ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜು ಎನ್ಪಿಟಿಇಎಲ್ (NPTEL) ಆನ್ಲೈನ್ ಕಲಿಕಾ ತರಬೇತಿಯಲ್ಲಿ ಅತ್ಯುತ್ತಮ ಭಾಗವಹಿಸುವಿಕೆ ದಾಖಲಿಸುವ ಮೂಲಕ ಸತತ ನಾಲ್ಕನೇ ಬಾರಿಗೆ ‘ವಿಶೇಷ ಸಕ್ರಿಯ ಕಂಟೆಂಡರ್’ ವರ್ಗದ ಪ್ರಶಸ್ತಿಗೆ ಭಾಜನವಾಗಿದೆ.
ಸ್ವಯಂ ಎನ್ಪಿಟಿಇಎಲ್ ವತಿಯಿಂದ ಐಐಟಿ ಮದ್ರಾಸ್ನಲ್ಲಿ ಜುಲೈ 11ರಂದು ಆಯೋಜಿಸಿದ್ದ ‘ಸ್ಪೋಕ್’ ಸನ್ಮಾನ ಕಾರ್ಯಾಗಾರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಲೇಜಿನ ಪರವಾಗಿ ಎನ್ಪಿಟಿಇಎಲ್ ಸಿಂಗಲ್ ಪಾಯಿಂಟ್ ಆಫ್ ಕಾಂಟ್ಯಾಕ್ಟ್ ಹಾಗೂ ಕೌಶಲ್ಯ ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಡಾ. ಜಯಶ್ರೀ ಅಗರಖೇಡ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಎನ್ಪಿಟಿಇಎಲ್ ಚಟುವಟಿಕೆಗಳಲ್ಲಿ ಕಾಲೇಜು ‘ಸಕ್ರಿಯ ಅಧ್ಯಾಯ’ದಿಂದ ‘ಆಕಾಂಕ್ಷಿ’ ಹಾಗೂ ನಂತರ ‘ಕಂಟೆಂಡರ್’ ಹಂತದವರೆಗೆ ನಿರಂತರ ಪ್ರಗತಿ ಸಾಧಿಸಿದ್ದು, ಅತ್ಯುತ್ತಮ ಭಾಗವಹಿಸುವಿಕೆಯ ಮೂಲಕ ಈ ಗೌರವಕ್ಕೆ ಪಾತ್ರವಾಗಿದೆ.
ಸಂಸ್ಥೆಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಅವರ ನಿರಂತರ ಪ್ರೋತ್ಸಾಹ ಮತ್ತು ಬೆಂಬಲದಿಂದ ಕಾಲೇಜು ಸತತ ನಾಲ್ಕನೇ ಬಾರಿಗೆ ಎನ್ಪಿಟಿಇಎಲ್ ವಿಶೇಷ ಸಕ್ರಿಯ ಕಂಟೆಂಡರ್ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರಶಸ್ತಿ ಸ್ವೀಕರಿಸಿದ ಡಾ. ಜಯಶ್ರೀ ಅಗರಖೇಡ್ ಅವರನ್ನು ಸಂಸ್ಥೆಯ ಅಧ್ಯಕ್ಷ ಶಶೀಲ್ ಜಿ. ನಮೋಶಿ, ಉಪಾಧ್ಯಕ್ಷ ರಾಜಾ ಭೀಮಳ್ಳಿ, ಕಾರ್ಯದರ್ಶಿ ಉದಯಕುಮಾರ ಚಿಂಚೋಳಿ, ಜಂಟಿ ಕಾರ್ಯದರ್ಶಿ ಡಾ. ಕೈಲಾಶ್ ಪಾಟೀಲ, ಆಡಳಿತ ಮಂಡಳಿ ಸದಸ್ಯರು, ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಆರ್. ಪಾಟೀಲ, ಡಾ. ಪವನ್ ರಂಗದಾಳ, ಡಾ. ರಾಕೇಶ್ ಹುಡೇದ ಹಾಗೂ ಡಾ. ಶಿವಕುಮಾರ ಬಿಲಗುಂದಿ ಅಭಿನಂದಿಸಿದ್ದಾರೆ.