ಕಲಬುರಗಿ: ರಾಜ್ಯಾದ್ಯಂತ ಕರೋನಾ ವೈರಸ್ ಎರಡನೇ ಅಲೆಯು ಹೆಚ್ಚುತ್ತಿದ್ದು ಇದನ್ನು ಹತೋಟಿಗೆ ತರಲು ಮುಖ್ಯಮಂತ್ರಿಗಳು ಉನ್ನತ ಮಟ್ಟದ ಸಭೆ ಕರೆದು ಕೂಡಲೇ ಲಾಕ್ ಡೌನ್ ಗೆ ರಾಜ್ಯ ಸರಕಾರ ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಈಗಾಗಲೇ ಹತೋಟಿಗೆ ಬಂದಿದ್ದ ಕರೋನಾವೈರಸ್ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇರುವುದರಿಂದ ಇದು ದಿನದಿಂದ ದಿನಕ್ಕೆ ಹೆಚ್ಚಿಗೆ ಆಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸರಕಾರ ಕಟ್ಟುನಿಟ್ಟಿನ ನಿಯಮಗಳನ್ನು ಸಾರ್ವಜನಿಕ ವಲಯದಲ್ಲಿ ಏರುವುದರೊಂದಿಗೆ ಜಾತ್ರೆ, ಹಬ್ಬ- ಹರಿದಿನಗಳನ್ನು ನಿಷೇಧಿಸಬೇಕು.ಯಾವುದೇ ಸಭೆ ಸಮಾರಂಭಗಳಿಗೆ ಅನುಮತಿಯನ್ನು ನೀಡಬಾರದು.ಖಾಸಗಿ ಶಾಲೆಗಳು ಕರೋನಾ ನಿಯಮಗಳನ್ನು ಗಾಳಿಗೆ ತೂರಿ ಮಕ್ಕಳಿಗೆ ಪಾಠವನ್ನು ಹೇಳಿಕೊಡುತ್ತಿದ್ದಾರೆ. ಈ ಖಾಸಗಿ ಶಾಲೆಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು .ಈಗಾಗಲೇ ಮದುವೆ ಮುಂಜಿ ಸಮಾರಂಭಗಳಲ್ಲಿ 500 ಕ್ಕಿಂತ ಕಡಿಮೆ ಜನರು ಭಾಗವಹಿಸಬೇಕೆಂಬ ನಿಯಮವಿದೆ
ಆದರೆ ನಿಯಮದಂತೆ ಯಾರೂ ಕೂಡ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಿಲ್ಲ , ಮಾಸ್ಕ್ ಧರಿಸುವದಿಲ್ಲ. ಆದ್ದರಿಂದ ಕರೋನಾ ಇಡೀ ರಾಜ್ಯಾದ್ಯಂತ ಮತ್ತೆ ಹಬ್ಬ ತೊಡಗಿದರೆ ನಮಗೆ ತೊಂದರೆ. ಆದ್ದರಿಂದ ಮುಖ್ಯಮಂತ್ರಿಗಳು ಹಾಗೂ ವೈದ್ಯ ಶಿಕ್ಷಣ ಸಚಿವರು ಸಮಾಲೋಚಿಸಿ ಉನ್ನತ ಮಟ್ಟದ ಸಭೆಯನ್ನು ಕರೆದು ಕೂಡಲೇ ರಾಜ್ಯಾದಂತ ಲಾಕ್ ಡೌನ್ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.