Shubhashaya News

‘ಗ್ರಾಮೀಣ ಭಾಗದ ಪತ್ರಕರ್ತರ ಕಾರ್ಯ ಅನನ್ಯ’

ಯಲಬುರ್ಗಾ ಪಟ್ಟಣದಲ್ಲಿ ಭೂತೆ ಅಭಿಮಾನಿ ಬಳಗದಿಂದ ಪತ್ರಕರ್ತರಿಗೆ ಆಹಾರ್ ಕಿಟ್ ವಿತರಿಸಲಾಯಿತು.
ಯಲಬುರ್ಗಾ: ಕೋವಿಡ್ ಸಂಕಷ್ಟ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿನ ಅದೊಷ್ಟೋ ಪತ್ರಕರ್ತರು ನೈಜ ವರದಿ ನೀಡುವ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು ಅತ್ಯುತ್ತಮವಾದ ಬೆಳವಣಿಗೆಯಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಹೇಳಿದರು.
ಪಟ್ಟಣದಲ್ಲಿ ಭೂತೆ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಪತ್ರಕರ್ತರಿಗೆ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ಕೊರೋನಾ 2ನೇ ಅಲೆ ಬಹಳ ಭೀಕರ ಪರಿಣಾಮ ಬೀರಿದ್ದು,ಹಳ್ಳಿ ಹಳ್ಳಿಗೆ ಅಲೆದಾಡಿಕೊಂಡು ವರದಿಗಾರರು ತಮ್ಮ ಜೀವನದ ಹಂಗು ತೊರೆದು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಹಿನ್ನೆಲೆ ಪ್ರಂಟ್ ಲೈನ್ ವಾರಿಯರ್ಸ್‍ಯಾಗಿ ಕಾಯಕ ಮಾಡುವ ಪತ್ರಕರ್ತರಿಗೆ ಸೂಕ್ತವಾದ ಭದ್ರತೆ ದೊರೆಯಬೇಕು. ಗ್ರಾಮೀಣ ಭಾಗದ ಪತ್ರಕರ್ತರು ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಮಾಜದಲ್ಲಿ ಅಂಕು ಡೊಂಕುನ್ನು ತಿದ್ದುವ ಮೂಲಕ ಕೈಗನ್ನಡಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಹಿರಿಯ ಪತ್ರಕರ್ತ ಕೋಟ್ರಪ್ಪ ಮುತ್ತಾಳ ಮಾತನಾಡಿ,ಹಗಲೆರಳುನ್ನದೇ ಕೆಲಸ ಮಾಡುವ ವರದಿಗಾರರ ಹುದ್ದೆ ಸುಲಭದಾಯಕಲ್ಲದು. ಉದ್ಯಮಿ ಬಸವಲಿಂಗಪ್ಪ ಭೂತೆ ನಾಗರಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಮೂಲಕ ಇಂತಹ ಅಳಿಲು ಸೇವೆ ಮಾಡುತ್ತಿರುವುದು ಮೆಚ್ಚುಗೆ ಪಾತ್ರವಾಗಿದೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ದಾನ ಮಾಡುವ ಮನೋಭಾವನೆ ಹೊಂದಬೇಕು ಎಂದು ತಿಳಿಸಿದರು.
ಪ.ಪಂ.ಅಧ್ಯಕ್ಷ ಅಮರೇಶ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಬಾವಿಮನಿ, ಪತ್ರಕರ್ತರಾದ ಉಮಶಂಕರ ಹಿರೇಮಠ,ಭೀಮಪ್ಪ ಹವಳಿ,ಮಹಾಂತೇಶ ಛಲವಾದಿ ಮಾತನಾಡಿದರು.
ಮುಖಂಡರಾದ ಮಹೇಶ ಭೂತೆ,ಈರಪ್ಪ ಬಣಕಾರ,ಕಳಕಪ್ಪ ತಳವಾರ,ಬಸವಲಿಂಗಪ್ಪ ಕೊತ್ವಾಲ್, ಶಿವಕುಮಾರ ಭೂತೆ ಸೇರಿ ಇನ್ನಿತರರು ಪಾಲ್ಗೊಂಡಿದ್ದರು.

Leave A Reply

Your email address will not be published.