ಈ ಬಾರಿಯ ಬೀದರ್ ಲೋಕಸಭಾ ಚುನಾವಣೆಯಲ್ಲಿ ಸೋಲಿನಲ್ಲೂ ಕೂಡ ಬಿಜೆಪಿಗೆ ಬಲ ನೀಡಿದ್ದು ಆಳಂದ ಮತಕ್ಷೇತ್ರ ಮಾತ್ರ. ಅದರಲ್ಲಿಯೂ ಆಳಂದನ ಯುವ ನಾಯಕ ಹರ್ಷಾನಂದ ಗುತ್ತೇದಾರ ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರದಾದ್ಯಂತ ತಿರುಗಾಡಿ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಸಿಗುವಂತೆ ಮಾಡಿರುವ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಬೀದರ್ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತಗಳು ಬಂದಿರುವುದು ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ. ಆಳಂದ ಮತಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಿದ್ದಾರೆ ಆದರೂ ಅಲ್ಲಿ ಬಿಜೆಪಿಗೆ ಹೆಚ್ಚು ಮತಗಳು ಬಂದಿರುವುದು ನಾಯಕರಲ್ಲಿ ಸಂತೋಷ ಇಮ್ಮಡಿಗೊಳಿಸಿದೆ.
ಮತಕ್ಷೇತ್ರದಿಂದ ಹೆಚ್ಚಿನ ಮತಗಳು ಬಿಜೆಪಿಗೆ ಬಂದಿರುವುದಕ್ಕೆ ಪಕ್ಷದ ಮುಖಂಡರುಗಳಿಗೆ, ನಾಯಕರುಗಳಿಗೆ, ಕಾರ್ಯಕರ್ತರಿಗೆ, ಮತದಾರರಿಗೆ ಮುಖಂಡ ಹರ್ಷಾನಂದ ಗುತ್ತೇದಾರ ಧನ್ಯವಾದ ತಿಳಿಸಿದ್ದಾರೆ.
Comments are closed.