ಆಳಂದ: ದಲಿತ ಸೇನೆ (ರಾಮ್ ವಿಲಾಸ್) ಸಂಘಟನೆಯ ಆಳಂದ ತಾಲೂಕು ಸಮಿತಿಯ ಪದಾಧಿಕಾರಿಗಳ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ, ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಂದ್ರ ಕೆ. ಜವಳಿ ಅವರ ಆದೇಶದಂತೆ ಪ್ರಸ್ತುತ ತಾಲೂಕು ಸಮಿತಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ವಿಸರ್ಜಿಸಲಾಗಿದೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ದಲಿತ ಸೇನೆ (ರಾಮ್ ವಿಲಾಸ್) ಜಿಲ್ಲಾ ಅಧ್ಯಕ್ಷ ಶ್ರಾವಣ ಕುಮಾರ್ ಮೊಸಲಗಿ ಅವರು, ನೂತನ ಸಮಿತಿ ರಚನೆಯಾಗುವವರೆಗೆ ಹಾಲಿ ಸಮಿತಿಯ ಹೆಸರಿನಲ್ಲಿ ಹೊರಡಿಸಲಾಗುವ ಯಾವುದೇ ಪತ್ರ ಅಥವಾ ದಾಖಲೆಗಳು ಚಾಲ್ತಿಯಲ್ಲಿ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಂಘಟನೆಯ ಎಲ್ಲ ಸದಸ್ಯರು ಹಾಗೂ ಸಾರ್ವಜನಿಕರು ಈ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.
Prev Post