Shubhashaya News

ಸಿಯುಕೆಯಲ್ಲಿ ಅಂತರರಾಷ್ಟ್ರೀಯ ಗಣಿತ ದಿನಾಚರಣೆ

ಕಂಪ್ಯೂಟರ್ ವಿಜ್ಞಾನ, ಕ್ರಿಪೆÇ್ಟೀಗ್ರಾಫಿ ತಂತ್ರಜ್ಞಾನ ಅಭಿವೃದ್ಧಿಗೆ ಮಾರ್ಗದರ್ಶಕವಾಗಿವೆ. ವಿದ್ಯಾರ್ಥಿಗಳು ಈ ಸಮಸ್ಯೆಗಳ ತಿಳಿದುಕೊಂಡು, ಪರಿಹಾರಕ್ಕಾಗಿ ಪರಿಶ್ರಮಿಸಬೇಕು”
ಸುರತ್ಕಲ್‍ನ ಎನ್‍ಐಟಿಯ ಪೆÇ್ರ. ಬಿ. ಆರ್. ಶಂಕರ್ ಪ್ರತಿಪಾದನೆ
ಆಳಂದ: ಕರ್ನಾಟಕ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಗಣಿತ ದಿನ 2025 ನ್ನು ವಿಜ್ಞಾನ ಪ್ರೇಮಿಗಳ ಸಮ್ಮುಖದಲ್ಲಿ ಆಚರಿಸಲಾಯಿತು.
ಈ ಸಂಧರ್ಭದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಪೆÇ್ರ. ಬಟ್ಟು ಸತ್ಯನಾರಾಯಣ ಮಾತನಾಡಿ, “ಗಣಿತವನ್ನು ಉತ್ಸಾಹದಿಂದ ಕಲಿಯಲು ಯುವ ಮನಸ್ಸುಗಳನ್ನು ಪ್ರೇರೇಪಿಸಬೇಕಾಗಿದೆ. ಇದು ಕೇವಲ ಗಣನೆಗಳ ಶಾಖೆಯಾಗಿಲ್ಲ, ಬದಲಾಗಿ ವೈಜ್ಞಾನಿಕ ಚಿಂತನೆಯ ಅಭಿವೃದ್ಧಿಗೆ ಇದನ್ನು ಉತ್ತಮ ತಂತ್ರವಾಗಿ ಬಳಸಬಹುದು” ಎಂದರು. ಕಾರ್ಯಕ್ರಮವನ್ನು ಗಣಿತ ವಿಭಾಗವು ಆಯೋಜಿಸಿತ್ತು.
ಗಣಿತ, ಕಂಪ್ಯೂಟಿಂಗ್, ಆಟಗಳು ಮತ್ತು ಒಂದು ಮಿಲಿಯನ್ ಡಾಲರ್ಸ್:
ಸುರತ್ಕಲ್‍ನ ಎನ್‍ಐಟಿಯ ಪೆÇ್ರ. ಬಿ. ಆರ್. ಶಂಕರ್ ಅವರು “ಗಣಿತ, ಕಂಪ್ಯೂಟಿಂಗ್, ಆಟಗಳು ಮತ್ತು ಒಂದು ಮಿಲಿಯನ್ ಡಾಲರ್ಸ್” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಅವರು ಪ್ರಾಚೀನ ಮತ್ತು ಸಮಕಾಲೀನ ಗಣಿತದ ಕೆಲವು ಕುತೂಹಲಕರ ಸಮಸ್ಯೆಗಳ ಕುರಿತು ಮಾತನಾಡಿದರು. ಖ್ಯಾತ ಬ್ರಹ್ಮ ಗೋಪುರದ ಒಗಟು, ನೈಟ್ಸ್ ಟೂರ್ ಸಮಸ್ಯೆ ಮತ್ತು ಶತಮಾನಗಳಿಂದ ಗಣಿತಜ್ಞರನ್ನು ಆಕರ್ಷಿಸಿರುವ ಇತರ ಪ್ರಮುಖ ಪ್ರಶ್ನೆಗಳ ಕುರಿತು ಅವರು ಚರ್ಚಿಸಿದರು.
ಪೆÇ್ರ. ಶಂಕರ್ ಅವರು ಮಿಲೇನಿಯಂ ಪ್ರೈಸ್ ಪ್ರಾಬ್ಲಮ್ಸ್ ಬಗ್ಗೆ ವಿವರಿಸಿದರು. ಅವರು, “ಈವುಗಳು ಕೇವಲ ಗಣಿತ ಕ್ಷೇತ್ರದ ಸಮಸ್ಯೆಗಳಲ್ಲ, ಬದಲಾಗಿ ಕಂಪ್ಯೂಟರ್ ವಿಜ್ಞಾನ, ಕ್ರಿಪೆÇ್ಟೀಗ್ರಾಫಿ ಮತ್ತು ದೈನಂದಿನ ತಂತ್ರಜ್ಞಾನ ಅಭಿವೃದ್ಧಿಗೆ ಮಾರ್ಗದರ್ಶಕವಾಗಿವೆ. ವಿದ್ಯಾರ್ಥಿಗಳು ಈ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು, ಅದರ ಪರಿಹಾರಕ್ಕಾಗಿ ಪರಿಶ್ರಮಿಸಬೇಕು” ಎಂದು ಸಲಹೆ ನೀಡಿದರು.
