Shubhashaya News

ನಿಧನ ವಾರ್ತೆ : ಲಕ್ಷ್ಮೀಕಾಂತ ಕುಲಕರ್ಣಿ

ಕಲಬುರಗಿ: ಮಾರ್ಚ್ 30:;
ನಗರದ ಮಾಕಾ ಲೇಔಟ್ ನಿವಾಸಿ ಲಕ್ಷ್ಮೀಕಾಂತ ಕುಲಕರ್ಣಿ ಸುಲೇಪೇಟ ಅವರು ಮಾರ್ಚ್ 30ರಂದು (ಮಂಗಳವಾರ) ಸಂಜೆ 4-30ರ ಸುಮಾರಿಗೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 66 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಲಕ್ಷ್ಮೀಕಾಂತ ಕುಲಕರ್ಣಿ ಅವರು ರಾಜ್ಯ ಲೆಕ್ಕಪರಿಶೋಧನಾ ಇಲಾಖೆಯಲ್ಲಿ ಎಫ್‍ಡಿಎ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.
ಮೃತರ ಅಂತ್ಯಕ್ರಿಯೆಯನ್ನು ಮಾ. 31ರಂದು (ಬುಧವಾರ) ಬೆಳಿಗ್ಗೆ 9 ಗಂಟೆಗೆ ನಗರದ ಜೇವರ್ಗಿ ರಸ್ತೆಯ ಚಿತ್ತಾರಿ ಸಾ ಮಿಲ್ ಬಳಿಯ ಚಿತಾಗಾರದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.

Leave A Reply

Your email address will not be published.