Shubhashaya News

ಇದು ತಿರುಮಲ ಬೆಟ್ಟದ ಒಡೆಯ “ವರಾಹ ಸ್ವಾಮಿ” ವಿಸ್ಮಯದ ಕಥೆ

ತಿರುಪತಿ ತಿರುಮಲ ಬಗ್ಗೆ ಅದೆಷ್ಟು ಹೇಳಿದರು ಕಡಿಮೆಯೇ ಈ ಗಿರಿಗಳ ಗಿರಿ ಅನೇಕ ವಿಸ್ಮಯಗಳನ್ನು, ದಂತಕಥೆಗಳನ್ನು, ಪೌರಾಣಿಕ ಹಿನ್ನೆಲೆಗಳನ್ನು, ಲೀಲೆಗಳನ್ನು, ಮಹಿಮೆಗಳನ್ನು, ಪುಣ್ಯವನ್ನು ಹೊಂದಿದ್ದು ಅಲ್ಲದೆ ಸಾಕ್ಷಾತ್ ಪರಬ್ರಹ್ಮ ಶ್ರೀನಿವಾಸ ದೇವರು ಕಲಿಯುಗಕ್ಕಾಗಿ ನೆಲೆನಿಂತಹ ಪಾವನ ಭೂಮಿಯಾಗಿದೆ, ಬರೆ ಶ್ರೀನಿವಾಸ ದೇವರು ಒಂದೇ ಅಲ್ಲ ವಿಷ್ಣುವಿನ ಅವತಾರವೇ ಆದ “ವರಾಹ ಸ್ವಾಮಿ” ಕೂಡ ಇಲ್ಲಿಯೇ ನೆಲೆನಿಂತಹ ಗಿರಿಯಾಗಿದೆ.

ಈ ಇಡೀ ಗಿರಿ ಯಾರದು ಗೊತ್ತಾ?! ಇಡೀ ಗಿರಿಯ ಒಡೆಯ ಅಥವಾ ವಾಸಸ್ಥ ಬೇರೆಯಾರು ಅಲ್ಲ ಅವನೇ ಅಲ್ಲಿ ಶ್ರೀನಿವಾಸ ದೇವರಿಗಿಂತಲೂ ಮುಂಚೆಯಿಂದ ನೆಲೆಯಾಗಿರುವ ತಿರುಮಲ ಬೆಟ್ಟದ ದೈವ “ವರಾಹ ಸ್ವಾಮಿ” ದೇವರು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಸಪ್ತ ಗಿರಿ ಅಂತ ಕರೆಸಿಕೊಂಡು ಇನ್ನೂ ಅನೇಕ ಹೆಸರುಗಳಿಂದ ಕರೆಸಿಕೊಳ್ಳುವ ಈ ತಿರುಮಲ ಅನ್ನೋ, ಈ ಗಿರಿ/ ಬೆಟ್ಟ ಸೇರಿದ್ದು ಮಾತ್ರ ” ವರಾಹ ಸ್ವಾಮಿ” ಗೆ. ಈ ಗಿರಿಯ ಅಧಿದೇವತೆ “ವರಾಹ ಸ್ವಾಮಿ”, ಇದಕ್ಕಾಗಿಯೇ ಈ ಗಿರಿಯನ್ನು “ಆದಿ ವರಾಹಗಿರಿ ” ” ಆದಿವರಾಹ ಕ್ಷೇತ್ರ” ಅಂತಾನು ಕರೀತಾರೆ, ಹಿರಣ್ಯಾಕ್ಷಣನ್ನು ಸಂಹಾರ ಮಾಡಿ ವಿಷ್ಣುವು ಈ ಬೆಟ್ಟದಲ್ಲಿ ಭೂದೇವಿ ಸಹಿತ ವರಾಹಸ್ವಾಮಿ ರೂಪದಲ್ಲಿ ಶಾಶ್ವತವಾಗಿ ಈ ಬೆಟ್ಟದಲ್ಲಿ ನೆಲೆಯಾಗಿದ್ದಾನೆ.

ಭಗವಂತನ ಕಾರುಣ್ಯ ನಮ್ಮ ಮೇಲೆ ಎಂತಹದು ನೋಡಿ
ಶ್ರೀನಿವಾಸ ಸ್ವಾಮಿ ಅಲ್ಲದೆ ವರಾಹ ಸ್ವಾಮಿಯು ನಮಗಾಗಿ ಕರ್ಮಠ ಕಲಿಯುಗಕ್ಕೆ ಇಲ್ಲಿ ಸ್ಥಾಪನೆಯಾಗಿರೋದು. ನಮ್ಮಗಳ ಪುಣ್ಯ, ತಿರುಮಲದ ಆದ್ರಿಯಲ್ಲಿ ಇಬ್ಬರು ದೇವರುಗಳು ನಮಗಾಗಿ ನಮ್ಮ ಉದ್ಧಾರಕ್ಕಾಗಿ ಇಲ್ಲಿರೋದು.

