ಆಳಂದ: ಸಿಯುಕೆಯಲ್ಲಿ ಆಯೋಜಿಸಿದ್ದ ಎರಡು ವಾರಗಳ ಕಾಲದ ನಶಾ ಮುಕ್ತ ಭಾರತʼ ಕಾರ್ಯಕ್ರಮಕ್ಕೆ ಕುಲಪತಿ ಪ್ರೊ. ಬಟ್ಟಸತ್ಯನಾರಾಯಣ ಉದ್ಘಾಟಿಸಿದರು. ಡಾ. ರಾಹುಲ್ ಮಂದನಕಳ್ಳಿ, ಪೆÇ್ರ. ಪವಿತ್ರಾ ಆಲೂರ್ ಇತರರು ಇದ್ದರು.
ಆಳಂದ: ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ವ್ಯಸನ ವಶವಾಗದೇ ಆರೋಗ್ಯವನ್ನೇ ಆಶ್ರಯಿಸಿಕೊಳ್ಳುವಂತಾಗಲು ಪೆÇೀಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನೆಚ್ಚರಿಕೆ ಜವಾಬ್ದಾರಿ ವಹಿಸಬೇಕು ಎಂದು ಕಲಬುರಗಿಯ ಮನೋವೈದ್ಯ ಡಾ. ರಾಹುಲ್ ಮಂದಕನಳ್ಳಿ ಸಲಹೆ ನೀಡಿದರು.
ತಾಲೂಕಿನ ಕಡಗಂಚಿ ಬಳಿಯ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ (ಸಿಯುಕೆ), ಸಮಾನ ಅವಕಾಶಗಳ ಕೋಶ, ಸಮಾಜ ಕಾರ್ಯ ವಿಭಾಗ ಮತ್ತು ಮನೋವಿಜ್ಞಾನ ವಿಭಾಗ ಜಂಟಿಯಾಗಿ ಆಯೋಜಿಸಿದ್ದ“ಎರಡುವಾರಗಳ ʼನಶಾ ಮುಕ್ತ ಭಾರತʼ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಮಾತನಾಡಿದರು.
“ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಾದಕ ವ್ಯಸನದ ಸಂಖ್ಯೆÉ ಬಹಳ ಹೆಚ್ಚಾಗಿದೆ” “ಸಾಮಾಜಿಕ ಮಾಧ್ಯಮ ಮತ್ತು ಸಮೂಹ ಮಾಧ್ಯಮದ ಕಾರ್ಯಕ್ರಮಗಳು ಯುವಜನರಲ್ಲಿ ಮಾದಕ ವ್ಯಸನ ಹೆಚ್ಚಾಗಲು ಪ್ರಭಾವ ಬೀರುತ್ತಿವೆ. ಮಾದಕ ವ್ಯಸನವು ಯುವಕರ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತವೆ. ಆದ್ದರಿಂದ ಪೆÇೀಷಕರು ಮತ್ತು ಶಿಕ್ಷಣ ಸಂಸ್ಥೆಗಳು ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಅವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಈ ರೀತಿಯ ಜಾಗೃತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಆಕರ್ಷಿತರಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ” ಎಂದು ಹೇಳಿದರು.
ಸಿಯುಕೆ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಅವರು “ನಶಾ ಮುಕ್ತ ಭಾರತ” ಅಭಿಯಾನವನ್ನು ಉದ್ಘಾಟಿಸಿ, “ವಿದ್ಯಾರ್ಥಿಗಳು ವ್ಯಸನದತ್ತ ಸಾಗುವುದನ್ನು ತಡೆಯಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು, ಏಕೆಂದರೆ ವ್ಯಸನದಿಂದ ಮುಕ್ತರಾಗುವುದಕ್ಕಿಂತ ತಡೆಗಟ್ಟುವಿಕೆ ತುಂಬಾ ಸುಲಭ. ಆದ್ದರಿಂದ ಎಲ್ಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಅರಿವು ಮುಡಿಸುವ ಕಾರ್ಯ ಮಾಡಬೇಕು” ಎಂದು ಹೇಳಿದರು.
ಸಮಾಜ ವಿಜ್ಞಾನ ನಿಕಾಯದ ಡೀನ್ ಪೆÇ್ರ. ಪವಿತ್ರಾ ಆಲೂರ್ ಅವರು “ಮಾದಕ ವ್ಯಸನದ ಕುರಿತು ನಡೆಸಿದ ಅಧ್ಯಯನವು 2012 ರಿಂದ 2018 ರವರೆಗೆ ಭಾರತದ 372 ಜಿಲ್ಲೆಗಳಲ್ಲಿ ಮಾದಕ ವ್ಯಸನದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ ಎಂದು ತೋರಿಸಿದೆ. ದೇಶವನ್ನು ಮಾದಕ ವ್ಯಸನದಿಂದ ಮುಕ್ತಗೊಳಿಸಲು ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಆಗಸ್ಟ್ 15, 2020 ರಂದು ನಶಾ ಮುಕ್ತ ಭಾರತ ಅಭಿಯಾನವನ್ನು ಪ್ರಾರಂಭಿಸಿದೆ. ಅಂದಿನಿಂದ ಪ್ರತಿ ವರ್ಷವೂ ದೇಶಾದ್ಯಂತ ಯುವಕರಿಗೆ ಶಿಕ್ಷಣ ನೀಡಲು ನಶಾ ಮುಕ್ತ ಭಾರತ ಪಖ್ವಾಡವನ್ನು ಆಯೋಜಿಸಲಾಗುತ್ತಿದೆ. ಈ ವರ್ಷದ ಧ್ಯೇಯವಾಖ್ಯ “ಮಿಷನ್ ಡ್ರಗ್ ಫ್ರೀ ಕ್ಯಾಂಪಸ್ ಆಗಿದೆ” ಎಂದರು.
ಇದಕ್ಕೂ ಮುನ್ನ ಮನೋವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಕಿರುನಾಟಕ ಪ್ರದರ್ಶಿಸಿ ಜಾಗೃತಿ ರ್ಯಾಲಿ ನಡೆಸಿದರು. ಡಾ. ಆಸ್ತಾ ನಿರೂಪಿಸಿದರು, ಪೆÇ್ರ. ದೇವರಾಜಪ್ಪ ಸ್ವಾಗತಿಸಿದರು, ಪೆÇ್ರ. ವಿಜಯೇಂದ್ರ ಪಾಂಡೆ, ಪೆÇ್ರ. ರೋಮಟೆ ಜಾನ್, ಡಾ. ಎಸ್. ಜಯವೇಲು, ಡಾ. ಲಕ್ಷ್ಮಣ, ಡಾ. ರವೀಂದ್ರ, ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Comments are closed.