Shubhashaya News

ಆಳಂದ: ವಿದ್ಯಾರ್ಥಿಗಳು ಸ್ಪರ್ಧೆಗೆ ಹೆದರದೆ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು.

ಉಚಿತ ನಾಗರಿಕ ಸೇವಾ ತರಬೇತಿ ಕೇಂದ್ರ ಸ್ಥಾಪನೆಗೆ ಸಿಯುಕೆ ಯೋಜನೆ ‘ವಿಕ್ಷಿತ್ ಭಾರತ್–2047’ ಕನಸಿಗೆ ಯುವಶಕ್ತಿ ಬೆಂಬಲ: ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ

ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಉಚಿತ ನಾಗರಿಕ ಸೇವಾ ತರಬೇತಿಯನ್ನು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಉದ್ಘಾಟಿಸಿದರು.ಕಲಬುರಗಿ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ.ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ ಇತರರು ಇದ್ದರು.

ಯುವಕರೇ ನಿಜವಾದ ರಾಷ್ಟ್ರ ನಿರ್ಮಾಪಕರು. ಅವರು ‘ವಿಕ್ಷಿತ್ ಭಾರತ್–2047’ ಗುರಿ ಸಾಧನೆಗೆ ಮಹತ್ವದ ಕೊಡುಗೆ ನೀಡಲಿದ್ದಾರೆ. ಸಿಯುಕೆಯು ನಾಗರಿಕ ಸೇವೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರ್ಣಕಾಲಿಕ ಉಚಿತ ತರಬೇತಿ ಕೇಂದ್ರ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಇದು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ಒದಗಿಸಿ, ಅವರ ವೃತ್ತಿಜೀವನದಲ್ಲಿ ಉನ್ನತ ಗುರಿ ಸಾಧಿಸಲು ಸಹಕಾರಿಯಾಗಲಿದೆ. ಈ ಕಾರ್ಯಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು ಎಂದು ತಿಳಿಸಿದರು.
ತಾಲೂಕಿನ ಕಡಗಂಚಿ ಬಳಿಯ ಸಿಯುಕೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಮಾನ ಅವಕಾಶ ಕೋಶ ಹಾಗೂ ಯುಜಿಸಿ–ಓಎಡಿಜಿ ಸಹಯೋಗದಲ್ಲಿ ನಾಗರಿಕ ಸೇವಾ ಪರೀಕ್ಷೆ ಹಾಗೂ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ತರಗತಿಗಳ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಐಪಿಎಸ್ ಅಧಿಕಾರಿ ಡಾ. ಶರಣಪ್ಪ ಎಸ್.ಡಿ. ಮಾತನಾಡಿ, ಯಶಸ್ಸಿಗೆ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯೇ ಮುಖ್ಯ. ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸ್ಪಷ್ಟ ಕಾರ್ಯಯೋಜನೆ, ಆತ್ಮಾವಲೋಕನ, ಸಕಾರಾತ್ಮಕ ಚಿಂತನೆ ಮತ್ತು ದೃಢನಿಶ್ಚಯ ಅಗತ್ಯ. ಕಾನೂನುಬದ್ಧ ಅಧಿಕಾರವು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲ ಶಕ್ತಿಯಾಗಿದೆ. ಬಡವರ ಕಣ್ಣೀರು ಒರೆಸಲು ಹಾಗೂ ನಿರ್ಗತಿಕರಿಗೆ ನೆರವಾಗಲು ನಾಗರಿಕ ಸೇವೆ ಒಂದು ಅಪೂರ್ವ ಅವಕಾಶ ಎಂದು ಹೇಳಿದರು.
ಕುಲಸಚಿವ ಪೆÇ್ರ. ಆರ್. ಆರ್. ಬಿರಾದಾರ್ ಅವರು ಮಾತನಾಡುತ್ತಾ, ಜೀವನದಲ್ಲಿ ಎದುರಾಗುವ ಕಷ್ಟಗಳೇ ನಮ್ಮ ಸವಾಲುಗಳು. ಯಾವುದೂ ಅಸಾಧ್ಯವಲ್ಲ. ನಾವು ಜ್ಞಾನದ ಯುಗದಲ್ಲಿದ್ದೇವೆ. ಜ್ಞಾನವು ಕಠಿಣ ಪರಿಶ್ರಮಿಗಳಿಗೆ ಮಾತ್ರ ಲಭಿಸುವ ಆಸ್ತಿ. ವಿದ್ಯಾರ್ಥಿಗಳು ಲಭ್ಯವಾಗುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಉನ್ನತ ಸಾಧನೆ ಮಾಡಬೇಕು. ಈ ದಿಸೆಯಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದರು.
ಡಾ. ಕುಬಕಡ್ಡಿ ಮಾತನಾಡಿದರು. ವಾರ್ಡನ್ ಡಾ. ಬಸವರಾಜ ಸೋಮನಮರಡಿ, ಪೆÇ್ರ. ಪಾಂಡುರಂಗ, ಪೆÇ್ರ. ಪಾಸೋಡಿ, ಪೆÇ್ರ. ಪಾಂಡೆ, ಪೆÇ್ರ. ಅಂಗಡಿ, ಡಾ. ರಾಜಶ್ರೀ ಸೇರಿದಂತೆ ಎಲ್ಲಾ ಡೀನ್‍ಗಳು, ಭಾಗವಹಿಸಿದ್ದರು.
ಪೆÇ್ರ. ದೇವರಾಜಪ್ಪ ಎಸ್. ಸ್ವಾಗತಿಸಿದರು. ಡಾ. ಶೈಲಜಾ ಎಸ್. ಕೋನೆಕೆ ನಿರೂಪಿಸಿದರು. ಡಾ. ರಂಗನಾಥಮ್ ವಂದಿಸಿದರು.

Comments are closed.

Don`t copy text!