Shubhashaya News

ಕಲಬುರಗಿ; ಆಟೋ ಚಾಲಕರ ಸಂಘಟನೆಯ ನೂತನ ಘಟಕ ರಚನೆ

ಕಲಬುರಗಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಗುಲ್ಬರ್ಗಾ ಜಿಲ್ಲಾ ಘಟಕದ ವತಿಯಿಂದ ನಗರದೊಳಗೆ ಭಾನುವಾರ ನಡೆದ ಸಂಘಟನಾ ಸಭೆಯಲ್ಲಿ ಆಟೋ ಯೂನಿಯನ್ ಟಿಪ್ಪು ಸುಲ್ತಾನ್ ಘಟಕದ ನೂತನ ಕೌನ್ಸಿಲ್ ರಚಿಸಲಾಯಿತು.

ಸಭೆಯಲ್ಲಿ ಚುನಾವಣೆಯ ಮೂಲಕ ಅಬ್ದುಲ್ ನಬಿ ಅವರನ್ನು ಅಧ್ಯಕ್ಷರಾಗಿ, ಸೈಯದ್ ಮದಾರ್ ಅವರನ್ನು ಉಪಾಧ್ಯಕ್ಷರಾಗಿ, ಮೊಹಮ್ಮದ್ ಅಲಿ ಮುರ್ತಜಾ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ, ಸೈಯದ್ ಸದ್ರುದ್ದೀನ್ ಅವರನ್ನು ಜಂಟಿ ಕಾರ್ಯದರ್ಶಿಯಾಗಿ, ಅನ್ವರ್ ಅವರನ್ನು ಖಜಾಂಚಿಯಾಗಿ ಹಾಗೂ ಇಬ್ರಾಹಿಂ ಅವರನ್ನು ಮಾಧ್ಯಮ ಉಸ್ತುವಾರಿಯಾಗಿ ಆಯ್ಕೆ ಮಾಡಲಾಯಿತು. 25 ಸದಸ್ಯರನ್ನು ಒಳಗೊಂಡ ಸಮಿತಿಯನ್ನೂ ರಚಿಸಲಾಯಿತು.

ಜಿಲ್ಲಾ ಅಧ್ಯಕ್ಷ ಸೈಯದ್ ಜಾಕಿರ್ ಹಾಗೂ ರಾಜ್ಯ ಕಾರ್ಯದರ್ಶಿ ಮತ್ತು ಗುಲ್ಬರ್ಗಾ ಉಸ್ತುವಾರಿ ಸೈಯದ್ ಅಲ್ತಾಫ್ ಅವರ ಮೇಲ್ವಿಚಾರಣೆಯಲ್ಲಿ ಸಭೆ ನಡೆಯಿತು. ಆಟೋ ಚಾಲಕರ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವುದು, ಸದಸ್ಯರ ಸಮಸ್ಯೆಗಳು ಹಾಗೂ ಹಕ್ಕುಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.