ಆಳಂದ: ಪಟ್ಟಣದ ಶರಣ ಏಕಾಂತರಾಮಯ್ಯನ ಮಂದಿರದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕವು ಏರ್ಪಡಿಸಿದ್ದ 13ನೇ ವರ್ಷದ ಶ್ರಾವಣ ಸಂಜೆ ಉಪನ್ಯಾಸವು ಜುಲೈ.25ರಿಂದ ಆಗಸ್ಟ್ 24ರವರೆಗೆ ಜರುಗಲಿದೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಂಜಯ ಪಾಟೀಲ ತಿಳಿಸಿದರು.
ಜುಲೈ.25ಕ್ಕೆ ಸಂಜೆ 5:00 ಗಂಟೆಗೆ ಜಗದ್ಗುರು ತೋಂಟದಾರ್ಯ ಅನುಭವ ಮಂಟಪ ಸಂಚಾಲಕ ಶ್ರೀ ಕೋರಣೇಶ್ವರ ಸ್ವಾಮೀಜಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿವರು.
ಶರಣ ಚಿಂತಕ ಸಂಜಯ ಮಾಕಲ್ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮಾಜಿ ಶಾಸಕ ಸುಭಾಷ ಗುತ್ತೇದಾರ್, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ವಡ್ಡನಕೇರಿ, ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕಾಧ್ಯಕ್ಷ ಶರಣಬಸಪ್ಪ ಪಾಟೀಲ ಉಪಸ್ಥಿತರಿರುವರು ಎಂದು ಹೇಳಿದರು.
ಶ್ರಾವಣಮಾಸದಲ್ಲಿ 30ದಿನಗಳ ಕಾಲ ಪ್ರತಿದಿನ ಸಂಜೆ 6:00ಗಂಟೆಗೆ ಶರಣರ ವಿಚಾರ, ಚಿಂತನೆ ಹಾಗೂ ಶರಣ ಸಾಹಿತ್ಯದ ಸಂರಕ್ಷಣೆಗೈದ ವ್ಯಕ್ತಿ ಗಳು ಮತ್ತು ಪ್ರಸಾರದ ಮಹತ್ವದ ಕುರಿತು 30 ಜನ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕಾರ್ಯಕ್ರಮ ಜರುಗಲಿದೆ ಎಂದು ಅವರು ಹೇಳಿದರು.
ಆಗಸ್ಟ್ 25ರಂದು ಸಮಾರೋಪ ಕಾರ್ಯಕ್ರಮ ಜರುಗಲಿದೆ.
ಪಟ್ಟಣದ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜನೆ ನಡೆಯಲಿದೆ. ಕಲಾವಿದ ಶಿವಶರಣಪ್ಪ ಪೂಜಾರಿ, ಬಸವರಾಜ ಆಳಂದ ಅವರಿಂದ ವಚನ ಗಾಯನ ಹಾಗೂ ವಿದ್ಯಾರ್ಥಿಗಳಿಂದ ವಚನ ಪ್ರಸ್ತುತಿ, ಪಠಣ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.
ಪಟ್ಟಣದ ವಿವಿಧ ಸಂಘಟನೆಗಳ ಪ್ರಮುಖರು, ವಿಚಾರವಂತರು ಹಾಗೂ ಬಸವಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೋಳಲು ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ
ಪರಿಷತ್ತಿನ ಕಾರ್ಯದರ್ಶಿ ರಾಮಣ್ಣ ಸುತಾರ, ಬಾಬುರಾವ ಮಡ್ಡೆ. ಪ್ರಭಾಕರ ಸಲಗರೆ, ರಮೇಶ ಮಾಡಿಯಾಳಕರ, ಅಪ್ಪಾಸಾಹೇಬ ತೀರ್ಥೆ, ಮಲ್ಲಿನಾಥ ವಚ್ಚೆ ಉಪಸ್ಥಿತರಿದ್ದರು.
Next Post
Comments are closed.