಾಜಿ ಸದಸ್ಯ ಲಿಂಗರಾಜ ಎಂ. ಪಾಟೀಲ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಮೆರವಣಿಗೆ ಮೂಲಕ ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸಾಮಾಜಿಕ ಸಮಾನತೆ ಸಾರಿದ ಹಾಗೂ ಇಂದಿನ ಪಾರ್ಲೆಮಿಂಟ್ ಮಾದರಿಯಲ್ಲಿ 12ನೇ ಶತಮಾನದಲ್ಲಿ ವಿಶ್ವಕ್ಕೆ ಅನುಭವ ಮಂಟಪದ ಮೂಲಕ ಜಾತ್ಯತೀತೆ ಸೌಹಾರ್ದ, ಸಮಾನತೆ ಕಾಯಕ ದಾಸೋಹವನ್ನು ನುಡಿ ಮತ್ತು ನಡೆಯ ಮೂಲಕ ಸಮಾಜಕ್ಕೆ ಸಂದೇಶ ಕೊಟ್ಟಿರುವ ಇಂಥ ಮಹಾನ್ ನಾಯಕರ ಅವಮಾನಕರ ಘಟನೆಗಳು ಮರುಕಳಿಸುತ್ತಿದ್ದ, ಇದನ್ನು ತಡೆಗಟ್ಟಲು ಮಹಾತ್ಮರ ಪ್ರತಿಮೆಗಳ ಬಳಿ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸುವ ಮೂಲಕ ಕಟ್ಟುನಿಟ್ಟಿನ ಕ್ರಮವಹಿಸಬೇಕು ಎಂದು ಪ್ರತಿಭಟನಾ ನಿರತರು ಒತ್ತಾಯಿಸಿದರು.
ಜೇವರ್ಗಿ ಪಟ್ಟಣದ ಓಂ ನಗರದಲ್ಲಿ 14 ವರ್ಷದ ಮುಗ್ಧ ಬಾಲಕಿ ಕು. ಮಹಾಲಕ್ಷ್ಮಿ ತನ್ನ ಮೇಲೆ ದೌರ್ಜನ್ಯವನ್ನು ತಡೆಯಲು ಸಾಧ್ಯವಾಗದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಘಾತಕಾರಿಯಾಗಿದೆ. ಈ ದುಷ್ಕೃತ್ಯದಲ್ಲಿ ಶಂಕಿತನಾದ ಮಹಿಬೂಬನ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಕಠಿಣ ಶಿಕ್ಷೆ ಮತ್ತು ಗಲ್ಲು ಶಿಕ್ಷೆ ನೀಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಸವ ಸೇನೆ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಪಾಟೀಲ, ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಶರಣಬಸಪ್ಪ ಪಾಟೀಲ, ಉಪಾಧ್ಯಕ್ಷ ಶ್ರೀಶೈಲ ಖಜೂರಿ, ನಿರ್ದೇಶಕರಾದ ಗುರು ಪಾಟೀಲ, ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ಆನಂದ ಪಾಟೀಲ, ಬಾಬಾಸಾಹೇಬ ವಿ. ಪಾಟೀಲ, ನ್ಯಾಯವಾದಿ ದಿಲೀಪ ಕ್ಷೀರಸಾಗರ, ದಲಿತ ಸೇನೆ ಆರ್. ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ಬೋಳಣಿ, ಶ್ರೀರಾಮ ಸೇನೆ ಅಧ್ಯಕ್ಷ ಈರಣ್ಣ ಹತ್ತರಕಿ, ಪಿಆರ್‍ಪಿ ಅಧ್ಯಕ್ಷ ಪ್ರಕಾಶ ಮೂಲಭಾರತಿ, ಆದಿನಾಥ ಹೀರಾ, ಕಲ್ಲಪ್ಪ ಎಸ್. ಹತ್ತರಕಿ ಸೇರಿದಂತೆ ಅನೇಕರು ಇದ್ದರು.
ಸ್ಥಳಕ್ಕೆ ಆಗಮಿಸಿದ್ದ ಗ್ರೇಡ್-2ತಹಸೀಲ್ದಾರ ಬಿ.ಜಿ. ಕುದರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಯಿತು.

Leave A Reply

Your email address will not be published.