Shubhashaya News

ಅನುದಾನ ರಹಿತ ಶಿಕ್ಷಕರಿಗೆ ಪರಿಹಾರ ಶಾಸಕ ಗುತ್ತೇದಾರ ಹರ್ಷ

ರಾಜ್ಯದ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ ನೀಡುತ್ತಿರುವುದು ಸಂತೋಷದ ವಿಷಯ

ಕೋವಿಡ್ ಎರಡನೇ ಅಲೆಯಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಿರುವ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರು ಸೇರಿದಂತೆ ಸಮಾಜದ ವಿವಿಧ ಕಾಯಕ ವರ್ಗಗಳಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಘೋಷಿಸಿರುವ 500 ಕೋಟಿ ರೂ.ಯ 2ನೇ ಪ್ಯಾಕೇಜ್ ಸಹಕಾರಿಯಾಗಲಿದೆ ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿರುವ ಸಿನಿ ಕಾರ್ಮಿಕರು, ಸಿನಿ ಕಲಾವಿದರು, ಮೀನುಗಾರರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಸಹಾಯಕಿಯರು, ಮುಜುರಾಯಿ ಇಲಾಖೆಯ ಅಡುಗೆ ಭಟ್ಟರು, ಅರ್ಚಕರು ಸೇರಿದಂತೆ ವಿವಿಧ ವೃತ್ತಿಯವರಿಗೆ ಪ್ಯಾಕೇಜ್ ಆರ್ಥಿಕ ಚೈತನ್ಯ ನೀಡಲಿದೆ ಎಂದು ಹೇಳಿದ್ದಾರೆ.
ರಾಜ್ಯದ ಅನುದಾನ ರಹಿತ ಖಾಸಗಿ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ ನೀಡುತ್ತಿರುವುದು ಸಂತೋಷದ ವಿಷಯ ಈ ವಿಷಯದ ಕುರಿತು ಈ ಹಿಂದೆಯೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು ಈಗ 2ನೇ ಪ್ಯಾಕೇಜ್‍ನಲ್ಲಿ ಅನುದಾನ ರಹಿತ ಶಿಕ್ಷಕರಿಗೆ ಪರಿಗಣಿಸಿರುವುದಕ್ಕೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸುವುದಾಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.