ಲೋಕೋದ್ಧಾರಕ್ಕೆ ಭಗವಂತ ಅನೇಕ ಅವತಾರಗಳನ್ನು ಎತ್ತಿರುವಂತೆ ಭಿನ್ನ ಅವತಾರಗಳ ಸಮಾಗಮ ಆಗೋದು ಅಪರೂಪ,ಅಂಥದೇ ದೇವ ಕಲ್ಪಗಳ ಸಮಾಗಮ ಈ ಬೆಟ್ಟದಲ್ಲಿ ಆಗಿದ್ದು..

ಅದೇ.. ಕಥೆ ನಮಗೆಲ್ಲ ಗೊತ್ತಿದ್ದೇ ಇದೆ ಭೃಗು ಮುನಿಗಳ ಕೋಪಕ್ಕೆ ಲಕ್ಷ್ಮಿದೇವಿಯಿಂದ ಪರಿತ್ಯಕ್ತನಾಗಿ ದುಃಖದಲ್ಲಿ ಶ್ರೀನಿವಾಸ ದೇವರು ಭೂಮಿಗೆ ಬಂದು ಹುತ್ತದಲ್ಲಿ ಆಶ್ರಯ ಪಡೆದಿದ್ದು ಭಗವಂತನ ಇರುವಿಕೆ ಅರಿತ ಗೋವು (ಬ್ರಹ್ಮ ದೇವರು) ದಿನವೂ ಅಲ್ಲಿ ಹುತ್ತದೊಳಗೆ ಹಾಲು ಸ್ಪುರಿಸುವುದು, ಹಾಲುಕೊಡದ ಗೋವನ್ನು ಬೆನ್ನಟ್ಟಿ ಬಂದ ಗೋಪಾಲ ಅರಿಯದೆ ದೇವರ ತಲೆಗೆ ಕೊಡಲಿ ಏಟು ಕೊಟ್ಟದ್ದು ಶ್ರೀನಿವಾಸ ಹಣೆಯಿಂದ ರಕ್ತ ಬಿದ್ದದ್ದು ಆಮೇಲೆ ಶ್ರೀನಿವಾಸ ಕಲ್ಯಾಣವಾಗಿದ್ದು,
ಆ ಹುತ್ತ ಇದ್ದ ಸ್ಥಳವೇ ಇದೆ ಆದಿ ವರಾಹ ಗಿರಿ, ಪದ್ಮಾವತಿಯ ಕಲ್ಯಾಣಕ್ಕಾಗಿ ನಮಗಾಗಿ ನಮ್ಮ ಉದ್ಧಾರಕಾಗಿ ಶ್ರೀನಿವಾಸ ದೇವರು ಭೂಲೋಕದಲ್ಲಿ ನೆಲೆಯಾಗಲು ಬಯಸಿದ್ದು ಆರಿಸಿ ಬಂದದ್ದು ಇದೆ ವರಾಹ ಗಿರಿಗೆ, ಬಂದು ಭೇಟಿಯಾದದ್ದು ಇಲ್ಲಿನ ಒಡೆಯ “ವರಾಹ ಸ್ವಾಮಿಯನ್ನ “.

ತಾನಿಲ್ಲಿ ನೆಲೆಯಾಗಲು ಜಾಗ ಕೊಡೆಂದು ಬೇಡಿ, ವರಾಹ ಸ್ವಾಮಿಯು ಬೆಲೆಕೊಟ್ಟು(ಹಣ ನೀಡಿ) ಜಾಗ ಖರೀದಿ ಹೇಳಲು(ಇದೆ ಅಲ್ಲವೇ ಲೋಕ ವಿಡಂಬನೆಗೆ ಕಲಿಯುಗದ ಜನರು ಮುಂದೆ ಹೀಗೆ ವ್ಯಾಪಾರ ವ್ಯವಹಾರ ಮಾಡುತ್ತಾರೆ ಅನ್ನೋ ಸೂಚ್ಯವೂ ಭವಿಷ್ಯವು ಸ್ವಾಮಿ ತಿಳಿಸಿದ ರೀತಿ ) ತಾನು ನಿರ್ಗತಿಗ ಅಂತ ಹೇಳಲು, ಮುಂದೆ ತನ್ನ ದರುಶನಕ್ಕೆ ಬರುವ ಜನರು ಮೊದಲು ನಿನ್ನ ದರುಶನ ಮಾಡಲಿ, ಮೊದಲು ನಿನಗೆ ಪೂಜೆ ಸಲ್ಲಿಸಲಿ, ಮೊದಲು ನೈವೇದ್ಯ ಕೂಡ ನಿನಗೆ ಸಲ್ಲಿಸಿದ ನಂತರವೇ ನನ್ನ ಪೂಜೆ ನೈವೇದ್ಯ ಹಾಗೂ ದರುಶನ ದ ಸರದಿ ಅನ್ನೋ ವಾಗ್ದಾನವನ್ನು ವರಾಹ ಸ್ವಾಮಿ ಗೆ ನೀಡಿದ ನಂತರವೇ ವರಾಹ ಸ್ವಾಮಿ ಜಗದೊಡೆಯ ಶ್ರೀನಿವಾಸ ದೇವರಿಗೆ ಜಾಗ ನೀಡಿದ ಅನ್ನೋ ಪೌರಾಣಿಕ ಇತಿಹಾಸ, ಹಿನ್ನಲೆ ಇಲ್ಲಿಯದು.

