ಆಳಂದ: ಪಟ್ಟಣದಲ್ಲಿ ಕರ್ನಾಟಕ ಭೀಮಸೇನೆ ಘಟಕಕ್ಕೆ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ತಾಲೂಕು ಅಧ್ಯಕ್ಷ ಸಂಜಯ ಬೋಸ್ಲೆ ಅವರು ನೇಮಕಾತಿ ಪತ್ರ ನೀಡಿ ಗೌರವಿಸಿದರು.
ಆಳಂದ: ಅನ್ಯಾಯದ ವಿರುದ್ಧ ಹೋರಾಟ ಮಾಡಲು ನಾವೆಲ್ಲರೂ ಸಿದ್ದರಾಗಬೇಕು. ಭ್ರಷ್ಟ ಅಧಿಕಾರಿಗಳ ವಿರುದ್ಧ ಸಿಂಹ ಸ್ವಪ್ನವಾಗಬೇಕು. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಹಕ್ಕುಗಳಿಗಾಗಿ ನಾವು ಯಾವಾಗಲೂ ಹೋರಾಟ ಮಾಡೋಣ ಎಂದು ಕರ್ನಾಟಕ ಭೀಮಸೇನೆ ತಾಲೂಕು .ಅಧ್ಯಕ್ಷ ಸಂಜಯ ಬೋಸ್ಲೆ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಪ್ರವಾಸಿ ಮಂದಿರರದಲ್ಲಿ ಕರ್ನಾಟಕ ಭೀಮಸೇನೆ (ರಿ) ಸಂಸ್ಥಾಪಕ ಅಧ್ಯಕ್ಷ ಶಂಕರ್ ರಾಮಲಿಂಗಯ್ಯನವರ ಆದೇಶದ ಮೇರೆಗೆ ಕರೆದ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಆಯ್ಕೆಯಾದ ನೂತನ ಪದಾಧಿಕಾರಿಗಳ ಉದ್ದೇಶಿಸಿ ಅವರು ಮಾತನಾಡಿದರು.
ತಾಲೂಕ ಮುಂಬರುವ ದಿನಗಳಲ್ಲಿ ನಮ್ಮ ಸಂಘಟನೆ ಎಲ್ಲರಿಗೂ ಮಾದರಿಯಾಗುವಂತೆ ನಿರ್ಮಿಸೋಣ ಎಂದರು.
ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆನಡೆಯಿತು. ಜೈ ಭೀಮ್ ಸುಳ್ಳದ (ಉಪಾಧ್ಯಕ್ಷ), ಮಹಾವೀರ್ ಕಾಂಬ್ಳೆ (ಕಾರ್ಯಧ್ಯಕ್ಷ), ಮಹೇಶ್ ಪೆÇೀತೆ (ಪ್ರಧಾನ ಕಾರ್ಯದರ್ಶಿ), ನಿತಿನ ಡೊಲೆ (ಸಂಘಟನಾ ಕಾರ್ಯದರ್ಶಿ), ಅಮರ್ ಸಿಂಗೆ (ಜಂಟಿ ಕಾರ್ಯದರ್ಶಿ), ಬಸವರಾಜ್ ಹಾರಕೂಡೆ, ರಾಜು ಹತ್ತಿಗಳೇ, ನಾಗೇಶ್ ಕಾತರಾಬಾದ್ ಅವರನ್ನು ಸಂಘಟನೆಗೆ ಆಯ್ಕೆ ಮಾಡಲಾಗಿದೆ.
ಯುವ ಘಟಕ: ನಾಗರಾಜ್ ಸಿಂಗೆ (ಅಧ್ಯಕ್ಷ), ರವಿ ಆರ್ಯ (ಉಪಾಧ್ಯಕ್ಷ), ಮಲ್ಲಿಕ್ ಸಿಂಗೆ (ಕಾರ್ಯಧ್ಯಕ್ಷ), ಅಜಯಕುಮಾರ ಹಬಾಡೆ, ಪ್ರಜ್ವಲ್ ಡೊಲೆ (ಸಂಘಟನಾ ಕಾರ್ಯದರ್ಶಿ), ಅಭಿμÉೀಕ್ ಕಟ್ಟಿಮನಿ ಜಂಟಿ (ಕಾರ್ಯದರ್ಶಿ),
ಹಾಗೂ ರಾಮ್ ಸೂರ್ಯವಂಶಿ, ಶೇಖರ್ ಪೂಜಾರಿ, ಮಲ್ಲು ನಡೆಗೇರಿ ಪ್ರದೀಪ ಭಜಂತ್ರಿ ಯವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಚಿನ್ ಕೊಚಿ, ಚಿರಂಜೀವಿ ಬಬಲಾದಕರ, ಸಂತೋμï ಕುಮಾರ ಮುಂತಾದವರು ಉಪಸ್ಥಿತರಿದ್ದರು.
Comments are closed.