Shubhashaya News

ಪಾಲಕರು ಮೊಬೈಲ್‍ನಿಂದ ದೂರವಿರಿ- ಜಯಶ್ರೀ ಮತ್ತಿಮಡು

ಕಲಬುರಗಿಯ ಗುಬ್ಬಿ ಕಾಲೋನಿಯ ಮಾತೋಶ್ರೀ ಸರೋಜಾ ಸುಭಾಷ ಗುತ್ತೇದಾರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವವನ್ನು ಜಯಶ್ರೀ ಮತ್ತಿಮಡು ಉದ್ಘಾಟಿಸಿದರು. ಸುಭಾಷ ಗುತ್ತೇದಾರ, ಜ್ಯೋತಿ ಗುತ್ತೇದಾರ, ಜಗದೇವ ಗುತ್ತೇದಾರ, ಶಿವಯ್ಯ ಗುತ್ತೇದಾರ, ಐಶ್ವರ್ಯಾ ದುರ್ಗೆ ಇದ್ದರು.

 

ಈ ಶತಮಾನದ ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿದ್ದಾರೆ ಅವರ ಆಸಕ್ತಿಗೆ ಅನುಗುಣವಾಗಿ ಪಾಲಕರು ಮಕ್ಕಳ ಜೊತೆ ಬೆರೆಯಬೇಕು ಎಂದು ಕಲಬುರಗಿಯ ಸಮಾಜಸೇವಕಿ ಜಯಶ್ರೀ ಮತ್ತಿಮಡು ಅಭಿಪ್ರಾಯಪಟ್ಟರು.

ಬುಧುವಾರ ಕಲಬುರಗಿಯ ಗುಬ್ಬಿ ಕಾಲೋನಿಯಲ್ಲಿರುವ ಮಾತೋಶ್ರೀ ಸರೋಜಾ ಸುಭಾಷ ಗುತ್ತೇದಾರ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವತ: ಪಾಲಕರೇ ಮಕ್ಕಳೆದುರು ಗಂಟೆಗಟ್ಟೆಲೆ ಮೊಬೈಲ್ ಹಿಡಿದು ಕುಳಿತುಕೊಳ್ಳುವುದರಿಂದ ಮಕ್ಕಳು ಮೋಹಕ್ಕೆ ಒಳಗಾಗುತ್ತಿದ್ದಾರೆ ಇದರಿಂದ ಮೊದಲು ಪಾಲಕರು ಅತಿಯಾದ ಮೊಬೈಲ್ ಬಳಕೆಯಿಂದ ದೂರವಿರಬೇಕು ಎಂದು ಸಲಹೆ ನೀಡಿದರು.

ಮಕ್ಕಳ ಬಗ್ಗೆ ಪೆÇೀಷಕರಿಗೆ ಇರುವμÉ್ಟೀ ಜವಾಬ್ದಾರಿ ಶಿಕ್ಷಕರಿಗೂ ಇರುತ್ತದೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕ ರೊಂದಿಗೆ ಶಾಲೆಯಲ್ಲಿ ಕಳೆಯುತ್ತಾರೆ. ಮಕ್ಕಳ ಮೇಲೆ ಶಿಕ್ಷಕರು ಪ್ರಭಾವ ಬೀರುವುದರಿಂದ ಮಕ್ಕಳ ಉತ್ತಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಹೇಳಿದರು. ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅμÉ್ಟೀ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು. ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾಡ್ರ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.

ಸಂಸ್ಥೆಯ ಅಧ್ಯಕ್ಷ ಮಾಜಿ ಶಾಸಕ ಸುಭಾಷ್ ಗುತ್ತೇದಾರ ಮಾತನಾಡಿ, ನಾಗರಿಕ ಸಮಾಜದಲ್ಲಿ ಹಬ್ಬ ಹರಿದಿನ ಆಚರಿಸುವಂತೆ ಶಾಲಾ ಕಾಲೇಜುಗಳಲ್ಲಿ ವರ್ಷಕ್ಕೊಮ್ಮೆ ನಡೆಯುವ ವಾರ್ಷಿಕೋತ್ಸವ ಮಕ್ಕಳ ಪಾಲಿಗೆ ಹಬ್ಬದ ಸನ್ನಿವೇಶವನ್ನು ಸೃಷ್ಟಿ ಎಲ್ಲಾ ಧರ್ಮಗಳ ಸಮನ್ವಯತೆಯನ್ನು ಇಲ್ಲಿ ಕಾಣಲು ಸಾಧ್ಯವಿದೆ ಈ ಮೂಲಕ ಮಕ್ಕಳ ಪ್ರತಿಭಾ ದರ್ಶನ ಪೆÇೀಷಕರಿಗೆ ಆಗಲಿದೆ ಎಂದರು

