Shubhashaya News

ಆ.15ರಿಂದ ಡೆಮೊ, ಪ್ಯಾಸೆಂಜರ್ ರೈಲು ಸೇವೆಗಳ ಪ್ರಾರಂಭ

ಕಲಬುರಗಿ: ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿರುವ ಕೇಂದ್ರ ರೈಲ್ವೆ, ಸೋಲಾಪುರ ವಿಭಾಗದ ಮೂಲಕ ಸಂಚರಿಸುತ್ತಿರುವ ಹಲವು ವಿಶೇಷ ರೈಲು ಸೇವೆಗಳನ್ನು ಆಗಸ್ಟ್ 15ರಿಂದ ಶಾಶ್ವತ ಹಾಗೂ ನಿಯಮಿತ ರೈಲು ಸೇವೆಗಳಾಗಿ ಪರಿವರ್ತಿಸಿ, . ಹೊಸ ರೈಲು ಸಂಖ್ಯೆಗಳಲ್ಲಿ ಈ ಸೇವೆಗಳು ಮುಂದುವರಿಯಲಿದ್ದು, ಕಲಬುರಗಿ ಸೇರಿದಂತೆ ವಿವಿಧ ಪ್ರದೇಶಗಳ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಸೋಲಾಪುರ–ದೌಂಡ್ ದೈನಂದಿನ ಡೆಮು:

ಪ್ರಸ್ತುತ ವಿಶೇಷ ರೈಲು ಸಂಖ್ಯೆ 01461 ಅನ್ನು ಆಗಸ್ಟ್ 15ರಿಂದ 71434 ಸೋಲಾಪುರ–ದೌಂಡ್ ದೈನಂದಿನ ಡೆಮು ಪ್ಯಾಸೆಂಜರ್ ಆಗಿ ಹಾಗೂ ರೈಲು ಸಂಖ್ಯೆ 01462 ಅನ್ನು 71433 ದೌಂಡ್–ಸೋಲಾಪುರ ದೈನಂದಿನ ಡೆಮು ಪ್ಯಾಸೆಂಜರ್ ಆಗಿ ನಿಯಮಿತಗೊಳಿಸಲಾಗುತ್ತದೆ.

ರೈಲು ಸಂಖ್ಯೆ 71434 ಸೋಲಾಪುರದಿಂದ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಹೊರಟು ಸಂಜೆ 4.25ಕ್ಕೆ ದೌಂಡ್ ತಲುಪಲಿದೆ. ಮರಳಿ ರೈಲು ಸಂಖ್ಯೆ 71433 ದೌಂಡ್‌ನಿಂದ ಸಂಜೆ 4.05ಕ್ಕೆ ಹೊರಟು ರಾತ್ರಿ 10.35ಕ್ಕೆ ಸೋಲಾಪುರ ತಲುಪಲಿದೆ.

ಈ ರೈಲುಗಳು ಮೊಹೋಲ್, ಮಾಧಾ, ಕುರ್ದುವಾಡಿ, ಕೆಮ್, ಜೆಯೂರ್, ಕೆತ್ತೂರು ಹಾಗೂ ಭಿಗ್ವಾನ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ಒಟ್ಟು 9 ಡೆಮು ಬೋಗಿಗಳ ಸಂಯೋಜನೆ ಇರಲಿದೆ.

ಸೋಲಾಪುರ–ಕಲಬುರಗಿ ದೈನಂದಿನ ಡೆಮು:

ಸೋಲಾಪುರ–ಕಲಬುರಗಿ ಮಾರ್ಗದಲ್ಲಿಯೂ ವಿಶೇಷ ರೈಲು ಸೇವೆಯನ್ನು ನಿಯಮಿತಗೊಳಿಸಲಾಗುತ್ತಿದೆ. ಪ್ರಸ್ತುತ ರೈಲು ಸಂಖ್ಯೆ 01465 ಅನ್ನು 71435 ಸೋಲಾಪುರ–ಕಲಬುರಗಿ ದೈನಂದಿನ ಡೆಮು ಪ್ಯಾಸೆಂಜರ್ ಆಗಿ ಹಾಗೂ ರೈಲು ಸಂಖ್ಯೆ 01466 ಅನ್ನು 71436 ಕಲಬುರಗಿ–ಸೋಲಾಪುರ ದೈನಂದಿನ ಡೆಮು ಪ್ಯಾಸೆಂಜರ್ ಆಗಿ ಪರಿವರ್ತಿಸಲಾಗುತ್ತದೆ.

