Shubhashaya News

ವಾರ್ಡ್‌ 52ರಲ್ಲಿ 1.45 ಕೋಟಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಲಬುರಗಿ: ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್‌ 52ರ ಹೈಕೋರ್ಟ್‌ ಪಕ್ಕದ ಕೆಎಚ್‌ಬಿ ಅಕ್ಕ ಮಹಾದೇವಿ ಕಾಲೋನಿಯಲ್ಲಿ 1.45 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಿರುವ ಸಂಪರ್ಕ ರಸ್ತೆ ಕಾಮಗಾರಿಗೆ ರವಿವಾರ ಶಾಸಕ ಅಲ್ಲಂಪ್ರಭು ಪಾಟೀಲ ಅಡಿಗಲ್ಲು ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಕೆಆರ್‌ಡಿಬಿಯ 4.90 ಕೋಟಿ ಪ್ಯಾಕೇಜ್‌ ಅನುದಾನವನ್ನು ನಗರದ ವಿವಿಧ ಬಡಾವಣೆಗಳ ಅಭಿವೃದ್ಧಿಗೆ ಬಳಸಲಾಗುತ್ತಿದೆ. ನಿಜಾಂಪೂರ, ಕಮಲಾ ನಗರ, ಓಝಾ ಬಡಾವಣೆ, ಕುರುಬ ನಗರ, ಸಾವಿತ್ರಿಬಾಯಿ ಫುಲೆ ಬಡಾವಣೆ, ವೆಂಕಟೇಶ ನಗರ, ಗಿರಿ ಬಡಾವಣೆ ಹಾಗೂ ಶರಣ ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

ಅಭಿವೃದ್ಧಿ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಳ್ಳಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಲಿಂಗರಾಜ ತಾರಫೈಲ್‌, ಧರ್ಮರಾಜ ಹೆರೂರ್‌, ಸುಶೀಲ್ ಮಮದೆ, ರವಿ ಕೊಳ್ಳೂರ, ದಯಾನಂದ ಸ್ವಾಮಿ, ರಾಣಪ್ಪ, ಬಾಬು, ಚಂದ್ರಕಾಂತ ಸೇರಿದಂತೆ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Leave A Reply

Your email address will not be published.