Shubhashaya News

ಭೃಷ್ಟಾಚಾರ ಮುಕ್ತ ಆಳಂದದ ಬೇಡಿಕೆ ಜೋರಾಗಿ: 

ಜೆಡಿಎಸ್ ನಾಯಕಿ ಮಹೇಶ್ವರಿ ವಾಲಿ ಆಕ್ರೋಶ

ಆಳಂದ: ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ನಾಯಕಿ ಮಹೇಶ್ವರಿ ಎಸ್. ವಾಲಿ ಮಾತನಾಡಿದರು. ಮುಖಂಡ ವೆಂಕಟೇಶ ರಾಠೋಡ ಮತ್ತು ಅಮಿರ್ ಅನ್ಸಾರಿ ಇದ್ದರು.

ಆಳಂದ: “ಭೃಷ್ಟಾಚಾರ ಮುಕ್ತ ಆಳಂದ ನಮ್ಮ ಹಕ್ಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ತಕ್ಷಣ ನಿಲ್ಲಬೇಕು” ಎಂದು ಜೆಡಿಎಸ್ ನಾಯಕಿ ಮಹೇಶ್ವರಿ ಎಸ್. ವಾಲಿ ಬುಧವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದುರಾಡಳಿತವನ್ನು ಹಾಲಿ ಶಾಸಕ ಬಿ.ಆರ್. ಪಾಟೀಲ ಮುಂದುವರೆಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮಹೇಶ್ವರಿ ವಾಲಿ ಅವರು ಕಳೆದ ವಾರ ತಾಲೂಕಿನ ವಿವಿಧ ಹಳ್ಳಿಗಳಾದ ತೀರ್ಥತಾಂಡಾ, ಕಡುಕಿ, ಸರಸಂಬಾ, ಕೊರಳ್ಳಿ, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ, ಪಡಸಾವಳಿ ರಸ್ತೆಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿದ್ದು ಭ್ರμÁ್ಟಚಾರದ ಭಯಾನಕ ನಿಜಾಂಶಗಳು ಕಾಣಿಸಿಕೊಂಡಿದ್ದವೆಂದು ತಿಳಿಸಿದರು. “ತಾಲೂಕಿನ ಪ್ರಮುಖ ರಸ್ತೆ ಕಾಮಗಾರಿ ಕೇವಲ ಎರಡೇ ತಿಂಗಳಲ್ಲಿ ನಾಶವಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾಮಗಾರಿ ಗುಣಮಟ್ಟದ ಕೊರತೆಯನ್ನು ಬಹಿರಂಗಪಡಿಸುತ್ತದೆ” ಎಂದರು.

ಅವರು ಮುಂದೆ ಹೇಳುವಂತೆ, ಅಂಗನವಾಡಿ ಕೇಂದ್ರಗಳಿಗೆ ಹಾಲಿನ ಪುಡಿ ತಿಂಗಳಿಗೆ ಬದಲು ಮೂರು ತಿಂಗಳಿಗೊಮ್ಮೆ ವಿತರಿಸುತ್ತಿರುವುದು ದುರಸ್ಥಿತಿಯಾಗಿದೆ. ವಿದ್ಯುತ್ ದುರಸ್ತಿ, ಶಾಲಾ ಕೊಣೆ ಸುಧಾರಣೆ ಹೆಸರಿನಲ್ಲಿ ಸಹ ಲೂಟಿ ನಡೆಯುತ್ತಿದೆ. “ಶಾಸಕರು ಬೆಂಗಳೂರಿನವರಲ್ಲ, ಕಲಬುರಗಿಯವರಲ್ಲ, ಅವರು ನಮ್ಮ ಆಳಂದದವರೇ. ನಮ್ಮ ಮಕ್ಕಳ ಹಕ್ಕುಗಳನ್ನು ನಿಭಾಯಿಸುವ ಜವಾಬ್ದಾರಿ ಅವರಿಗಿದೆ” ಎಂದು ವಾಲಿ ಎಚ್ಚರಿಕೆ ನೀಡಿದರು.

 

ಮುನಹಳ್ಳಿಯ ರಸ್ತೆ ಸಮಸ್ಯೆ, ಶಾಲಾ ಕಟ್ಟಡಗಳ ಅವ್ಯವಸ್ಥೆ, ಅಂಗನವಾಡಿಗಳ ನಿರ್ಲಕ್ಷ್ಯ ಕುರಿತು ಸರ್ಕಾರದಿಂದ ಸ್ಪಷ್ಟನೆ ಬೇಡಿದ ಅವರು, “ಇನ್ನೂ ಸಮಯದಲ್ಲಿ ಸರಿಯಾದ ಕ್ರಮಗಳಿಲ್ಲದಿದ್ದರೆ ಜನರ ಆಕ್ರೋಶ ಮತ್ತಷ್ಟು ಭಾರೀ ಆಂದೋಲನಕ್ಕೆ ರೂಪಾಂತರಗೊಳ್ಳಲಿದೆ” ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರು ವೆಂಕಟೇಶ ರಾಠೋಡ ಮತ್ತು ಅಮಿರ್ ಅನ್ಸಾರಿ ಉಪಸ್ಥಿತರಿದ್ದರು.

Comments are closed.

Don`t copy text!