Shubhashaya News

ಗಾಂಧೀಜಿ–ಶಾಸ್ತಿç ಆದರ್ಶಗಳು ಇಂದಿಗೂ ಪ್ರಸ್ತುತ: ಪ್ರೊ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಚರಿಸಿದ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಜಯಂತಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಪೂಜೆ ನೆರವೇರಿಸಿದರು. ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ, ಪ್ರೊ. ವೆಂಕಟ್ ರಾವ್ ಎಂ. ಪಲಾಟಿ ಇತರರು ಇದ್ದರು.

ಆಳಂದ: ಗಾಂಧೀಜಿಯವರ ಸತ್ಯ, ಶಾಂತಿ, ಅಹಿಂಸೆ ಹಾಗೂ ಸತ್ಯಾಗ್ರಹದ ತತ್ವಗಳು ಇಂದಿನ ಜಗತ್ತಿಗೂ ಪ್ರಸ್ತುತವಾಗಿವೆ. ಯುವಜನರು ಅವುಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಸ್ವಚ್ಛ ಭಾರತ, ಗ್ರಾಮ ಸ್ವರಾಜ್ಯ, ಜಲ ಜೀವನ್ ಮಿಷನ್, ಜನಧನ್, ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ–ಯುವ ಸಬಲೀಕರಣದಂತಹ ಉಪಕ್ರಮಗಳು ಗಾಂಧೀಜಿ ಚಿಂತನೆಗಳೊAದಿಗೆ ಹೊಂದಿಕೆಯಾಗಿವೆ ಎಂದು ಸಿಯುಕೆ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.
ತಾಲೂಕಿನ ಕಡಗಂಚಿ ಬಳಿ ಸಿಯುಕೆದಲ್ಲಿ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತಿç ಅವರ ೧೨೨ನೇ ಜಯಂತಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಲಾಲ್ ಬಹದ್ದೂರ್ ಶಾಸ್ತಿçಯವರ ‘ಜೈ ಜವಾನ್, ಜೈ ಕಿಸಾನ್’ ಘೋಷಣೆಯನ್ನು ಸ್ಮರಿಸಿದ ಅವರು, ಬಳಿಕ ‘ಜೈ ವಿಜ್ಞಾನ’ ಹಾಗೂ ‘ಜೈ ಅನುಸಂಧಾನ’ ಸೇರ್ಪಡೆಯಾಗಿರುವುದನ್ನು ಉಲ್ಲೇಖಿಸಿದರು. ಸಂಘರ್ಷ ಹಾಗೂ ಸಾಮಾಜಿಕ ಸವಾಲುಗಳಿಗೆ ಗಾಂಧೀಜಿಯವರ ಅಹಿಂಸೆ ಮತ್ತು ಶಾಂತಿಯುತ ಮಾರ್ಗಗಳು ಪರಿಹಾರವಾಗಬಲ್ಲವು ಎಂದರು.
ಇತಿಹಾಸ ಮತ್ತು ಪುರಾತತ್ವಶಾಸ್ತç ವಿಭಾಗದ ಪ್ರಾಧ್ಯಾಪಕ ಪ್ರೊ. ವೆಂಕಟ್ ರಾವ್ ಎಂ. ಪಲಾಟಿ, “ಗಾಂಧೀಜಿ ಕೇವಲ ಒಬ್ಬ ವ್ಯಕ್ತಿಯಾಗಿರಲಿಲ್ಲ; ಅವರು ಒಂದು ವಿಚಾರವಾಗಿದ್ದರು” ಎಂದರು. ದಕ್ಷಿಣ ಆಫ್ರಿಕಾದ ಅನುಭವದಿಂದ ಭಾರತದ ಸ್ವಾತಂತ್ರ‍್ಯ ಚಳವಳಿಯ ನಾಯಕತ್ವದವರೆಗಿನ ಗಾಂಧೀಜಿಯವರ ಪಯಣವನ್ನು ವಿವರಿಸಿದರು. ಸತ್ಯ, ಅಹಿಂಸೆ, ಸತ್ಯಾಗ್ರಹ, ಸ್ವದೇಶಿ ಹಾಗೂ ‘ಕ್ವಿಟ್ ಇಂಡಿಯಾ’ ಚಳವಳಿಗಳ ಮೂಲಕ ಅವರು ಜನಸಾಮಾನ್ಯರನ್ನು ಸ್ವಾತಂತ್ರ‍್ಯ ಹೋರಾಟದಲ್ಲಿ ಒಗ್ಗೂಡಿಸಿದರು ಎಂದರು. ಸಾಮಾಜಿಕ ಸುಧಾರಣೆ, ಶಿಕ್ಷಣ, ಸಮಾನತೆ ಹಾಗೂ ಹಿಂದುಳಿದ ಸಮುದಾಯಗಳ ಏಳಿಗೆಗೂ ಗಾಂಧೀಜಿ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಕುಲಸಚಿವ ಪ್ರೊ. ಆರ್. ಆರ್. ಬಿರಾದಾರ್ ಮಾತನಾಡಿ, ಅಹಿಂಸೆ, ಗ್ರಾಮ ಸ್ವರಾಜ್ಯ, ಸ್ವದೇಶಿ, ಸಾಮಾಜಿಕ ಸಮಾನತೆ ಹಾಗೂ ಅಂತ್ಯೋದಯದAತಹ ಗಾಂಧೀಜಿ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಗ್ರಾಮ ಸ್ವರಾಜ್ಯ ಸ್ಥಳೀಯ ಆರ್ಥಿಕತೆ ಬಲಪಡಿಸುವ ಹಾಗೂ ಸ್ವದೇಶಿ ಸ್ಥಳೀಯ ಉತ್ಪಾದನೆ–ಮಾರುಕಟ್ಟೆ ಉತ್ತೇಜಿಸುವ ಆಶಯ ಹೊಂದಿತ್ತು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅಭಿವೃದ್ಧಿಯ ಅವಕಾಶ ಸಿಗಬೇಕು ಎಂಬ ಗಾಂಧೀಜಿ ಆಶಯ ‘ವಿಕಸಿತ ಭಾರತ’ ಹಾಗೂ ‘ಆತ್ಮನಿರ್ಭರ ಭಾರತ’ದೊಂದಿಗೆ ಹೊಂದಿಕೆಯಾಗುತ್ತದೆ ಎಂದರು.

