Shubhashaya News

ಆಳಂದನಲ್ಲಿ ಬಸವ ಜಯಂತಿ ಉತ್ಸವ ಅದ್ಧೂರಿ ೨೪ಕ್ಕೆ

ಆಳಂದ: ಪಟ್ಟಣದಲ್ಲಿ ಬಸವ ಜಯಂತಿ ಉತ್ಸವ ಆಚರಣೆ ವಾಲಪೋಸ್ಟ್ರ ಅನ್ನು ಸಿದ್ಧೇಶ್ವರ ಶಿವಾಚಾರ್ಯರು ಬಿಡುಗಡೆಗೊಳಿಸಿದರು. ಅಧ್ಯಕ್ಷ ಆನಂದ ಪಾಟೀಲ, ಸೋಮಶೇಖರ ಮುಲಗೆ, ಬಿ.ವಿ.ಪಾಟೀಲ, ನಾಗರಾಜ ಶೇಗಜಿ ಇತರರು ಇದ್ದರು.

ಆಳಂದ: ಪಟ್ಟಣದಲ್ಲಿ ವಿಶ್ವಗುರು ಬಸವಣ್ಣನವರ ೮೯೩ನೇ ಜಯಂತ್ಯೋತ್ಸವ ಅಂಗವಾಗಿ ಬಸವ ಸಂಗಮ ಕಾರ್ಯಕ್ರಮ ಜೂನ್ ೨೪ರಂದು ಸಂಜೆ ೫:೦೦ ಗಂಟೆಗೆ ಪಟ್ಟಣದ ಶ್ರೀರಾಮ ಮಾರುಕಟ್ಟೆಯಲ್ಲಿ ನಡೆಯಲಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಆನಂದ ಕೆ. ಪಾಟೀಲ, ಉಪಾಧ್ಯಕ್ಷ ಸೋಮಶೇಖರ ಮುಲಗೆ ಅವರು ಜಂಟಿಯಾಗಿ ಪ್ರಕಟಿಸಿದ್ದಾರೆ.
ಈ ಕುರಿತು ಪಟ್ಟಣದ ವೀರಶೈವ ಲಿಂಗಾಯತ ಭವನದಲ್ಲಿ ಶುಕ್ರವಾರ ಜಯಂತಿ ಆಚರಣೆ ನಿಮಿತ್ತ ಕರೆದ ಸುದ್ದಿಗೋಷ್ಠಿಯಲ್ಲಿ ಉತ್ಸವದ ವಾಲ್‌ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಂದು ಮಧ್ಯಾಹ್ನ ೩೦ ಕ್ಕೆ ಲಿಂಗಾಯತ ಭವನದ ಬಸವೇಶ್ವರ ಪ್ರತಿಮೆಗೆ ಪೂಜೆ ನೆರವೇರಿಸಿ ವಚನ ಜ್ಞಾನ ಬಂಡಾರ ಪುಸ್ತಕ ಮೆರವಣಿಗೆ ಹಾಗೂ ತಾಯಂದಿರಿAದ ಕುಂಬೋತ್ಸವದ ಜೊತೆ ಭವ್ಯಶೋಭಾ ಯಾತ್ರೆಯೊಂದಿಗೆ ಶ್ರೀರಾಮ ಮಾರುಕಟ್ಟೆಗೆ ತಲುಪಿದ ಬಳಿಕೆ೫:೦೦ಗಂಟೆಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮತ್ಯುಂಜಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭಕ್ಕೆ ಅತಿವೇರಿ ಬಸವ ಧಾಮದ ಶ್ರೀ ಬಸವೇಶ್ವರಿ ಮಹಾತಾಜೀ ಸೇರಿದಂತೆ ತಾಲೂಕಿನ ಎಲ್ಲಾ ಮಠಾಧೀಶರು, ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಆನಂದ ಪಾಟೀಲ ಮತ್ತು ಸೋಮಶೇಖರ ಮೂಲಗೆ ಅವರು ಹೇಳಿದರು.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಸವ ಅನುಯಾಯಿಗಳು ಭಾಗವಹಿಸಿ ಉತ್ಸವ ಮತ್ತು ಸಮಾರಂಭ ಯಶಸ್ವಿಗೊಳಿಸಬೇಕು ಎಂದು ಜಯಂತಿ ಉತ್ಸವ ಸಮಿತಿ ಗೌರವ ಅಧ್ಯಕ್ಷ ಸಿದ್ಧೇಶ್ವರ ಶಿವಾಚಾರ್ಯರು, ನ್ಯಾಯವಾದಿ ಬಿ.ವಿ.ಪಾಟೀಲ, ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಶೇಗಜಿ,ಮಹೇಶ ಗೌಳಿ, ಶ್ರೀಶೈಲ ಖಜೂರಿ, ತಂಬಾಕವಾಡಿಯ ಅಶೋಕ ಹತ್ತರಕಿ, ಲಿಂಗರಾಜ ಪಾಟೀಲ, ಶರಣು ಕುಮಸಿ,ರಮೇಶ ಬಾಳಿ ಅವರು ಮನವಿ ಮಾಡಿದರು.
ಈ ಸಂದರ್ಬದಲ್ಲಿ ಧರೆಪ್ಪ ಜಕಾಪೂರೆ, ಈರಣ್ಣಾ ಹತ್ತರಕಿ ಉತ್ಸವ ಸಮಿತಿಯ ಕಾರ್ಯಕರ್ತರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave A Reply

Your email address will not be published.