Shubhashaya News

ಅಂಬುಲೆನ್ಸ್ ಸೇವೆಗೆ ಶಾಸಕ ಗುತ್ತೇದಾರ ಚಾಲನೆ

ಆರ್‍ಎಸ್‍ಎಸ್ ಸಂಚಾಲಿತ ಅಂಬುಲೆನ್ಸ್ ಸೇವೆಗೆ ಶಾಸಕ ಸುಭಾಷ್ ಗುತ್ತೇದಾರ ಚಾಲನೆ ನೀಡಿದರು. ಕೃಷ್ಣಾಜೀ ಜೋಶಿ, ವಿಜಯ ಮಹಾಂತೇಶ, ಹರ್ಷಾನಂದ ಗುತ್ತೇದಾರ ಇದ್ದರು.

ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗಾಗಿ ಆಳಂದನಿಂದ ಕಲಬುರಗಿಗೆ ಹೋಗಿ ಬರಲು ನೂತನ ಅಂಬುಲೆನ್ಸ್ ಸೇವೆಗೆ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಚಾಲನೆ ನೀಡಿದರು.

ಶನಿವಾರ ಆಳಂದ ಪಟ್ಟಣದ ಶ್ರೀರಾಮ ಮಾರುಕಟ್ಟೆ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವದೇಶಿ ಜಾಗರಣ ಮಂಚ ವತಿಯಿಂದ ರತ್ನಾಬಾಯಿ ಪೊಲೀಸ್‍ಪಾಟೀಲ ಚಲಗೇರಾ ಸ್ಮರಣಾರ್ಥ ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದರು.


ದೇಶಕ್ಕೆ ವಿಪತ್ತು ಬಂದಾಗಲೆಲ್ಲ ಮೊದಲು ಧಾವಿಸುವುದೇ ಆರ್‍ಎಸ್‍ಎಸ್. ಸಂಘದ ಸೇವಕರು ಹಗಲು ಇರಳು ಎನ್ನದೇ ದೇಶಕ್ಕಾಗಿ ಕಾರ್ಯ ಮಾಡುತ್ತಾರೆ ಅವರ ಸೇವೆ ಮಹತ್ತರವಾಗಿದೆ ಹೀಗಾಗಿ ಇಂತಹ ಕಷ್ಟದ ಸಮಯದಲ್ಲಿ ಅಂಬುಲೆನ್ಸ್ ಸೇವೆ ನೀಡುತ್ತಿರುವ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ಬಣ್ಣಿಸಿದರು.


ಕೋರೋನಾ ಸೋಂಕಿತರು ಈ ಸೇವೆಯ ಲಾಭವನ್ನು ಪಡೆಯಬೇಕು. ಈ ಅಂಬುಲೆನ್ಸ್ ಆಕ್ಸಿಜನ್ ಸೌಲಭ್ಯ ಹೊಂದಿದೆ ಹಾಗೂ ಸಂಪೂರ್ಣವಾಗಿ ಉಚಿತವಾಗಿ ಉಚಿತ ಸೇವೆ ನೀಡುತ್ತದೆ ತುರ್ತು ಅಗತ್ಯ ಇರುವವರು ಇದರ ಸೇವೆಗೆ ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಾಂತ ಭೌದ್ಧಿಕ ಪ್ರಮುಖ ಕೃಷ್ಣಾಜೀ ಜೋಶಿ, ವಿಭಾಗ ಪ್ರಚಾರಕ ವಿಜಯ ಮಹಾಂತೇಶ, ಜಿ.ಪಂ ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ ಸೇರಿದಂತೆ ಭಾರತೀಯ ಜನತಾ ಪಕ್ಷದ ಪದಾಧಿಕಾರಿಗಳು ಹಾಗೂ ಸಂಘದ ಕಾರ್ಯಕರ್ತರು ಹಾಜರಿದ್ದರು.

Leave A Reply

Your email address will not be published.