Shubhashaya News

ಡಾ. ಅಂಬರೀಶ ಬಾಡದಗೆ ಬಡ್ತಿ ನಿಮಿತ್ಯ ಸನ್ಮಾನ 

ಕಲಬುರಗಿ ನಗರದ ಪ್ರತಿಷ್ಠಿತ ವೈದ್ಯ ರಾದ ಡಾ. ಅಂಬರೀಶ ಎಸ್ ಬಾಡದ (ಎಮ್ ಬಿಬಿ ಎಸ್ ಎಮ್ ಡಿ) ಚರ್ಮ, ಕೂದಲು ಮತ್ತು ಲೈಂಗಿಕ ರೋಗ ತಜ್ಞರಾಗಿದ್ದು. ಇವರು ಪ್ರಾದ್ಯಾಪಕ ಹುದ್ದೆಯಿಂದ, ಬಸವೇಶ್ವರ ಆಸ್ಪತ್ರೆಯ ಮಹಾದೇವಪ್ಪಾ ರಾಂಪೂರೆ ಮೆಡಿಕಲ್ ಕಾಲೇಜನ, ಚರ್ಮರೋಗ ವಿಭಾಗದ HOD ಯಾಗಿ ಅಧಿಕಾರಿ ಸ್ವೀಕರಿಸಿದ್ದಾರೆ.

( HOD)ವಿಭಾಗದ ಮುಖ್ಯಸ್ಥರಾಗಿ ಬಡ್ತಿ ಹೊಂದಿರುವ ಕಾರಣ,ಅವರ ಆತ್ಮೀಯರು, ಒಡನಾಡಿಗಳಾದ ಔಷಧ ಪ್ರತಿನಿಧಿ,ಪ್ರಮೋದ ಜೂಜಗಾರ ಗ್ಲೋಡೇರ್ಮ ಕಂಪನಿ ಹಾಗೂಏರಿಯಾ ಬಿಸಿನೆಸ್ ಮ್ಯಾನೇಜರ್ ಆನಂದ ರುದ್ರವಾಡಿ ಗ್ಲೋಡೆರ್ಮ ಕಂಪನಿ, ಇವರು ಮಾತನಾಡಿ, ಬಡ್ತಿ ಹೊಂದಿರುವ ಡಾ.ಅಂಬರೀಶ ಬಾಡಾದೆ ಅವರು ಜಿಲ್ಲೆಯ ನಾನಾ ಗ್ರಾಮಗಳಿಂದ ಬರುವ ಅನೇಕ ಬಡ ರೋಗಿಗಳಿಗೆ ತಮ್ಮ ಪ್ರಾಮಾಣಿಕ ಸೇವೆಯನ್ನು ನೀಡುವ ಮೂಲಕ ಹೆಸರುವಾಸಿಯಾಗಿದ್ದಾರೆ. ಅಲ್ಲದೆ ಕಾಯಕ ನಿಷ್ಠೆಯಿಂದ ತಮ್ಮ, ತಾಳ್ಮೆ, ಸಹನೆ, ಮತ್ತು ಸದಾ ಹಸನ್ಮುಖಿಯಾಗಿ, ವಿದ್ಯಾರ್ಥಿಗಳಿಗೆ, ಜನಗಳಿಗೆ, ಧನಾತ್ಮಕ ಚಿಂತನೆಗಳನ್ನು ಬಿತ್ತುವ ಮೂಲಕ ಜಿಲ್ಲೆಗೆ ಮಾದರಿಯಾಗಿದ್ದಾರೆ. ಅವರ ಈ ಪರಿಶ್ರಮ, ನಿಸ್ವಾರ್ಥ ಸೇವೆ,ಕರ್ತವ್ಯ ಪ್ರಜ್ಞೆ, ಇಂದು ಅವರಿಗೆ ಬಡ್ತಿ ಹೊಂದಲು ಕಾರಣವಾಗಿವೆ. ಅವರ ಮುಂದಿನ ಜೀವನ ಸುಖಕರವಾಗಿರಲಿ,ಹೀಗೆ ಅವರ ಸೇವೆ, ಅವರ ಸಾಧನೆ ಮುಂದುವರಿಯಲಿ,ಜೊತೆಗೆ ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ನಿರಂತರ ವಾಗಿರಲಿ ಎಂದು ಈ ಸಂದರ್ಭದಲ್ಲಿ ಪ್ರೀತಿಯಿಂದ ಸನ್ಮಾನಿಸಿ,ಶುಭ ಕೋರಲಾಯಿತು.

Leave A Reply

Your email address will not be published.