ಆಳಂದ: ಪಟ್ಟಣದಲ್ಲಿ ತಿಂಥಣಿಯ ಶ್ರೀಮೌನೇಶ್ವರ ಜಾತ್ರೆ ನಿಮಿತ್ತ ಮೌನೇಶ್ವರ ಜೋಡು ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳಲ್ಲಿ ನಡೆಯಿತು.
ಆಳಂದ: ಪಟ್ಟಣದಲ್ಲಿ ಸೋಮವಾರ ನಡೆದ ಜಗದ್ಗುರು ತಿಂಥಣಿಯ ಮೌನೇಶ್ವರರ ಜಾತ್ರಾ ಮಹೋತ್ಸವ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಶ್ರೀ ಮೌನೇಶ್ವರರ ಜೋಡು ಪಲ್ಲಕ್ಕಿ ಉತ್ಸವ ಸಡಗರ ಸಂಭ್ರಮದ ಮಧ್ಯೆ ಭಕ್ತಾದಿಗಳು ನೆರವೇರಿಸಿದರು.
ಬೆಳಗಿನ ವೇಳೆ ದೇವಸ್ಥಾನದಿಂದ ಹೊರಟು ಪಲ್ಲಕ್ಕಿ ಉತ್ಸವದಲ್ಲಿ ಪುರುವಂತರ ನೇತೃತ್ವದಲ್ಲಿ ಇನ್ನೂಳಿದ ಹಿರಿಯ ಕಿರಿಯ ಪುರುವಂತರ ವೈವೀದ್ಯಮಯ ಸಾಂಪ್ರದಾಯಿಕ ಕುಣಿತವು ವಾದ್ಯ ವೈಭವಗಳೊಂದಿಗೆ ಸಾಗಿ ಮೆರವಣಿಗೆ ದೇವಸ್ಥಾಕ್ಕೆ ತಲುಪಿತು.
ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಶ್ರಾವಣ ಮಾಸದ ತಿಂಗಳಕಾಲ ಸಾಗಿಬಂದ ಗುಡ್ಡಾಪೂರದ ಶ್ರೀ ದಾನೇಶ್ವರಿ ದೇವಿಯ ಪುರಾಣ ಹೇಳಿಕೊಟ್ಟ ಗುರುಲಿಂಗಯ್ಯಾ ಅಳ್ಳೋಳ್ಳಿ ಮಠ ಅವರು ಮಹಾ ಮಂಗಲಗೊಳಿಸಿದರು. ಗವಾಯಿ ನಾಗೇಶ ತೇಲಿ, ತಬಲಾ ಸಾಥಿ ವೆಂಕಟೇಶ ಬಿ.ಆಳಂದ ಮತ್ತು ಸುರೇಶ ಆಳಂದ ತಬಲಾ ಸಾಥಿಯೊಂದಿಗೆ ಸಂಗೀತ ಗಮನ ಸೆಳೆಯಿತು.
ವೇದಿಕೆಯಲ್ಲಿ ಪುರವಂತರ ಸನ್ಮಾನ, ಮೌನೇಶ್ವರ, ಗೋನಾಳ ಆದಿಲಿಂಗೇಶ್ವರ, ಕಾಶಿ ವಿಶ್ವನಾಥÀ, ವರವಿ ಮೌನಲಿಂಗ, ಹಾಗೂ ಸಿರಸಂಗಿ ಕಾಳಿಕಾದೇವಿ ಹೆಸರಿನ ತೆಂಗಿನ ಲಿಲಾವು ನಡೆಯಿತು.
ಸಂದರ್ಭದಲ್ಲಿ ಕಮೀಟಿ ಅಧ್ಯಕ್ಷ ರಘವೀರ ಸೋನಾರ, ಮನೋಹರ ಸೋನಾರ, ಕಾಳಿಕಾದೇವಿ ಟ್ರಸ್ಟ್ ಅಧ್ಯಕ್ಷ ಮಹಾದೇವ ಕೆ. ಪೋದ್ದಾರ, ದೇವಿಂದ್ರಪ್ಪ ಮಾಸ್ಟರ್, ಶಂಕರ ವಿ. ಸುತಾರ, ಮೌನೇಶ ಎಸ್. ಸುತಾರ, ರಾಜಕುಮಾರ ಅಚಲೇರಿ, ಬಸವರಾಜ ಅಚಲೇರಿ, ದೇವಿಂದ್ರ ಎಂ. ಸುತಾರ, ಶಿವುಪುತ್ರ ಗೋಧೆ, ದವಲಪ್ಪ ವಣದೆ, ಗುರು ವಣದೆ, ಮಲ್ಲು ವಣದೆ, ಕಲ್ಯಾಣಿ ಚಿಂಚೋಳಿ ಸೇರಿದಂತೆ ವಿವಿಧ ಮುಖಂಡರು ಸೇರಿದಂತೆ ಭಾಗವಹಿಸಿದ್ದರು. ಸಭೆಯನ್ನು ದೇವಿಂದ್ರಪ್ಪಾ ಮಾಸ್ಟರ್ ನಿರೂಪಿಸಿ ವಂದಿಸಿದರು. ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದ ಉಣಬಡಿಸಲಾಯಿತು.
Comments are closed.