Shubhashaya News

ಜಾನಪದ ಕಲಾ ಸೌರಭ ಬಿಸಿಗಾಳಿಗೂ ವಿರಾಮ

ಆಳಂದನಲ್ಲಿ ಜನಮನ ತಂಪು ಮಾಡಿದ ಕಲಾರಸಿಕರ ಸಂಭ್ರಮ

ಆಳಂದ: ಪಟ್ಟಣದಲ್ಲಿ ಸಂಗೋಳಗಿ ಬಸವೇಶ್ವರ ಜಾನಪದ ಕಲಾ ಸಂಘ ಆಯೋಜಿಸಿದ್ದ ಜಾನಪದ ಕಲಾ ಸೌರಭ ಸಾಂಸ್ಕೃತಿಕ ಕಾರ್ಯಕ್ರಮ ಭೂಮಿಕಾ ಎಂ. ಪಾಟೀಲ ಉದ್ಘಾಟಿಸಿ ಮಾತನಾಡಿದರು. ವಿಶ್ವನಾಥ ನಿಪ್ಪಾಣಿ, ಶರಣಪ್ಪ ಸಂಜುವಾಡ, ಷಣ್ಮೂಯ್ಯಾ ಸ್ವಾಮಿ, ಗುರುಪಾದಯ್ಯ ಎಂ. ಮಠ ಇತರರು ಇದ್ದರು.

