Shubhashaya News

ಆಳಂದನಲ್ಲಿ ಶ್ರೀ ಕಾಳಿಕಾದೇವಿ ಜಾತ್ರೆ ಪಲ್ಲಕ್ಕಿ ಉತ್ಸವ ನಾಳೆ

ಆಳಂದ: ಪಟ್ಟಣದ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಸೋಮವಾರ ಶ್ರೀ ಪ್ರಣವಾನಂದ ಶ್ರೀಗಳ ಸಾನ್ನಿಧ್ಯದಲ್ಲಿ ವಾರ್ಷಿಕ ಹೋಮ ಹವನ ನಡೆಯಿತು.

ಆಳಂದ: ಪಟ್ಟಣದ ಹನುಮಾನ ದೇವಸ್ಥಾನ ಬಳಿಯ ಶ್ರೀ ಕಾಳಿಕಾದೇವಿ ಜಾತ್ರಾ ಮಹೋತ್ಸವ ನಿಮಿತ್ತ ಏ.2ರಂದು ದೇವಿಯ ಪಲ್ಲಕ್ಕಿ ಉತ್ಸವ ಧಾರ್ಮಿಕ ಸಮಾರಂಭ ನಡೆಯಲಿದೆ ಎಂದು ಕಾಳಿಕಾ ದೇವಿ ಟ್ರಸ್ಟ್ ಕಮೀಟಿ ಅಧ್ಯಕ್ಷ ಮಹಾದೇವ ಕೆ. ಪೋದ್ದಾರ ಅವರು ತಿಳಿಸಿದ್ದಾರೆ.
ಈ ಪ್ರಯುಕ್ತ ಸೋಮವಾರ ದೇವಸ್ಥಾನದಲ್ಲಿ ಕಲಬುರಗಿ, ಅಫಜಲಪೂರ ಮುರುಜಾವ ಮಠಾಧೀಶ್ವರ ಮಠದ ಶ್ರೀ ಪ್ರಣವಾನಂದ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ವಾರ್ಷಿಕ ಹೋಮ ಹನವ ವಿಶೇಷ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಮೀಟಿ ಖಜಾಂಚಿ ಬಾಹುಸಾಹೇಬ ಕೆ. ಪೋದ್ದಾರ, ಕಾರ್ಯದರ್ಶಿ ಸಿದ್ಧರಾಮ ಎಸ್. ಪೋದ್ದಾರ, ಮುಖಂಡ ಮನೋಹರ್ ಎನ್. ಪೋದ್ದಾರ, ಸುಭಾಷ ಎಲ್ ಪೋದ್ದಾರ, ಸುಭಾಷ ಕೆ. ದ್ರೋತ್ರೆ, ನಿವೃತ್ತ ಶಿಕ್ಷಕ ದೇವಿಂದ್ರಪ್ಪ ಪೋದ್ದಾರ, ಅನಂತ ಪೋದ್ದಾರ, ಶಿಕ್ಷಕ ಸಂತೋಷ ವೇದಪಾಠಕ, ಶgದ ಕೆ. ಪೋದ್ದಾರ, ಶಿವುಕುಮಾರ ಪೋದ್ದಾರ ದತ್ತಾತ್ರೆಯ ಆರ್.ಪೋದ್ದಾರ ಸೇರಿದಂತೆ ತಾಯಂದಿರು ಯುವಕರು ವಿಶೇಷ ಹವನದಲ್ಲಿ ಪಾಲ್ಗೊಂಡಿದ್ದರು.
ಕಳೆದ ಶನಿವಾರದಿಂದ ಆರಂಭಗೊಂ ಜಾತ್ರಾ ವಿಧಿ ವಿಧಾನಗಳು, ಅಂದು ಹೊಸಗೋಧಿ ಉಡಿತುಂಬುವ ಮೂಲಕ ರುದ್ರಾಭಿಷೇಕ ವಿಶೇಷ ಪೂಜೆಯೊಂದಿಗೆ ಆರಂಭಗೊಂಡಿದ್ದು,
ಸೋಮವಾರ ಮತ್ತು ಮಂಗಳವಾರ ಸಂಜೆ ಪಟ್ಟಣದ ಅಕ್ಕನ ಬಳಗದಿಂದ ಭಜನೆ ಹಾಗೂ ಏ. 2ರಂದು ಬೆಳಗಿನ 10:00ಗಂಟೆಗೆ ದೇವಿಯ ಪಲ್ಲಕ್ಕಿ ಉತ್ಸವ ಪ್ರಮುಖ ರಸ್ತೆಗಳಲ್ಲಿ ಕುಂಭ.ಕಳಸದೊಂದಿಗೆ ಪುರವಂತರ ಕುಣಿತ, ವಾದ್ಯ ವೈಭವಗೊಳೊಂದಿಗೆ ಸಾಗಿ ದೇವಸ್ಥಾನಕ್ಕೆ ಮೆರವಣಿಗೆ ತಲುಪಿದ ಬಳಿಕ ಧಾರ್ಮಿಕ ಸಭೆ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದ್ದು, ಈ ಸಮಾರಂಭಕ್ಕೆ ರಾಜಕೀಯ ಧುರೀಣರು, ಧಾರ್ಮಿಕ ಗುರುಗಳು ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಎಂದಿನಂತೆ ಸಕಲ ವಿಶ್ವಕರ್ಮ ಸಮಾಜ ಬಾಂಧವರು ಸೇರಿದಂತೆ ಸಾರ್ವಜನಿಕ ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನಾಶೀರ್ವಾದ ಪ್ರಸಾದ ಸ್ವೀಕರಿಸಬೇಕು ಹಾಗೂ ದೇವಸ್ಥಾನ ಕಟ್ಟಡದ ಜೀರ್ಣೋದ್ದಾರ ಕಾರ್ಯಕ್ಕೆ ಸರ್ವರು ತನು ಮನ ಧನಗಳಿಂದ ಸೇವಾ ಕಾರ್ಯ ನೆರವೇರಿಸಬೇಕು ಎಂದು ಪೋದ್ದಾರ ಅವರು ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ

Leave A Reply

Your email address will not be published.