Shubhashaya News

ಕಲಬುರಗಿಯಲ್ಲಿ ತಡರಾತ್ರಿ ಹಿಂದೂಪರ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ!

ಅಕ್ರಮ ಗೋಸಾಗಾಟ ತಡೆದಿದ್ದಕ್ಕೆ ಕಲಬುರಗಿಯಲ್ಲಿ ತಡರಾತ್ರಿ ಹಿಂದೂ ಪರ ಸಂಘಟನೆ ಕಾರ್ಯಕರ್ತರ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.

ಕಲಬುರಗಿ ನಗರದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವುಗಳನ್ನು ರಕ್ಷಣೆ ಮಾಡಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಿಂದೂಪರ ಸಂಘಟನೆ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.

ಖಾದ್ರಿ ಚೌಕ್‌ ಬಳಿ ತಡರಾತ್ರಿ ಅನ್ಯಕೋಮಿನ 30 ರಿಂದ 35 ಮಂದಿ ಯುವಕರ ಗುಂಪು ಹಿಂದೂಪರ ಸಂಘಟನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ರಮೇಶ್‌ ದೇಸಾಯ, ಮಹಾದೇವ್‌ ಎಂಬುವರಿಗೆ ಗಾಯಗಳಾಗಿವೆ.

Comments are closed.

Don`t copy text!