Shubhashaya News

ಬಿ.ವೈ. ವಿಜಯೇಂದ್ರ ಜನ್ಮದಿನ ಶಾಲಾ ಮಕ್ಕಳಿಗೆ ಪೆನ್, ನೋಟ್‌ಬುಕ್ ವಿತರಣೆ

ಕಲಬುರಗಿ: ಕರುನಾಡ ಕಂಡ ಅಪರೂಪದ ರಾಜಕಾರಣಿ ಬಡವರ ಬಂಧು, ರೈತರ ಆಶಾಕಿರಣವಾದ ಬಿ.ಎಸ್. ಯಡಿಯೂರಪ್ಪರವರ ಸುಪುತ್ರರಾದ ಹಾಗೂ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ರವರ 51ನೇ ಜನ್ಮದಿನವನ್ನು ಸರಕಾರಿ ಪ್ರಾಥಮಿಕ ಶಾಲೆ ಕುಸನೂರಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ಉಚಿತ ನೋಟಬುಕ್ ಮತ್ತು ಪೆನ್‌ಗಳನ್ನು ಶ್ರೀ ಬಿ.ವೈ. ವಿಜಯೇಂದ್ರ ಅಣ್ಣಾಜಿ ಅಭಿಮಾನಿಗಳ ಬಳಗ ಕುಸನೂರ ವತಿಯಿಂದ ವಿತರಣೆ ಮಾಡಿದರು.ಈ ಸಂದರ್ಭದಲ್ಲಿ ಕಮಲಾಪುರ ಗ್ರಾಮೀಣ ಬಿ.ಜೆ.ಪಿ ಅಧ್ಯಕ್ಷ ಗಂಗಪ್ಪಗೌಡ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಜಯೇಂದ್ರ ಅಣ್ಣನವರ ಕಾರ್ಯವೈಖರಿ, ನೇರನುಡಿ, ದಿಟ್ಟ ಹೋರಾಟಗಳ ಬಗ್ಗೆ ಮೆಚ್ಚುಗೆಯ ಮಾತನಾಡಿದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ರೇವಸಿದ್ದಯ್ಯ ಮಠಪತಿ,ಶಿವಪುತ್ರ ಮುಗಳನಗಾಂವ, ಶರಣು ಹಾಗರಗುಂಡಗಿ, ಸಿದ್ದಪ್ಪ ಪೂಜಾರಿ, ಮಲ್ಲಿಕಾರ್ಜುನ ಸಾಹುಕಾರ ಸಣ್ಣೂರ, ಡಾ, ಅಶೋಕ ಬಬಲಾದ, ರಮೇಶ ತೆಗ್ಗಿನಮನಿ, ಕಲಾವಿದ ವಿಶ್ವನಾಥ ತೊಟ್ನಳ್ಳಿ ಉಪಸ್ಥಿತರಿದ್ದರು.

Leave A Reply

Your email address will not be published.