ಮಕ್ಕಳನ್ನು ಓದಿಸುವ ವಿಚಾರದಲ್ಲಿ ಶಿಕ್ಷಕರμÉ್ಟ ಪೆÇೀಷಕರದ್ದು ಕೂಡ ದೊಡ್ಡ ಜವಾಬ್ದಾರಿಯಿದೆ. ಮಕ್ಕಳ ಓದಿನ ಬಗ್ಗೆ ಪೆÇೀಷಕರು ಸರಿಯಾಗಿ ಗಮನಿಸಬೇಕು. ಬದ್ಧತೆ, ಶಿಸ್ತು, ಧೈರ್ಯ ಈ 3 ಗುಣಗಳನ್ನು ಮಕ್ಕಳಿಗೆ ಧಾರೆಯೆರಯಬೇಕು. ಯಾವ ಕಾರಣಕ್ಕೂ  ಮಕ್ಕಳು ಓದುವಾಗ ಟಿವಿ ಹಾಕಬೇಡಿ. ನಿಶ್ಯಬ್ಧ ಪರಿಸರ ಇರಲಿ. ಮಕ್ಕಳ ಮುಂದೆ ಜಗಳ ಆಡಬೇಡಿ.ಇದು ಮಕ್ಕಳ ಮನಸ್ಸಿನ ಮೇಲೆ ಪ್ರತಿ ಕೂಲ ಪ್ರಭಾವ ಬೀರುತ್ತದೆ ಎಂದು ಎಚ್ಚರಿಸಿದರು.

ಸಂಸ್ಥೆಯ ಆಡಳಿತಾಧಿಕಾರಿ ಹಣಮಂತ ಶೇರಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡಿರುವ ಶಾಲೆಗಳ ಪೈಕಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿ ನಿಲ್ಲಲಿದೆ. ಪಠ್ಯ ಶಿಕ್ಷಣದೊಟ್ಟಿಗೆ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸುತ್ತಿರುವುದು ಹೆಮ್ಮೆಯೆನಿಸಿದೆ. ಇದೇ ಕಾರಣಕ್ಕಾಗಿ ಇಲ್ಲಿ ದಾಖಲಾತಿಗೆ ಕೊರತೆಯಾಗಿಲ್ಲ ಎಂದು ಬಣ್ಣಿಸಿದರು.

 

ಶಿಕ್ಷಣದಲ್ಲಿ ತಾಂತ್ರಿಕತೆಯಿರಬೇಕು. ಮೌಲ್ಯಗಳಿರಬೇಕು,ಕೌಶಲ್ಯಯುತ ಬೋಧನೆಗೆ ಒತ್ತು ನೀಡಬೇಕು. ಆಗ ಮಾತ್ರ ಮಕ್ಕಳು ದೇಶದ ಆಸ್ತಿ ಆಗುತ್ತಾರೆ. ಕಾಣದ ದೇವರನ್ನು ಪೂಜಿವ ಬದಲಿಗೆ ಕಣ್ಣಿಗೆ ಕಾಣುವ ತಂದೆ ತಾಯಿಯನ್ನು ಗೌರವಿಸಿ, ಪೂಜಿಸಲು ಮುಂದಾಗುತ್ತಾರೆ. ಮಕ್ಕಳು ಏನಾಗಬೇಕು ಎಂದು ನಿಮಗೆ ಕನಸಿದೆಯೋ ಅಂತಹ ಪರಿಸರ ಸೃಷ್ಟಿಸುವ ಮೂಲಕ ಪೆÇೀಷಕರು ಮಕ್ಕಳಿಗೆ ಮಾದರಿಯಾಗಬೇಕು.ಓದುವ ಸಮಯದಲ್ಲಿ ಟಿ.ವಿ.ಮೊಬೈಲ್  ಮೋಹ ಅಪ್ಪ ಅಮ್ಮನಿಗೂ ಬೇಡ, ಇμÁ್ಟದರೆ ಮಕ್ಕಳೂ ಅದರಿಂದ ದೂರವಿರುತ್ತಾರೆ ಎಂದು ಕರೆ ನೀಡಿದರು.

