Shubhashaya News

ಮತಗಳ್ಳತನ ಆರೋಪ ತಿರಸ್ಕರಿಸಿದ ಜನತೆ- ಸುಭಾಷ್ ಆರ್ ಗುತ್ತೇದಾರ

ದೇಶದಲ್ಲಿ ವಿಪಕ್ಷ ನಾಯಕ ರಾಹುಲ ಗಾಂಧಿ ಮಾಡುತ್ತಿರುವ ಮತಗಳ್ಳತನ ಆರೋಪವನ್ನು ಜನತೆ ಸಾರಾಸಾಗಾಟಾಗಿ ತಿರಸ್ಕಾರ ಮಾಡಿದ್ದಾರೆ ಎಂದು ಆಳಂದ ಮಾಜಿ ಶಾಸಕ ಸುಭಾಷ್ ಆರ್ ಗುತ್ತೇದಾರ ತಿಳಿಸಿದ್ದಾರೆ.

ಬಿಹಾರ ಚುನಾವಣೆ ಫಲಿತಾಂಶ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಬಿಹಾರ ಫಲಿತಾಂಶವು ಆಶಾದಾಯಕವಾಗಿದ್ದು ಬಿಹಾರದಲ್ಲಿ ಪಕ್ಷದ ನೆಲೆ ಮತ್ತಷ್ಟು ವಿಸ್ತಾರಗೊಂಡಿದೆ. ಈ ಫಲಿತಾಂಶವು ಬಿಜೆಪಿಯ ಶಕ್ತಿಯನ್ನು ಮತ್ತಷ್ಟು ವೃದ್ಧಿಸಿದೆ. ದೇಶದ ಮತ್ತು ಬಿಹಾರ ರಾಜ್ಯದ ಜನತೆ ಭಾರತೀಯ ಜನತಾ ಪಕ್ಷ ಹಾಗೂ ಎನ್‍ಡಿಎ ಜೊತೆ ಇದ್ದಾರೆ ಎನ್ನುವುದು ಮತ್ತೊಮ್ಮೆ ಸಾಬಿತಾಗಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ನಿತೀಶಕುಮಾರ ಸಮರ್ಥ ನಾಯಕತ್ವಕ್ಕೆ ಸಿಕ್ಕ ಮನ್ನಣೆಯಾಗಿದೆ ಅಭಿಪ್ರಾಯಪಟ್ಟಿದ್ದಾರೆ.

ಮತಗಳ್ಳತನ ಎನ್ನುವುದು ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಹೂಡಿರುವ ಕುತಂತ್ರದ ಷಡ್ಯಂತ್ರವಾಗಿದೆ. ಕರ್ನಾಟಕ ರಾಜ್ಯದಲ್ಲಿ ಅವರದೇ ಪಕ್ಷದ ಸರ್ಕಾರ ಇರುವುದರಿಂದ ಅಧಿಕಾರ ದುರುಪಯೋಗಪಡಿಸಿಕೊಂಡು ಎಸ್‍ಐಟಿ ರಚನೆ ಮಾಡಿ ತನಿಖೆ ಮಾಡುತ್ತಿದ್ದಾರೆ ಇದರಿಂದ ಯಾವುದೇ ರೀತಿಯ ಪ್ರಯೋಜನವಾಗಲ್ಲ ಎಂದು ಹೇಳಿದ್ದಾರೆ.

 

 

 

Leave A Reply

Your email address will not be published.