ಕಲಬುರಗಿ: ಎಸಿಸಿ, ವೈವಿಧ್ಯಮಯ ಅದಾನಿ ಸಮೂಹದ ಸಿಮೆಂಟ್ ಮತ್ತು ನಿರ್ಮಾಣ ಸಾಮಗ್ರಿಗಳ ಕಂಪನಿ, ಅದಾನಿ ಪೌಂಡೇಷನ್ ನೊಂದಿಗೆ ಸೇರಿ, ಎಸಿಸಿ ತೊಂಡೆಭಾವಿಯಲ್ಲಿನ ಅದಾನಿ ಸ್ಕಿಲ್ ಡೆವಲಪಮೆಂಟ್ ಸೆಂಟರ್ ಮೂಲಕ ಕರ್ನಾಟಕದ ಯುವಕರಿಗೆ ಜೀವನೋಪಾಯಕ್ಕಾಗಿ ಕುಟುಂಬದಿAದ ದೂರವಾಗಬೇಕಾಗದಂತಹ ವೃತ್ತಿ ಅವಕಾಶಗಳನ್ನು ಕಂಡುಕೊಳ್ಳಲು ನೆರವಾಗುತ್ತಿದೆ.
ತೊಂಡೆಭಾವಿಯ ಚಿಕ್ಕದಲವಟ್ಟ ಗ್ರಾಮದ ಸಂತೋಷ್ ತಮ್ಮ ಭವಿಷ್ಯಕ್ಕಾಗಿ ಅಗತ್ಯವಿದ್ದ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಅವರು ಐಟಿಐ ಶಿಕ್ಷಣ ಪೂರ್ಣಗೊಳಿಸಿದ್ದರು. ಕೆಲಸದ ಅನುಭವ ಹೊಂದಿದ್ದರೂ ಮತ್ತು ಸ್ಥಿರ ಉದ್ಯೋಗ ಪಡೆಯಲು ಅಗತ್ಯ ಪ್ರಯತ್ನ ಹಾಗೂ ಬದ್ಧತೆ ತೋರಿಸಿದ್ದರು. ಆದಾಗ್ಯೂ, ಮನೆಯ ಸಮೀಪದಲ್ಲೇ ಸೂಕ್ತ ಉದ್ಯೋಗಾವಕಾಶ ದೊರಕುತ್ತಿರಲಿಲ್ಲ. ಲಭ್ಯವಿದ್ದ ಅವಕಾಶಗಳು ದೂರದಲ್ಲಿದ್ದವು ಅಥವಾ ಸ್ಥಿರವಾಗಿರಲಿಲ್ಲ. ಕುಟುಂಬದಿAದ ದೂರ ಉಳಿಯುವುದು ಸಂತೋಷ ಅವರಿಗೆ ದೀರ್ಘಕಾಲದ ಆಯ್ಕೆಯಾಗಿರಲಿಲ್ಲ.
ಅವರು ಅದಾನಿ ಸ್ಕಿಲ್ ಡೆವಲಪಮೆಂಟ್ ಸೆಂಟರ್ ನ ಡೊಮೆಸ್ಟಿಕ್ ಡಾಟಾ ಎಂಟ್ರಿ ಅಪರೇಟರ್ ಕೋರ್ಸ್ಗೆ ಸೇರಿದಾಗ, ಅದು ಅವರಿಗಾಗಿ ಹೊಸ ಆರಂಭವಾಗಿರಲಿಲ್ಲ. ಬದಲಾಗಿ, ಐಟಿಐ ಮೂಲಕ ಪಡೆದ ತಾಂತ್ರಿಕ ಜ್ಞಾನಕ್ಕೆ ಪೂರಕವಾಗಿ ಡಿಜಿಟಲ್ ಸಾಮರ್ಥ್ಯ, ಸಂವಹನ ಕೌಶಲ್ಯ, ಕಾರ್ಯಸ್ಥಳದ ಸಿದ್ಧತೆ ಹಾಗೂ ವೃತ್ತಿಜೀವನ ಮಾರ್ಗದರ್ಶನದ ಕೊರತೆ ತುಂಬಿಕೊಳ್ಳುವ ಅವಕಾಶವಾಗಿತ್ತು. ಈ ಕೋರ್ಸ್ ಅವರಿಗೆ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಸಮಗ್ರ ಸಿದ್ಧತೆಯನ್ನು ಒದಗಿಸಿತು.
