ಆಳಂದ: ಬಸವರಾಜ ಪಾಟೀಲ ಮುರುಮ ಅವರು ಮಹಾರಾಷ್ಟç ವಿದಾನ ಪರಿಷತ್ತಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಪಾಟೀಲ ಕುಟುಂಬ ಸಮೇತ ಅಭಿಮಾನಿಗಳು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಆಳಂದ: ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರ ಸಹೋದರ, ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಬಸವರಾಜ ಪಾಟೀಲ ಮರುಮ್ ಅವರು ಧಾರಾಶಿವ–ಲಾತೂರ–ಬೀಡ ಜಿಲ್ಲೆಗಳ ಸ್ಥಳೀಯ ಸಂಘ–ಸAಸ್ಥೆಗಳ ವಿಧಾನ ಪರಿಷತ್ ಕ್ಷೇತ್ರದಲ್ಲಿ ೮೫೦ ಮತಗಳ ಅಂತರದಿAದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಈ ಗೆಲುವು ಆಳಂದ ಪಟ್ಟಣದಲ್ಲಿ ಅಪಾರ ಸಂಭ್ರಮ ಮತ್ತು ಸಡಗರ ಮೂಡಿಸಿದ್ದು, ಕುಟುಂಬಸ್ಥರು, ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬೀದಿಗಿಳಿದು ಉತ್ಸಾಹದಿಂದ ವಿಜಯೋತ್ಸವ ಆಚರಿಸಿದರು.
ಎರಡು ಬಾರಿ ಶಾಸಕರಾಗಿ ಹಾಗೂ ಒಮ್ಮೆ ಸಚಿವರಾಗಿ ಮಹಾರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಬಸವರಾಜ ಪಾಟೀಲ ಮರುಮ್ ಅವರು, ಈ ಗೆಲುವಿನ ಮೂಲಕ ವಿಧಾನ ಪರಿಷತ್ ಸದಸ್ಯರಾಗಿ ಮತ್ತೊಮ್ಮೆ ಆಯ್ಕೆಯಾಗಿ ತಮ್ಮ ರಾಜಕೀಯ ಛಾಪು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ. ದಶಕಗಳ ಜನಸೇವೆ, ಅಚಲ ಲೋಕಪ್ರಿಯತೆ ಮತ್ತು ಮತದಾರರ ಅಚಲ ವಿಶ್ವಾಸವೇ ಈ ಗೆಲುವಿನ ಮೂಲ ಶಕ್ತಿ ಎಂದು ಬೆಂಬಲಿಗರು ಅಭಿಪ್ರಾಯಪಟ್ಟರು.
ಫಲಿತಾಂಶ ಹೊರಬೀಳುತ್ತಿದ್ದಂತೆ ಆಳಂದದ ಪಾಟೀಲ ಮನೆತನದ ಆವರಣ, ಏಕನಾಥ ಮಹಾರಾಜ ಮಂದಿರ, ಬಸ್ ನಿಲ್ದಾಣ, ಶ್ರೀ ರಾಮ ಮಾರುಕಟ್ಟೆ ಹಾಗೂ ಗ್ರಾಮ ದೇವತಾ ಹನುಮಾನ ಮಂದಿರದ ಬಳಿ ಪ್ರತ್ಯೇಕ ಪ್ರತ್ಯೇಕವಾಗಿ ಪಟಾಕಿ–ರಾಕೆಟ್ ಸಿಡಿಸಿ, ಸಿಹಿ ಹಂಚಿ ಸಂತಸ ಹಂಚಿಕೊಳ್ಳಲಾಯಿತು. ಅಭಿಮಾನಿಗಳ ಉಲ್ಲಾಸ, ಕಾರ್ಯಕರ್ತರ ಜೋಶ್ ಮತ್ತು ಕುಟುಂಬಸ್ಥರ ಹರ್ಷೋದ್ಗಾರ ಇಡೀ ಪಟ್ಟಣದ ವಾತಾವರಣವನ್ನು ಉತ್ಸವಮಯಗೊಳಿಸಿತು.
ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ್ ಅವರು, “ನಮ್ಮ ಮನೆತನದ ಕುಡಿ ಶಾಸಕರಾಗಿ, ಸಚಿವರಾಗಿ ಅನುಪಮ ಸೇವೆ ಸಲ್ಲಿಸಿ, ಈಗ ಮತ್ತೊಮ್ಮೆ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವುದು ನಮ್ಮ ಇಡೀ ಕುಟುಂಬಕ್ಕೆ ಅಪಾರ ಹೆಮ್ಮೆ ಮತ್ತು ಸಂತಸ ತಂದಿದೆ. ಅವರ ಜನಪ್ರಿಯತೆ ಮತ್ತು ಸಮಾಜ ಸೇವೆಯನ್ನು ಮತದಾರರು ಮತ್ತೊಮ್ಮೆ ಗುರುತಿಸಿ ಅಭೂತಪೂರ್ವ ಬೆಂಬಲ ನೀಡಿದ್ದಾರೆ” ಎಂದು ಭಾವುಕರಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನ್ಯಾಯವಾದಿ ಬಾಬಾ ಸಾಹೇಬ ವಿ. ಪಾಟೀಲ್, ಕುಮಾರಿ ವಿಜಯಲಕ್ಷ್ಮಿ ಬಿ. ಪಾಟೀಲ್, ಬಿಜೆಪಿ ತಾಲೂಕ ಉಪಾಧ್ಯಕ್ಷ ಶರಣಗೌಡ ಪಾಟೀಲ್ ಅವರು ವಿಜೇತರನ್ನು ಶ್ಲಾಘಿಸಿ ಮಾತನಾಡಿದರು. ಬಿಜೆಪಿ ಜಿಲ್ಲಾ ಮಾಧ್ಯಮ ಪ್ರತಿನಿಧಿ ಆನಂದರಾವ್ ಪಾಟೀಲ್, ವೀರಶೈವ ಲಿಂಗಾಯತ ಮಹಾಸಭಾ ಉಪಾಧ್ಯಕ್ಷ ಶ್ರೀಶೈಲ ಖಜೂರಿ, ಶಿವಾನಂದ ಪಾಟೀಲ ಕೊರಳಿ, ಬಸವರಾಜ ಬಿ. ಪಾಟೀಲ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಆಳಂದದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಸವರಾಜ ಪಾಟೀಲ ಮರುಮ್ ಅವರನ್ನು ವಿಶೇಷವಾಗಿ ಆಳಂದಕ್ಕೆ ಆಹ್ವಾನಿಸಿ ಭವ್ಯ ಅಭಿನಂದನ ಸಮಾರಂಭ ಹಮ್ಮಿಕೊಳ್ಳಲು ನಿರ್ಧರಿಸಿದ್ದು, ಇದಕ್ಕಾಗಿ ಸಿದ್ಧತೆಗಳು ಭರದಿಂದ ಸಾಗಿವೆ. ಈ ಸಮಾರಂಭ ರಂಗಾರAಗವಾಗಿ ಮತ್ತು ಅವಿಸ್ಮರಣೀಯವಾಗಿ ನಡೆಯಲಿದೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.