Shubhashaya News

ಹಿರಿಯ ನಾಗರಿಕರಿಗೆ ನೃತ್ಯ, ಏಕಪಾತ್ರಾಭಿನಯ, ಸಂಗೀತ ಚಿಕಿತ್ಸಾ ಕಾರ್ಯಕ್ರಮ

ಕಲಬುರಗಿ: ಹಿರಿಯ ನಾಗರಿಕರ ದೈಹಿಕ ಹಾಗೂ ಮಾನಸಿಕ ಆರೋಗ್ಯ, ಸಂತೋಷ ಮತ್ತು ಚೈತನ್ಯ ಹೆಚ್ಚಿಸುವ ಉದ್ದೇಶದಿಂದ ನಗರದ ಹಿರಿಯ ನಾಗರಿಕರಿಗಾಗಿ ಒಂದು ದಿನದ ನೃತ್ಯ, ಏಕಪಾತ್ರಾಭಿನಯ ಹಾಗೂ ಸಂಗೀತ ಚಿಕಿತ್ಸಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಹಿರಿಯ ನಾಗರಿಕರು ಸಮಾಜದ ಅನುಭವ ಸಂಪತ್ತಾಗಿದ್ದು, ಅವರ ಗೌರವ, ಹಕ್ಕುಗಳು ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾದಿಕ್ ಹುಸೇನ್ ಖಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ವೃದ್ಧಾಶ್ರಮ, ಸೇಡಂ ಅಧ್ಯಕ್ಷ ಲಿಂಗರಾಜ್ ತಾರಫೈಲ್ ಅವರು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಜೀವನ ಚಕ್ರದ ವಿವಿಧ ಹಂತಗಳ ಕುರಿತು ವಿವರಿಸಿದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ವೀರಭೂಷಣ್, ಶ್ರೀ ಗೋಪಾಲ ದೇವ ಜಾಧವ್ ಮೆಮೋರಿಯಲ್ ಟ್ರಸ್ಟ್ ಕಾರ್ಯದರ್ಶಿ ಡಾ. ಅಬ್ದುಲ್ ವಾಹಿದ್ ಮುನೀರ್, ನ್ಯಾಯವಾದಿ ರಾಜೇ ಶಿವಶರಣಪ್ಪ, ಕಲಬುರಗಿಯ ಸರಸ್ವತಿದೇವಿ ತಾಯಿ ಏಳು ಅವತಾರ್ ತಾಯಮ್ಮ ವೃದ್ಧಾಶ್ರಮದ ಪ್ರತಿನಿಧಿಗಳು, ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಅರುಣಕುಮಾರ್ ಲೋಯಾ, ಮಾರ್ಗದರ್ಶಿ ಸಂಸ್ಥೆ ಕಾರ್ಯದರ್ಶಿ ಯಶೋಧಾ, ಗಾಬರೆ ಲೇಔಟ್ ಅಭಿವೃದ್ಧಿ ಸಂಘದ ಅಧ್ಯಕ್ಷ ಮಹಿಪಾಲರೆಡ್ಡಿ ಇಟ್ಟಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿಗಳಾದ ಮೇಘಾಂಜಲಿ ಪ್ರಕಾಶ, ದ್ಯಾಬೇರಿ, ಸ್ವಪ್ನಾ ಪಾಟೀಲ್, ಸುಜಾತಾ, ಕವಿತಾ ಹಾಗೂ ಅನಂತನಾಗ್ ಭಾಗವಹಿಸಿದ್ದರು. ಹಿರಿಯ ನಾಗರಿಕರು ನೃತ್ಯ, ಏಕಪಾತ್ರಾಭಿನಯ ಹಾಗೂ ಸಂಗೀತ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪ್ರಕಾಶ ಜಾಧವ್ ನಿರೂಪಿಸಿದರು. ಶ್ವೇತಾ ಇಟಗಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.

Leave A Reply

Your email address will not be published.