ಲೋಕ ವಿಡಂಬನೆಗಾಗಿ ವರಾಹ ಸ್ವಾಮಿಯಿಂದ ಭೂಮಿಯನ್ನು ಪಡೆದು ಮೊದಲು ಪೂಜೆ ಸಲ್ಲುವ ಗೌರವ ಕೊಟ್ಟಂತಹ ಘಳಿಗೆಯನ್ನು, {ತನ್ನ ಕಲ್ಯಾಣಕ್ಕೆ ಕುಬೇರನಿಂದ ಹಣ ಪಡೆದಿರುವುದಕ್ಕೆ ಸಾಕ್ಷಿಯಾಗಿ ತಿರುಪತಿಯಲ್ಲಿ ಗೋವಿಂದರಾಜ ಸ್ವಾಮಿ ನಿಂತಿರುವುದು ಅದರ ಗೌರವಕ್ಕೆ ಅವನಿಗೆ ಅಲ್ಲಿ ಮೊದಲು ಪೂಜೆ ಅನ್ನೋ ಗೌರವ (ಹಿಂದಿನ ಲೇಖನದಲ್ಲಿ ಬರೆದಿದ್ದೇನೆ) ಕುಬೇರನಿಂದ ಹಣದ ಸಾಲವನ್ನು ಪಡೆದು(ಸಾಕ್ಷಿಯಾಗಿ ಕುಬೇರನಿಗಾಗಿ ವಿಮಾನ ವೆಂಕಟರಮಣನಾದ ಲೇಖನವನ್ನು ಹಿಂದೆ ಇಲ್ಲಿಯೇ ಬರೆದಿದ್ದೇನೆ) ಗಮನಿಸಬಹುದು}

ವರಾಹ ಸ್ವಾಮಿಯ ಜೊತೆಗಿನ ವ್ಯಾಪಾರವನ್ನು ನೋಡಲು ಕಲಿ ಜನರ ಮೇಲಿನ ಕರುಣೆಗೆ ಪರಬ್ರಹ್ಮನ ಕಲ್ಪಗಳ ಆಟವನ್ನು ಒಂದು ಕಲ್ಪದಲ್ಲಿ ವಿಷ್ಣುವಿನ ಅವತಾರವೇ ಆದ ಶ್ರೀನಿವಾಸ ದೇವರು ತನಗೆ ಭೂಮಿ ಪಡೆಯಲು ವಿಷ್ಣುವಿನ ಅವತಾರವೇ ಆದ ವರಾಹ ಸ್ವಾಮಿಯ ಕಡೆ ಬಂದಂತಹ ದಿವ್ಯ ಸಮಾಗಮವನ್ನು ನೋಡಲು ಆಕಾಶದ ತುಂಬಾ ದೇವಾನು ದೇವತೆಗಳು ನೆರೆದು ಕಣ್ಣು ತುಂಬಿಕೊಂಡು ಇಬ್ಬರ ಮೇಲೆಯೂ ಪುಷ್ಪ ವೃಷ್ಟಿ ಮಾಡಿದ್ದರು, ಇದನ್ನು ಬ್ರಹ್ಮಾಂಡ ಪುರಾಣವು ಉಲ್ಲೇಖಿಸಿದೆ.
ಇಂತಹ ವರಾಹ ಸ್ವಾಮಿ ಶ್ರೀನಿವಾಸನಿಗೆ ಜಾಗ ಕೊಟ್ಟಿದ್ದು ತನ್ನ ಉತ್ತರಕ್ಕೆ, ವರಾಹ ಸ್ವಾಮಿಯ ಉತ್ತರಕ್ಕೆ ವೈಕುಂಠ ಅಂತ ಕರೆಸಿಕೊಳ್ಳುವ ಶ್ರೀನಿವಾಸ ದೇವಸ್ಥಾನವಿರೋದು..