ಪ್ರೊ. ಬಸವರಾಜ ಎಂ. ಕುಬಕಡ್ಡಿ, ಪ್ರೊ. ಪಲ್ಲೆಪೋಗು ರಾಘವಯ್ಯ, ಪ್ರೊ. ಪಾಂಡುರAಗ ಪಟ್ಟಿ, ಪ್ರೊ. ರಾಜೀವ್ ಜೋಶಿ, ಡಾ. ಕೋಟ ಸಾಯಿಕೃಷ್ಣ, ಡಾ. ರವಿ ಕಾಂಗೈ, ಪ್ರೊ. ಅಮರೇಂದ್ರ ಮಾಸ್ತ, ಪ್ರೊ. ಚಿಂತಲಪುಡಿ ವಿ. ಸುರೇಶ್, ಡಾ. ತೇಜಸ್ವಿ ಲಕ್ಕುಂಡಿ, ಡಾ. ಕರಬಸವೆಗೌಡ, ಡಾ. ಲಕ್ಷ್ಮಣ್, ಡಾ. ಬಸವರಾಜ್, ಡಾ. ಬಾಬು ನಲ್ಲಸ್ವಾಮಿ ಸೇರಿದಂತೆ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.
‘ಸ್ವಚ್ಛತಾ ಹೀ ಸೇವಾ’ ಅಂಗವಾಗಿ ನಡೆದ ಪೋಸ್ಟರ್ ರಚನೆ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳ ವಿಜೇತರಿಗೆ ಗಣ್ಯರು ಬಹುಮಾನ ವಿತರಿಸಿದರು. ಸಂಯೋಜಕ ಡಾ. ಹರೀಶ್ ಚೌಧರಿ ಸ್ವಾಗತಿಸಿದರು. ಡಾ. ನೃಸಿಂಹ ಚರಣ್ ಪ್ರಧಾನ್ ವಂದಿಸಿದರು.

Leave A Reply

Your email address will not be published.