Shubhashaya News

ರಾಜ್ಯದ ಯಜಮಾನಿಯರಿಗೆ ದೀಪಾವಳಿ ಬಂಪರ್ ಗಿಫ್ಟ್ : ಗೃಹಲಕ್ಷ್ಮಿಯ 3 ಕಂತಿನ 6 ಸಾವಿರ ರೂ.ಹಣ ಬಿಡುಗಡೆ!

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯ ಫಲಾನುಭವಿಗಳಿಗೆ ಹಬ್ಬದ ಶುಭ ಸುದ್ದಿ ಸಿಕ್ಕಿದ್ದು, 34, 35 ಹಾಗೂ 36ನೇ ಕಂತಿನ ಒಟ್ಟು ₹7,405.86 ಕೋಟಿ ಹಣವನ್ನು ಒಂದೇ ಬಾರಿಗೆ ಬಿಡುಗಡೆ ಮಾಡಲಾಗಿದೆ. 34ನೇ ಕಂತಿನ ₹2,500 ಕೋಟಿ, 35ನೇ ಕಂತಿನ ₹2,452.93 ಕೋಟಿ ಮತ್ತು 36ನೇ ಕಂತಿನ ₹2,452.93 ಕೋಟಿ ಅನುದಾನವನ್ನು ಒಟ್ಟಾಗಿ ಬಿಡುಗಡೆ ಮಾಡಲಾಗಿದ್ದು, ಇದರಿಂದ ರಾಜ್ಯದ 1.24 ಕೋಟಿ ಮಹಿಳೆಯರ ಖಾತೆಗೆ ಹಣ ನೇರವಾಗಿ ತಲುಪಲಿದೆ ಎಂದು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್‌ ಗೂಳಿಗೌಡ ಅವರು ಮಾಹಿತಿ ನೀಡಿದ್ದಾರೆ.

ಈ ಸತತ ಮೂರು ಕಂತುಗಳ ಬಿಡುಗಡೆಯಿಂದಾಗಿ ಯೋಜನೆಯಾರಂಭದಿಂದ ಅಕ್ಟೋಬರ್‌ವರೆಗೆ ಒಟ್ಟು ₹86,838.36 ಕೋಟಿ ಹಣ ಗೃಹಲಕ್ಷ್ಮಿ ಫಲಾನುಭವಿಗಳಿಗೆ ತಲುಪಿದಂತಾಗಿದ್ದು, ಪ್ರತಿ ಮಹಿಳೆಗೆ ಇದುವರೆಗೆ ಒಟ್ಟು ₹72,000 ತಲುಪಿದೆ. ದೀಪಾವಳಿ ಹಬ್ಬದ ಈ ಸುಸಂದರ್ಭದಲ್ಲಿ ಹಾಗೂ ಬರಗಾಲದ ಕಷ್ಟದ ಸಮಯದಲ್ಲಿ ಈ ಹಣ ಬಿಡುಗಡೆಯಾಗಿರುವುದು ರಾಜ್ಯದ ಗೃಹಿಣಿಯರಿಗೆ ಆರ್ಥಿಕವಾಗಿ ದೊಡ್ಡ ಶಕ್ತಿ ನೀಡಿದೆ ಎಂದು ಹರ್ಷ ವ್ಯಕ್ತಪಡಿಸಿರುವ ದಿನೇಶ್ ಗೂಳಿಗೌಡ ಅವರು, ಒಂದೇ ಬಾರಿಗೆ 3 ಕಂತಿನ ಹಣ ಬಿಡುಗಡೆ ಮಾಡಿದ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

 

Leave A Reply

Your email address will not be published.