ಅಲ್ಲೇ ಸ್ವಾಮಿ ಪುಷ್ಕರಣಿ ಇದೆಯಲ್ಲ ಅದರ ವಾಯವ್ಯ ದಿಕ್ಕಿಗೆ ಅದಕ್ಕೆ ಹೊಂದಿಕೊಂಡಂತೆ ಇರೋದೇ
” ವರಾಹ ಸ್ವಾಮಿ” ದೇವಸ್ಥಾನ.
ಶ್ರೀನಿವಾಸ ದೇವರಿಗಿಂತಲೂ ಮುಂಚೆ ಅಲ್ಲಿ ಮೊದಲು ಪೂಜೆ ನೈವೇದ್ಯ ನಡೆಯೋದು, ಸ್ಥಳ ಇತಿಹಾಸ ಗೊತ್ತಿರುವ ಜನರು
ಮೊದಲು ತಿರುಪತಿಯಲ್ಲಿನ ಗೋವಿಂದರಾಜ ಸ್ವಾಮಿಯನ್ನು ದರ್ಶಿಸಿ ತಿರುಮಲ ಬೆಟ್ಟಕ್ಕೆ ಬಂದು ಇಲ್ಲಿ ಮೊದಲು
“ವರಾಹ ಸ್ವಾಮಿಯನ್ನು” ದರುಶನ ಮಾಡಿಕೊಂಡ ನಂತರವೇ ಶ್ರೀನಿವಾಸ ದೇವರ ದರ್ಶನಕ್ಕೆ ತೆರಳುತ್ತಾರೆ…
ಈಗಲೂ ಇದೇ ಸಂಪ್ರದಾಯವನ್ನು ಇಲ್ಲಿ ಪಾಲಿಸಿಕೊಂಡು ಬರಲಾಗುತ್ತಿದೆ, ವರಾಹ ಸ್ವಾಮಿಗೆ ಮೊದಲು ಪೂಜೆ ನೈವೇದ್ಯ ಜರುಗಿದ ನಂತರವೇ ಶ್ರೀನಿವಾಸ ದೇವರಿಗೆ ಪೂಜೆ ನೈವೇದ್ಯ ನಡೆಯುತ್ತವೆ.
ಶ್ರೀನಿವಾಸ ನ ಹಾಗೆ ಇಲ್ಲಿಯೂ ವೈಭವದ ಉತ್ಸವ, ವಾರ್ಷಿಕ ಬ್ರಹ್ಮೋತ್ಸವ, ವೈಕುಂಠ ಏಕಾದಶಿಯ, ವರಾಹ ಜಯಂತಿ ವಿಶೇಷ ಪೂಜೆಗಳು ಜರಗುತ್ತವೆ, ಚಕ್ರ ಸ್ನಾನ ದಂತ ವಿಶೇಷ ಪೂಜೆಗಳು ಇಲ್ಲಿ ಜರಗುತ್ತವೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಇನ್ನೊಂದು ವಿಸ್ಮಯ ನೋಡಿ ಪುರಾತನವಾದ ಈ ದೇವಸ್ಥಾನವು ಕ್ರಿಶ 1535 ರಲ್ಲಿ ಜೀರ್ಣೋದ್ಧಾರಗೊಂಡಿತು, ಇದನ್ನು ಜೀರ್ಣೋದ್ಧಾರ ಮಾಡಿದ್ದು “ತಿರುಮಲಾಚಾರ್ಯ” ಅನ್ನೋರು.
ಶ್ರೀನಿವಾಸ ದರುಶನಕ್ಕೆ ಬರುವವರು ಮೊದಲು ವರಾಹ ಸ್ವಾಮಿಯನ್ನು ಮೊದಲು ದರ್ಶಿಸಿ ನಂತರ ಶ್ರೀನಿವಾಸ ದೇವರ ದರುಶನ ಮಾಡಿದರೆ ಮಾತ್ರ ಯಾತ್ರೆ ಪೂರ್ಣ ಹಾಗೂ ಪುಣ್ಯ ಪ್ರಾಪ್ತಿ.

ನೀವು ತಿರುಮಲಕ್ಕೆ ಬರುವ ಮುನ್ನ ಮೊದಲು ಕೆಳಗಿನ ತಿರುಪತಿಯಲ್ಲಿ ಗೋವಿಂದರಾಜ ನ ದರುಶನ ಮಾಡಿಕೊಂಡು, ಬೆಟ್ಟಕ್ಕೆ ಬಂದು ಮೊದಲು ವರಾಹ ಸ್ವಾಮಿಯನ್ನು ದರ್ಶಿಸಿ ನಂತರ ಶ್ರೀನಿವಾಸ ದರುಶನ ಮಾಡಿ,ನಂತರ ವಿಮಾನ ವೆಂಕಟರಮಣ ನ ದರುಶನ ಮಾಡಿ.

Comments are closed.

Don`t copy text!