Shubhashaya News

ಕವಿ ಸರ್ವಜ್ಞನವರ ತತ್ವಾದರ್ಶ ಸಮಾಜಕ್ಕೆ ಮಾದರಿ: ಗುತ್ತೇದಾರ 

ಜನಗಣತಿಯಲ್ಲಿ ಹಿಂದೂ ಕುಂಬಾರ ನಮೂಧಿಸಿ ಡಾ. ರವಿಂದ್ರ 

ಆಳಂದ: ಪಟ್ಟಣದ ಸಿದ್ಧೇಶ್ವರ ಮಠದಲ್ಲಿ ತಾಲೂಕು ಕುಂಬಾರ ಸಮಾಜ ಆಯೋಜಿಸಿದ್ದ ಕವಿ ಸರ್ವಜ್ಞನವರ 505ನೇ ಜಯಂತಿ ಕಾರ್ಯಕ್ರಮ ಮಾಜಿ ಶಾಸಕ ಸುಭಾಷ ಗುತ್ತೇದಾರ ಉದ್ಘಾಟಿಸಿದರು. ಶ್ರೀ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು, ಡಾ. ರವಿಂದ್ರ ಕುಂಬಾರ, ಜಿಲ್ಲಾಧ್ಯಕ್ಷ ವಿಧ್ಯಾಧರ,ತಾಲೂಕು ಮತ್ತು ಶರಣು ಟಿ. ಕುಂಬಾರ, ರೇವಣಸಿದ್ಧ ಕುಂಬಾರ ಇತರರು ಇದ್ದರು.

 

ಆಳಂದ: ಕವಿ ಸರ್ವಜ್ಞನವರು ತ್ರೀಪದಿಗಳ ಮೂಲಕ ನೀಡಿದ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಇಂದಿಲ್ಲಿ ಹೇಳಿದರು.

ಪಟ್ಟಣಧ ಶ್ರೀ ಸಿದ್ದೇಶ್ವರ ಮಠದಲ್ಲಿ ತಾಲೂಕು ಕುಂಬಾರ ಸಮಾಜದ ಆಶ್ರಯದಲ್ಲಿ ಹಮ್ಮಿಕೊಂಡ ಕವಿ ಸರ್ವಜ್ಞ ನವರ 505ನೇ ವರ್ಷದ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜ ಬಾಂಧವರಲ್ಲಿನ ಕುಂಬಾರಿಕೆ ಇಂದು ಮಾಯವಾಗುತ್ತಿದೆ. ಪೂರ್ವಜರು ಸಮುದಾಯಕ್ಕೊಂದು ಕಾಯಕ ನೀಡಿದ್ದಾರೆ. ಆದರೆ ಇಂದು    ಕುಂಬಾರಿಕೆ ಮಾಯವಾಗುತ್ತಿದೆ. ಕಾಲಕ್ಕೆ ತಕ್ಕಂತೆ ಸಮಾಜ ಬಾಂಧವರು ತಮ್ಮ  ಶಿಕ್ಷಣ, ಸಂಘಟನೆ ಹಾಗೂ ತ್ರಿಪದಿ ರಚನಕಾರ ಸರ್ವಜ್ಞನವರ ತತ್ವದರ್ಶನ ಸಮಾಜ ಸುಧಾರಣೆಗೆ ಪ್ರಚೋದನಕಾರಿ ಎಂಬುದಾಗಿ ಅಭಿಪ್ರಾಯಪಟ್ಟರು.

ಕಮಲಾಪುರ ಸರ್ಕಾರಿ ಡಿಗ್ರಿ ಕಾಲೇಜಿನ ಡಾ. ರವೀಂದ್ರ ಕುಂಬಾರ್ ಮಾತನಾಡುತ್ತ, “ಸಾರ್ವತ್ರಿಕ ಜನಗಣತಿಯಲ್ಲಿ ಕುಂಬಾರ ಸಮಾಜದ ಮೀಸಲಾತಿಗಾಗಿ ಹಿಂದೂ ಕುಂಬಾರ ಎಂದು ನಮೂದಿಸಬೇಕು. ವೀರಶೈವ ಲಿಂಗಾಯತ ಎಂದು ಬೇಡ, 25% ಎಲ್ಲಾ ಹಿಂದುಳಿದ ವರ್ಗಗಳೂ ಸೇರಿವೆ. ಜನಸಂಖ್ಯೆ ಕಡಿಮೆಯಿದ್ದರೂ ಸರ್ಕಾರದಿಂದ ಸಮಾನ ಅವಕಾಶಗಳು ದೊರೆಯಬೇಕು. ಸರ್ಕಾರ ಹೆಸರಿಗೆ ನಿಗಮ ರಚನೆ ಮಾಡಿದರೆ ಸಾಲದು ಹಿಂದುಳಿದ ಕುಂಬಾರ ಜನಾಂಗದ ಅಭಿವೃದ್ಧಿಯ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು,” ಎಂದರು.