ಜನರೇಟಿವ್ ಮಾಡೆಲ್ಸ್ ಮತ್ತು ಕೃತಕ ಬುದ್ಧಿಮತ್ತೆ:
ಸುರತ್ಕಲ್ ಎನ್‍ಐಟಿಯ ಡಾ. ವಿದ್ಯಾಧರ್ ಉಪಾಧ್ಯ ಅವರು “ಜನರೇಟಿವ್ ಮಾಡೆಲ್ಸ್” ಕುರಿತು ಮಾತನಾಡಿದರು. ಅವರು ಆಧುನಿಕ ಕೃತಕ ಬುದ್ಧಿಮತ್ತೆ (ಂಡಿಣiಜಿiಛಿiಚಿಟ Iಟಿಣeಟಟigeಟಿಛಿe) ಮಾದರಿಗಳು ಹೇಗೆ ಸಂಭವನೀಯತೆ ವಿತರಣಾ ಮಾದರಿಗಳನ್ನು ಬಳಸಿ ಚಿತ್ರಗಳನ್ನು ಉತ್ಪಾದಿಸುತ್ತವೆ ಎಂಬುದನ್ನು ವಿವರಿಸಿದರು. “ಈ ತಂತ್ರಜ್ಞಾನವು ಕೇವಲ ಚಿತ್ರ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ, ಬದಲಾಗಿ ವೈದ್ಯಕೀಯ ಚಿತ್ರಣ, ಸಂಶೋಧನಾ ಉಪಕರಣಗಳು ಮತ್ತು ಸ್ವಾಯತ್ತ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತಿದೆ. ಗೌಸಿಯನ್ ವಿತರಣೆಗಳು, ನರಮಂಡಲ ಜಾಲಗಳು (ಓeuಡಿಚಿಟ ಓeಣತಿoಡಿಞs) ಮತ್ತು ಆಳವಾದ ಕಲಿಕೆ (ಆeeಠಿ ಐeಚಿಡಿಟಿiಟಿg) ಎಂಬ ಪರಿಕಲ್ಪನೆಗಳನ್ನೇ ಈ ಕ್ಷೇತ್ರದ ಭವಿಷ್ಯ ರೂಪಿಸುತ್ತದೆ” ಡಾ. ಉಪಾಧ್ಯ ಅವರು ನಿರ್ದೇಶಿತ ಕಲಿಕೆ (Suಠಿeಡಿviseಜ ಐeಚಿಡಿಟಿiಟಿg) ಮತ್ತು ನಿರ್ದೇಶನ ರಹಿತ ಕಲಿಕೆ (Uಟಿsuಠಿeಡಿviseಜ ಐeಚಿಡಿಟಿiಟಿg) ಕುರಿತಂತೆ ವಿವರಣೆ ನೀಡಿದರು. ಅವರು, “ನಾವು ಗಣಿತವನ್ನು ಸಮರ್ಥವಾಗಿ ಬಳಸಿದರೆ, ಕೃತಕ ಬುದ್ಧಿಮತ್ತೆಯು ಮಾನವ ಕುಶಲತೆಯ ನಿಟ್ಟಿನಲ್ಲಿ ಶಕ್ತಿಯುತ ಸಾಧನವಾಗಬಹುದು” ಎಂದು ಅಭಿಪ್ರಾಯಪಟ್ಟರು.
ಡಾ. ಸುಮುಖ ಎಸ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕುಲಸಚಿವ ಪ್ರೊ ಆರ್. ಆರ್. ಬಿರಾದಾರ, ಗಣಿತದ ವಿದ್ಯಾರ್ಥಿಗಳು, ಅಧ್ಯಾಪಕರು, ಮತ್ತು ಗಣಿತಾಸಕ್ತಿಯುಳ್ಳ ಸಂಶೋಧಕರು ಪಾಲ್ಗೊಂಡರು. ಡಾ. ಸಮೀರ್ ಕರ್ ವಂದಿಸಿದರು. ಡಾ. ಎನ್. ಸಂದೀಪ್, ಡಾ. ದೇವಿಕಾ, ಡಾ. ಮೇಘನಾ ಮತ್ತು ಇತರ ಪ್ರಾಧ್ಯಾಪಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.