ರೈಲು ಸಂಖ್ಯೆ 71435 ಸೋಲಾಪುರದಿಂದ ಪ್ರತಿದಿನ ಮಧ್ಯಾಹ್ನ 3.10ಕ್ಕೆ ಹೊರಟು ಸಂಜೆ 5.25ಕ್ಕೆ ಕಲಬುರಗಿ ತಲುಪಲಿದೆ. ರೈಲು ಸಂಖ್ಯೆ 71436 ಕಲಬುರಗಿಯಿಂದ ರಾತ್ರಿ 8.40ಕ್ಕೆ ಹೊರಟು ರಾತ್ರಿ 11.20ಕ್ಕೆ ಸೋಲಾಪುರ ತಲುಪಲಿದೆ.

ಈ ಸೇವೆಗಳು ಹೊಟಗಿ, ಅಕ್ಕಲಕೋಟೆ ರಸ್ತೆ, ದುಧನಿ ಹಾಗೂ ಗಾಣಗಾಪುರ ರಸ್ತೆ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ. ರೈಲಿನಲ್ಲಿ 9 ಡೆಮು ಬೋಗಿಗಳು ಇರಲಿವೆ.

ದೌಂಡ್–ಕಲಬುರಗಿ ಫಾಸ್ಟ್ ಪ್ಯಾಸೆಂಜರ್:

ದೌಂಡ್–ಕಲಬುರಗಿ ಮಾರ್ಗದಲ್ಲಿನ ವಿಶೇಷ ರೈಲು ಸೇವೆಗಳನ್ನೂ ನಿಯಮಿತಗೊಳಿಸಲಾಗುತ್ತಿದೆ. ಪ್ರಸ್ತುತ ರೈಲು ಸಂಖ್ಯೆ 01421 ಮತ್ತು 01425 ಅನ್ನು ಕ್ರಮವಾಗಿ 51301 ಮತ್ತು 51303 ದೌಂಡ್–ಕಲಬುರಗಿ ಫಾಸ್ಟ್ ಪ್ಯಾಸೆಂಜರ್ ರೈಲುಗಳಾಗಿ ಹಾಗೂ ರೈಲು ಸಂಖ್ಯೆ 01422 ಮತ್ತು 01426 ಅನ್ನು 51302 ಮತ್ತು 51304 ಕಲಬುರಗಿ–ದೌಂಡ್ ಫಾಸ್ಟ್ ಪ್ಯಾಸೆಂಜರ್ ರೈಲುಗಳಾಗಿ ಆಗಸ್ಟ್ 15ರಿಂದ ನಿಯಮಿತ ಸೇವೆಗೆ ತರಲಾಗುತ್ತದೆ.

ರೈಲು ಸಂಖ್ಯೆ 51301 ಮತ್ತು 51303 ದೌಂಡ್‌ನಿಂದ ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಹೊರಟು ರಾತ್ರಿ 11.20ಕ್ಕೆ ಕಲಬುರಗಿ ತಲುಪಲಿವೆ. ರೈಲು ಸಂಖ್ಯೆ 51302 ಮತ್ತು 51304 ಕಲಬುರಗಿಯಿಂದ ರಾತ್ರಿ 8.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 2.30ಕ್ಕೆ ದೌಂಡ್ ತಲುಪಲಿವೆ.

ಈ ರೈಲುಗಳಿಗೆ ಭಿಗ್ವಾನ್, ಕೆತ್ತೂರು, ಜೆಯೂರ್, ಕೆಮ್, ಕುರ್ದುವಾಡಿ, ಮಾಧಾ, ಮೊಹೋಲ್, ಸೋಲಾಪುರ, ಟಿಕೆಕರ್ವಾಡಿ, ಹೊಟಗಿ, ಅಕ್ಕಲಕೋಟ್ ರಸ್ತೆ, ಬೊರೊಟಿ, ದುಧನಿ ಹಾಗೂ ಗಾಣಗಾಪುರ ರಸ್ತೆ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ಸೇವೆಗಳಲ್ಲಿ 10 ಸಾಮಾನ್ಯ ಎರಡನೇ ದರ್ಜೆ ಬೋಗಿಗಳು ಹಾಗೂ 2 ಲಗೇಜ್ ಕಮ್ ಬ್ರೇಕ್ ವ್ಯಾನ್‌ಗಳು, ಒಟ್ಟು 12 ಬೋಗಿಗಳ ಸಂಯೋಜನೆ ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.