ಸಮಾಜ ಬಾಂಧವರು, “ಅಸ್ತಿತ್ವ ಉಳಿಸಿಕೊಳ್ಳಲು ಸಮಾಜ ಜಾಗೃತಿಯೊಂದಿಗೆ ಮುನ್ನಡೆಯಬೇಕು. ಕುಂಬಾರ ವೃತ್ತಿ 12ನೇ ಶತಮಾನಕ್ಕೆ ಮಾತ್ರ ಸೀಮಿತವಲ್ಲ, ಇದು ಸಾವಿರಾರು ವರ್ಷಗಳ ಹಿಂದಿನಿಂದಲೂ ಇದೆ. ಉದ್ಯೋಗ ನಾಶವಾಗುತ್ತಿದೆ, ಗಡಿಗೆ ಖರೀದಿದಾರರಿಲ್ಲ, ಹೀಗಾಗಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿವೆ. ಶಿಕ್ಷಣ ಹಾಗೂ ಸಂಘಟನೆಯ ಮೂಲಕ ದುಶ್ಚÀಟಗಳಿಂದ ದೂರವಿದ್ದು ಸವಾಲನ್ನು ಎದುರಿಸಿ ಅಭಿವೃದ್ಧಿ ಸಾಧಿಸಬೇಕು,” ಎಂದು ಅಭಿಪ್ರಾಯಪಟ್ಟರು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆಳಂದ, ನಂದವಾಡಗಿ ಜಾಲುವಾದಿ ಶ್ರೀ ಮಹಾಂತೇಶ್ವರ ಸಂಸ್ಥಾನ ಹಿರೇಮಠದ ನೂತನ ಪೀಠಾಧಿಪತಿ ಡಾ. ಅಭಿನವ ಚನ್ನಬಸವ ಶಿವಾಚಾರ್ಯರು ಅವರು, “ಕವಿ ಸರ್ವಜ್ಞ ಎಲ್ಲ ಜಾತಿ ಸಮುದಾಯಗಳಿಗೆ ಬೋಧನೆ ಮಾಡಿದ ಜಾತ್ಯತೀತ ಕವಿ. ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದು ಆವಶ್ಯಕ. ಇತರರನ್ನು ದೂರÀದೆ ಸ್ವತಃ ಬೆಳೆಯುವ ಪರಿಕಲ್ಪನೆ ಮತ್ತು ಒಗ್ಗೂಡಿಕೆಯ ಶಿಕ್ಷಣ ಮುಖ್ಯ. ಮೂಡನಂಬಿಕೆ ಹೆಸರಿನಲ್ಲಿ ಸಮಾಜ ಮತ್ತು ಧರ್ಮದ ಪರಂಪರೆಯನ್ನು ಹಿಂಜರಿಸುವಂತಿಲ್ಲ,” ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಕುಂಬಾರ ಸಮಾಜದ ಜಿಲ್ಲಾಧ್ಯಕ್ಷ ವಿದ್ಯಾಧರ ಕುಂಬಾರ, ಅಧ್ಯಕ್ಷತೆ ವಹಿಸಿದ್ದ ತಾಲೂಕು ಅಧ್ಯಕ್ಷ ಶರಣು ಟಿ. ಕುಂಬಾರ, ಮುಖಂಡ ಗಂಗಾಧರ ಕುಂಬಾರ, ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ರೇವಣಸಿದ್ಧ ಜೆ. ಕುಂಬಾರ, ಶಿವಾನಂದ ಕಿಣ್ಣಿಸುಲ್ತಾನ, ಡಾ. ಜಗನಾಥ ಕುಂಬಾರ, ಅಂಬ್ರೇಶ ಕುಂಬಾರ, ಮೈಲಾರಿ ಕುಂಬಾರ, ಶ್ರೀಮಂತ ಧಂಗಾಪೂರ, ಶರಣು ಬಿ. ಕುಂಬಾರ ಮತ್ತಿತರರು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು. ಬಸವರಾಜ ಕುಂಬಾರÀ ನಿರೂಪಿಸಿದರು. ಸಂತೋಷ ಸಲಗರ ಸ್ವಾಗತಿಸಿದರು. ದತ್ತಾ ಚಿತಲಿ ವಂದಿಸಿದರು. ಈ ಮೊದಲು ಕವಿ ಸರ್ವಜ್ಞನವರ ಭಾವಚಿತ್ರವನ್ನು ಪ್ರಮುಖ ರಸ್ತೆಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಯಿತು.

Leave A Reply

Your email address will not be published.