ಆಳAದ: ಪಟ್ಟಣದ ರೇವಣಸಿದ್ಧೇಶ್ವರ ಕಾಲೋನಿಯ ಶ್ರೀ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರೀ ಬಸವೇಶ್ವರ ಜಾನಪದ ಕಲಾ ಸಂಘ, ಬಸವನ ಸಂಗೋಳಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಆಯೋಜಿಸಿದ್ದ “ಜಾನಪದ ಕಲಾ ಸೌರಭ” ಕಾರ್ಯಕ್ರಮವು ಬೇಸಿಗೆಯ ತೀವ್ರ ಬಿಸಿಯ ನಡುವೆಯೇ ಜನರಿಗೆ ಮನತಂಪಿನ ಅನುಭವ ನೀಡಿತು.
ಬಿಸಿಲಿನ ತಾಪದಿಂದ ಬೇಸತ್ತಿದ್ದ ಜನಸಾಮಾನ್ಯರಿಗೆ ಈ ಕಾರ್ಯಕ್ರಮವು ಒಂದು ತಂಪಾದ ಆಶ್ರಯವಾಗಿ ಪರಿಣಮಿಸಿತು. ವಿವಿಧ ಕಲಾವಿದರು ತಮ್ಮ ಜಾನಪದ ಗಾಯನ, ಸಂಗೀತ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಕಲಾರಸಿಕರ ಮನಸೆಳೆಯುವುದರ ಜೊತೆಗೆ, ಸಾಂಪ್ರದಾಯಿಕ ಕಲೆಯ ಸುವಾಸನೆಯನ್ನು ಹರಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಗೀತ ಹಾಗೂ ಕಲಾ ಪ್ರೇಮಿ ಭೂಮಿಕಾ ಎಂ. ಪಾಟೀಲ ಅವರು ತಮ್ಮ ಹಾಡಿನ ಮೂಲಕವೇ ಜ್ಯೋತಿ ಬೆಳಗಿಸಿ ಉದ್ಘಾಟನೆ ನೆರವೇರಿಸಿದರು. ನಂತರ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳು ಜನಮನಕ್ಕೆ ಶಾಂತಿ ನೀಡುವುದರ ಜೊತೆಗೆ, ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ತಿಳಿಸಿದರು. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ವ್ಯಕ್ತಿತ್ವ ವಿಕಾಸಕ್ಕೂ ಸಹಕಾರಿಯಾಗುತ್ತದೆ ಎಂದು ಹೇಳಿದರು.
ನಿವೃತ್ತ ಕೃಷಿ ಅಧಿಕಾರಿ ಷಣ್ಮೂಖಯ್ಯಾ ಸ್ವಾಮಿ ಅವರು ಮಾತನಾಡಿ, ಜಾನಪದ ಕಲೆಯ ಉಳಿವು ಮತ್ತು ಬೆಳವಣಿಗೆಗಾಗಿ ಸಮಾಜದ ಎಲ್ಲ ವಲಯದವರು ಸಹಕಾರ ನೀಡಬೇಕು ಎಂದು ಕರೆ ನೀಡಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ವಿಶ್ವನಾಥ ನಿಪ್ಪಾಣಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿದ್ರಾಮಯ್ಯಾ ಖಂಡಾಳ ಸ್ವಾಮಿ ಅವರು ಸಾನ್ನಿಧ್ಯ ವಹಿಸಿದ್ದರು.
ವೇದಿಕೆಯಲ್ಲಿ ಸಂಗಮ್ಮ ಪ್ರಭುಲಿಂಗ ಪಾಟೀಲ, ಕಾಶಿನಾಥ ಸಲಗರ, ಶರಣಪ್ಪ ಸಂಜುವಾಡ ಸಾವಳೇಶ್ವರ, ಬಸವರಾಜ ಹತ್ತೆ ಕಿಣ್ಣಿಸುಲ್ತಾನ, ಧೂಳಯ್ಯಾ ಸ್ವಾಮಿ, ಬಸವೇಶ್ವರ ಜಾನಪದ ಕಲಾ ಸಂಘದ ಅಧ್ಯಕ್ಷ ಗುರುಪಾದಯ್ಯಾ ಎಂ. ಹಿರೇಮಠ ಹಾಗೂ ಕಾರ್ಯದರ್ಶಿ ಶಿವಶರಣಯ್ಯಾಡಿ ಮಠ ಸೇರಿದಂತೆ ಕಾಲೋನಿಯ ಅನೇಕರು ಉಪಸ್ಥಿತರಿದ್ದರು.
ದಾಕ್ಷಯಿಣಿ ಚ, ಹಿರೇಮಠ ಪ್ರಾರ್ಥನೆ ಹಾಡಿದರು. ಕಲಬುರಗಿ ಮಲ್ಲಿಕಾರ್ಜುನ ಪಾಂಚಾಳ ಹಿಂದೂಸ್ಥಾನಿ ಸಂಗೀತ, ಷಣ್ಮೂಖಯ್ಯಾ ಮಠಪತಿ, ಎಲೆನಾವದಗಿ ಮುತ್ತರಾಜ ಪೂಜಾರಿ, ತತ್ವಪದ ಗಾಯನ, ಸುಂಟನೂರದ ರೇವಣಯ್ಯಾ ಎಂ. ಮಠಪತಿ ವಚನ ಗಾಯನ, ಬೋಳಣಿಯ ವಿಠ್ಠಲರಾವ್ ಎಂ. ಜಮಾದಾರ ಭಾವಗೀತೆ, ಶರಣಪ್ಪ ಎಂ. ಬಿಲಗುಂದಿ ಭಕ್ತಿ ಗೀತೆ, ಖೇರ್ಡ್ ಕೆ. ಮಾಣಿಕರಾವ್ ಗುತ್ತೇದಾರ ದಾಸವಾಣಿ, ಸಂಗೋಳಗಿ ಶಿವಾನಂದ ಕಂಟೆಪ್ಪಗೊಳ, ಕಲವಗಾ ಲಕ್ಷಿö್ಮÃ ವಿ. ಹಿರೇಮಠ ಸಂಪ್ರದಾಯ ಪದ, ಪ್ರಭುಲಿಂಗ ಜಿ. ಬಿರಾದಾ ಜಾನಪದ ಗೀತೆ ಹಾಗೂ ಚಿಟ್ಟಾ ಕೆ. ಮಹಾಲಿಂಗಯ್ಯಾಸ್ವಾಮಿತತ್ವ ಪದಕ್ಕೆ ತಬಲಾ ವಾದ್ಯ ನುಡಿಸಿದ ಬಾಲ್ಕಿಧರ್ಮರಾಜಕಟ್ಟಿಮನಿ ಹಾಗೂಕಣ್ಣೂರನ ವಿಜಯಕುಮಾರ ಪಾಂಚಾಳ ನಡೆಸಿಕೊಟ್ಟರು.

Comments are closed.

Don`t copy text!