ಆಳಂದ: ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ಸುಶೀಲ್‍ಕುಮಾರ ಅಂಬೂರೆ ಉದ್ಘಾಟಿಸಿದರು. ಫಾ. ದೀಪಕ್ ಥಾಮಸ್, ಟ್ರಸ್ಟ್ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಬ್ರದರ್ ಫ್ಲೆಮಿಂಗ್ ಇತರರು ಇದ್ದರು.
ಆಳಂದ: “ನಮ್ಮ ಜೀವನದಲ್ಲಿ ಕಣ್ಣುಗಳ ಮಹತ್ವ ಅಸೀಮ. ಸರಿಯಾದ ಸಮಯದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡರೆ ಅನೇಕ ಕಾಯಿಲೆಗಳನ್ನು ತಡೆಗಟ್ಟಬಹುದು” ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಸುಶೀಲ್ ಅಂಬೂರೆ ಹೇಳಿದರು.
ತಾಲೂಕಿನ ಕಡಗಂಚಿ ಆರೋಗ್ಯ ಕೇಂದ್ರದಲ್ಲಿ ಕಾರ್ಮೆಲ್ ಜ್ಯೋತಿ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಅನುಗ್ರಹ ಕಣ್ಣಿನ ಆಸ್ಪತ್ರೆ ಹಾಗೂ ಭೊರುಕಾ ನೇತ್ರಾಲಯ ಕಲಬುರಗಿ, ಜಿಲ್ಲಾ ಅಂದತ್ವ ನಿಯಂತ್ರಣ ಕಾರ್ಯಕ್ರಮ ಕಲಬುರಗಿ ಇವರ ಸಹಯೋಗದೊಂದಿಗೆ ಹಮ್ಮಿಕೊಂಡ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷಿಸದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಅಗತ್ಯ. ಇಂತಹ ಶಿಬಿರಗಳು ಸರ್ಕಾರದ ಯೋಜನೆಗಳನ್ನು ಗ್ರಾಮೀಣ ಮಟ್ಟಕ್ಕೆ ತಲುಪಿಸಲು ಸಹಕಾರಿ” ಎಂದು ಅವರು ತಿಳಿಸಿದರು.
ಈ ಶಿಬಿರದಲ್ಲಿ 108 ಜನರ ಕಣ್ಣಿನ ತಪಾಸಣೆ ನಡೆದಿದ್ದು, ಕಣ್ಣಿನ ಪೆÇರೆ ಪತ್ತೆಯಾದ 27 ಜನರನ್ನು ಶಸ್ತ್ರಚಿಕಿತ್ಸೆಗೆ ಕಳುಹಿಸಲಾಯಿತು.
ಶಿಬಿರದಲ್ಲಿ ಮೌಂಟ್ ಕಾರ್ಮೆಲ್ ಶಾಲಾ ವ್ಯವಸ್ಥಾಪಕ ಫಾ. ದೀಪಕ್ ಥಾಮಸ್, ಟ್ರಸ್ಟ್ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಬ್ರದರ್ ಫ್ಲೆಮಿಂಗ್, ಅನುಗ್ರಹ ಕಣ್ಣಿನ ಆಸ್ಪತ್ರೆಯ ತಜ್ಞರಾದ ಗುಲಾಮ ದತ್ತ, ಎಂ.ಡಿ. ಸಾಧಿಕ್, ಡಾ. ಗುರು ಶಾಂತಪ್ಪ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
Comments are closed.