ಇದಾದ ನಂತರ ದೊರೆತ ನೇಮಕಾತಿ ನೆರವು ಅಷ್ಟೇ ಪರಿಣಾಮಕಾರಿಯಾಗಿತ್ತು. ಸಂತೋಷ್ ಅವರನ್ನು ದೊಡ್ಡಬಳ್ಳಾಪುರದಲ್ಲಿರುವ ಮುಸ್ಸಾಹಿ ಆಟೋ ಪಾರ್ಟ್ಸ್ ಪ್ರೆöÊ. ಲಿಮಿಟೆಡ್ ಸಂಸ್ಥೆಯೊAದಿಗೆ ಸಂಪರ್ಕಿಸಲಾಯಿತು. ಇದು ಅವರ ಮನೆಗೆ ಸಮೀಪದಲ್ಲಿದ್ದು, ಅವರು ಹುಡುಕುತ್ತಿದ್ದ ಸ್ಥಿರ ಉದ್ಯೋಗಾವಕಾಶ ಒದಗಿಸಿತು. ಅವರು ಆಪರೇಟರ್ ಆಗಿ ಸೇರಿ ಇಂದು ತಿಂಗಳಿಗೆ 17,750 ರೂ. ಆದಾಯ ಗಳಿಸುತ್ತಿದ್ದಾರೆ.
ವೇತನವು ಮಹತ್ವದ್ದೇ ಸರಿ. ಆದರೆ ಸಂತೋಷ್ ಅವರಿಗೆ ಈ ಉದ್ಯೋಗ ಕೇವಲ ಆದಾಯದ ಮೂಲವಲ್ಲ. ಇದು ಸ್ಥಿರತೆ, ಕುಟುಂಬದ ಸಮೀಪದಲ್ಲಿರುವ ಅವಕಾಶ ಮತ್ತು ದೀರ್ಘಕಾಲದ ಅನಿಶ್ಚಿತತೆಗೆ ಅಂತ್ಯ ತಂದ ಸಾಧನೆಯಾಗಿದೆ. ಯಾರಿಗೇ ಆಗಲಿ ಅವರ ಸಾಮರ್ಥ್ಯ ಮತ್ತು ಪರಿಶ್ರಮಕ್ಕೆ ತಕ್ಕ ಅವಕಾಶ ದೊರೆತಾಗ ಜೀವನದಲ್ಲಿ ಹೇಗೆ ಬದಲಾವಣೆ ಸಾಧ್ಯವಾಗುತ್ತದೆ ಎಂಬುದಕ್ಕೆ ಇದು ಉತ್ತಮ ಉದಾಹರಣೆಯಾಗಿದೆ.
ತೊಂಡೆಭಾವಿಯಲ್ಲಿನ ಅದಾನಿ ಪೌಂಡೇಷನ್ ಗೆ, ಸಂತೋಷ ಅವರ ಯಶೋಗಾಥೆ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಈಗಾಗಲೇ ಸಾಮರ್ಥ್ಯ ಮತ್ತು ಪ್ರೇರಣೆ ಹೊಂದಿರುವ ಯುವಕರನ್ನು ಸೂಕ್ತ ಅವಕಾಶಗಳೊಂದಿಗೆ ಸಂಪರ್ಕಿಸಿದಾಗ ಅತ್ಯಂತ ಪರಿಣಾಮಕಾರಿಯಾಗುತ್ತವೆ ಎಂಬುದನ್ನು ನೆನಪಿಸುತ್ತದೆ. ಸರಿಯಾದ ಸಮಯದಲ್ಲಿ ದೊರೆತ ತರಬೇತಿ, ಮಾರ್ಗದರ್ಶನ ಮತ್ತು ಉದ್ಯೋಗಾವಕಾಶಗಳು ವ್ಯಕ್ತಿಯ ಬದುಕನ್ನು ಹೇಗೆ ಪರಿವರ್ತಿಸಬಲ್ಲವು ಎಂಬುದನ್ನು ಅವರ ಪಯಣ ಸ್ಪಷ್ಟವಾಗಿ ತೋರಿಸುತ್ತದೆ.