ಆಳಂದ: ಸಾಂಪ್ರದಾಯಿಕ ಕೃಷಿ ಪದ್ಧತಿಗೆ ಬದಲಾಗಿ ಆಧುನಿಕ ತಂತ್ರಜ್ಞಾನ ಹಾಗೂ ಯಾಂತ್ರೀಕರಣದತ್ತ ರೈತರು ಹೆಜ್ಜೆ ಇಡುತ್ತಿರುವ ದೃಶ್ಯ ತಾಲೂಕಿನ ಸಾಲೇಗಾಂವ ವ್ಯಾಪ್ತಿಯಲ್ಲಿ ಭಾನುವಾರ ಕಂಡುಬoದಿದೆ.
ಪ್ರಸಕ್ತ ಸಾಲಿನ ಮಳೆಯ ತೀರಾ ಕೊರತೆ ನಡುವೆ ಶೇ ೪೦ರಿಂದ ೫೦ರಷ್ಟು ಮಾತ್ರ ತಾಲೂಕಿನಲ್ಲಿ ಬಿತ್ತನೆಯಾಗಿದೆ, ಆದರೆ ಇನ್ನೂಳಿದ ೫೦ರಲ್ಲಿ ಬಿತ್ತನೆಯಾದರು ತೇವಾಂಶದ ಕೊರತೆಯಿಂದ ಬೆಳೆ ಹಾಳಾಗಿದೆ. ಕೆಲವಡೆ ಅಳಿದುಳಿದ ತೇವಾಂಶದಲ್ಲಿ ಕಳೆದ ವಾರ ಸುರಿದ ಮಳೆಯಿಂದ ಚೇತರಿಸಿಕೊಂಡ ಬೆಳೆಯಲ್ಲಿ ರೈತರು ಔಷಧಿ ಸಿಂಪರಣೆ,ಕಸ ನಿರ್ವಹಣೆ ಹಾಗೂ ಎಡೆಸಾಗು ಮಾಡುವಲ್ಲಿ ತೊಡಗಿದ್ದಾರೆ.
ಆದರೆ ಈ ಬಾರಿ ಬೆಳೆಯಲ್ಲಿ ಎಡೆ ಸಾಗು ಮಾಡುವ ಅಪರೂಪದ ದೃಶ ಸಾಲಾಗಾಂವ ಗ್ರಾಮದಲ್ಲಿ ಭಾನುವಾರ ಕಂಡುಬoದಿದೆ.
ರೈತರು ತಮ್ಮ ಕೃಷಿಯನ್ನು ಉಳಿಸಿಕೊಳ್ಳಲು ಬೆಳೆಯಲ್ಲಿ ಎತ್ತುಗಳು ಹಾಗೂ ಇಬ್ಬರಿಂದ ಮೂವರು ಕಾರ್ಮಿಕರು ಬೇಕಾಗುತ್ತದೆ. ಆದರೆ ಇದಕ್ಕೆ ಪರ್ಯಾವಾಗಿ ಹೆಚ್ಚಿನ ಕೆಸಲ ಒಂದೇ ದಿನದಲ್ಲಿ ಮುಗಿಸಲು ದ್ವಿಚಕ್ರವಾಹನದ ಮೂಲಕ ಎಡೆ ಸಾಗುಮಾಡುವ ಪರ್ಯಾಯ ಮಾರ್ಗವನ್ನು ಕಂಡುಕೊoಡು ಇನ್ನೊಬ್ಬರಿಗೆ ಪ್ರೇರಣೆಯಾಗಿದ್ದಾರೆ.
ಕಡಿಮೆ ವೆಚ್ಚದಲ್ಲಿ ಕೃಷಿ ಕಾರ್ಯಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಉದ್ದೇಶದಿಂದ ಮೋಟಾರ್ಸೈಕಲ್ಗೆ ಕೃಷಿ ಉಪಕರಣವನ್ನು ಅಳವಡಿಸಿಕೊಂಡು ರೈತ ಮಹಾದೇವಪ್ಪ ಕಂಬಾರ ಅವರು ತಮ್ಮ ಹೊಲದಲ್ಲಿ ಬೆಳೆಯಲ್ಲಿ ಎಡೆ ಸಾಗುಮಾಡಿ ಸಮಯ ಹಾಗೂ ಖರ್ಚು ಉಳಿಸಿದ್ದು ಅಲ್ಲದೆ, ಎತ್ತುಗಳ ಮೂಲಕ ದಿನಕ್ಕೆ ೨ಎಕರೆ ಎಡೆ ಸಾಗುಮಾಡಿದರೆ ಈ ದ್ವಚಕ್ರ ವಾಹನದ ಸಹಾಯದಿಂದ ದಿನಕ್ಕೆ ೬ ಎಕರೆ ಬೆಳೆಯಲ್ಲಿ ಎಡೆ ಸಾಗುಮಾಡಬಹುದಾಗಿದೆ ಎಂದು ರೈತ ಮಹಾದೇವಪ್ಪ ಕಂಬಾರ ಹೇಳಿಕೊಂಡಿದ್ದಾರೆ.
ಇಂದು ದುಬಾರಿ ವೆಚ್ಚದ ಕೃಷಿ ಕೆಲಸಕ್ಕೆ ಕಾರ್ಮಿಕರ ಕೊರತೆ, ಹೆಚ್ಚುತ್ತಿರುವ ಕೂಲಿ ವೆಚ್ಚ ಹಾಗೂ ಸಮಯದ ಅಭಾವದ ಹಿನ್ನೆಲೆಯಲ್ಲಿ ಸಣ್ಣ ಮತ್ತು ಮಧ್ಯಮ ರೈತರಿಗೆ ಇಂತಹ ಸ್ಥಳೀಯ ತಂತ್ರಜ್ಞಾನ ಆಧಾರಿತ ಪ್ರಯೋಗಗಳು ಆಶ್ರಯಿಸತೊಡಗಿದ್ದಾರೆ. ಹೊಲದಲ್ಲಿ ಕಳೆ ನಿಯಂತ್ರಣ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಯಾಂತ್ರೀಕರಣ ಅಳವಡಿಸಿಕೊಳ್ಳುವುದರಿಂದ ರೈತರ ಶ್ರಮ ಹಾಗೂ ಸಮಯ ಉಳಿತಾಯಕ್ಕೆ ಮುಂದಾಗಿದ್ದಾರೆ.
ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದರ ಜೊತೆಗೆ, ರೈತರಿಗೆ ಕೈಗೆಟುಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು ಲಭ್ಯವಾಗುವಂತೆ ಸಂಬoಧಿಸಿದ ಇಲಾಖೆ ಹಾಗೂ ಕೃಷಿ ಸಂಸ್ಥೆಗಳು ಉತ್ತೇಜನ ನೀಡಬೇಕು ಎಂಬುದು ರೈತರು ಒತ್ತಾಯಿಸಿದ್ದಾರೆ.