ಚಿತ್ತಾಪುರ; ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ನಿಮ್ಮಿತ್ತ ಚಿತ್ತಾಪುರ ಹಾಗೂ ವಾಡಿ ಪಟ್ಟಣದಲ್ಲಿ ಬೆಳಗ್ಗೆಯಿಂದಲೇ ಮತದಾನ ಚುರುಕುಗೊಂಡಿದ್ದು, ಶಿಕ್ಷಕರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಶಾಂತಿಯುತವಾಗಿ ಮತ ಚಲಾವಣೆ ಮಾಡಿದರು.
ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಅವರು ಭೇಟಿ ನೀಡಿ ಚುನಾವಣೆ ಪ್ರಕ್ರಿಯೆಯನ್ನು ವೀಕ್ಷಿಸಿದರು.
ಮತಗಟ್ಟೆಗಳ ಬಳಿ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಮಾಹಿತಿ ಕೇಂದ್ರವನ್ನು ಸ್ಥಾಪಿಸಿ, ಶಿಕ್ಷಕರಿಗೆ ಮಾಹಿತಿ ನೀಡುವುದರ ಜೊತೆಗೆ ಅಂತಿಮ ಹಂತದ ಮನವರಿಕೆ ಪ್ರಯತ್ನವನ್ನು ಮಾಡುವುದು ಕಂಡು ಬಂತು.
ಮತದಾನದ ವಿವಿರ; ಚಿತ್ತಾಪುರ ಪಟ್ಟಣದಲ್ಲಿ ಒಟ್ಟು 176 ಮತದಾರರಿದ್ದು ಅದರಲ್ಲಿ 148 ಮತದಾರರು ಮತವನ್ನು ಚಲಾಯಿಸಿದ್ದು ಶೇ(84.09) ಚಲಾವಣೆಯಾಗಿದ್ದು, ವಾಡಿ ಪಟ್ಟಣದಲ್ಲಿ 125 ಮತದಾರರಿದ್ದು 106 ಮತದಾರರು ಮತವನ್ನು ಚಲಾಯಿಸಿದ್ದು ಶೇ.(84.08) ರಷ್ಟು ಮತ ಚಲಾಚಣೆಯಾಗಿದೆ ಎಂದು ತಿಳಿದು ಬಂದಿದೆ. 301 ಮತದಾರರ ಪೈಕಿ 254 ಮತದಾರರು ಮತದಾನ ಮಾಡಿದ್ದು, ಶೇ.84.38 ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ.