ವಾಡಿ, ಸೆ.3: ವಾಡಿ ವಲಯ ಮಟ್ಟದ ಪ್ರಾಥಮಿಕ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಹಲಕರ್ಟಿ ಬಸವೇಶ್ವರ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ನಾಲವಾರ ಗ್ರಾಮದಲ್ಲಿ ಗುರುವಾರ ಜರುಗಿದ ಕ್ರೀಡಾಕೂಟದಲ್ಲಿ ಬಾಲಕರ ಖೋ ಖೋ ಪ್ರಥಮ, ಬಾಲಕಿಯರ ಖೋ ಖೋ ಪ್ರಥಮ, ಬಾಲಕ ಮತ್ತು ಬಾಲಕಿಯರ ವಾಲಿಬಾಲ್ ದ್ವಿತೀಯ ಸ್ಥಾನ ಹಾಗೂ ವೈಯುಕ್ತಿಕ ಆಟದಲ್ಲಿ ಬಾಲಕಿಯರ 200 ಮೀ ಓಟ ರಂಜಿತಾ ಸಂತೋಷ ದ್ವಿತೀಯ, 600 ಮೀ ಓಟದಲ್ಲಿ ಪಾರ್ವತಿ ಮಹಾದೇವ ದ್ವಿತೀಯ, ಬಾಲಕರ 100 ಹನೀಫ್ ಮೈನೋದ್ದಿನ್ ದ್ವಿತೀಯ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾದರು.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆ ಅಧ್ಯಕ್ಷ ಸಿದ್ದರಾಜ ಮಲ್ಕಂಡಿ, ಉಪಾಧ್ಯಕ್ಷ ಭಾಗಣ್ಣ ಬುಕ್ಕಾ ಕಾರ್ಯದರ್ಶಿ ಶರಣಕುಮಾರ ದೋಶೆಟ್ಟಿ, ಶಿಕ್ಷಕರು ಮತ್ತು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.