ಹಿರಿಯ ಸಮಾಜ ಸೇವಕಿ ಜ್ಯೋತಿ ಗುತ್ತೇದಾರ ಮಾತನಾಡಿ, ಪುರುಷನಿರಲಿ ಮಕ್ಕಳಿರಲಿ ಅವರ ಯಶಸ್ಸಿನ ಹಿಂದೆ ತಾಯಿ ಅಂದರೆ ಹೆಣ್ಣು ಇದ್ದೇ ಇರುತ್ತಾಳೆ. ಬಾಲ್ಯದಿಂದಲೇ ನಮ್ಮ ಮಕ್ಕಳಿಗೆ ಬೇರೆಯವರ ಹಕ್ಕಿನ ಉಲ್ಲಂಘನೆ ಮಾಡದಂತೆ, ನಮ್ಮ ಹಕ್ಕುಗಳ ಉಲ್ಲಂಘನೆಯೂ ಆಗದಂತೆ ಜಾಗೃತೆ ವಹಿಸುವ ಬಗ್ಗೆ ಕಲಿಸಬೇಕು. ಎರಡನೆಯದಾಗಿ ಎಮೋಷನಲ್ ಪ್ರಥಮ ಚಿಕಿತ್ಸೆ ನೀಡುವ ಬದಲು ಮಾನಸಿಕ ಪ್ರಥಮ ಚಿಕಿತ್ಸೆ ಕಲಿಸಿ. ಮೂರನೆಯದಾಗಿ ಭಯಮುಕ್ತ ಭಾರತ ಕಟ್ಟುವುದಕ್ಕೆ ಪೆÇೀಷಕರು ಕೈಜೋಡೊಡಿಸಬೇಕು. ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವ ಭಾಗವಾಗಿ ಸಹಾಯ ಕೇಳುವ, ಸಹಾಯ ಮಾಡುವ ಕೌಶಲ್ಯ ಮಕ್ಕಳಿಗೆ ಕಲಿಸಬೇಕು ಎಂದರು.

ಮಹಾನಗರ ಪಾಲಿಕೆ ಸದಸ್ಯ ಜಗದೇವ ಗುತ್ತೇದಾರ ಮಾತನಾಡಿ, ಮಕ್ಕಳ ಮನಸ್ಸು ಹತ್ತಿಯ ರೀತಿಯಿರುತ್ತದೆ. ಇದಕ್ಕೆ ಏನನ್ನು ಹಾಕುತ್ತೀರೋ ಅದನ್ನು ಹೀರಿ ಕೊಳ್ಳುವ ಗುಣಹೊಂದಿದೆ. ಹೀಗಾಗಿ ಸದಾಕಾಲ ಮಕ್ಕಳಿಗೆ ಗುಣಾತ್ಮಕ ಚಿಂತನೆಗಳನ್ನು ಮಕ್ಕಳಿಗೆ ಕಲಿಸಿ. ಮಗು ನಿನ್ನಲ್ಲಿ ಗುರಿಯಿದೆ. ಆ ಗುರಿ ಮುಟ್ಟುವ ಛಲವಿದೆ ನೀನು ಮಾಡುತ್ತೀಯಾ ಎಂದು ಬೆನ್ನು ತಟ್ಟುವ ಮೂಲಕ ಮಗುವಿನ ಅಂತರ್ಧನಿಯಾಗಿ ಅಪ್ಪ ಅಮ್ಮ ಕೆಲಸ ಮಾಡಿಬೇಕಿದೆ. ವಿನಾಕಾರಣ ಹೋಲಿಕೆ ಮಾಡಲೇಬೇಡಿ. ಮಕ್ಕಳು ನಿಮ್ಮ  ಮಾತನ್ನು ಕೇಳಿ ಬದಲಾವಣೆ ಆಗುವುದಿಲ್ಲ, ಬದಲಿಗೆ ನಿಮ್ಮ ವರ್ತನೆ ನೋಡಿ ಕಲಿಯುತ್ತಾರೆ ಎಂದು ಕಿವಿ ಮಾತು ಹೇಳಿದರು.

ಶಿಕ್ಷಕಿಯರಾದ ಪೂಜಾ, ಶಿವಲೀಲಾ ನಿರೂಪಿಸಿದರು. ಪ್ರಿಯಾಂಕಾ ಸ್ವಾಗತಿಸಿದರೆ, ಅರ್ಚನಾ ವಂದಿಸಿದರು. ಪ್ರಾಚಾರ್ಯೆ ಐಶ್ವರ್ಯಾ ದುರ್ಗೆ ಅಧ್ಯಕ್ಷತೆ ವಹಿಸಿದ್ದರು.

Comments are closed.

Don`t copy text!