Shubhashaya News

`SSLC’ ಪರೀಕ್ಷೆ-2 : ಪರೀಕ್ಷಾ ಕೇಂದ್ರಗಳಲ್ಲಿ ‘CCTV’ ಕ್ಯಾಮರಾ ಕಡ್ಡಾಯ ಅಳವಡಿಕೆಗೆ ಆದೇಶ

2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ಕ್ಕೆ ಪರೀಕ್ಷಾ ಕೇಂದ್ರಗಳನ್ನು ರಚಿಸಿ ಪ್ರಸ್ತಾವನೆಯನ್ನು ಮಂಡಲಿಗೆ ಸಲ್ಲಿಸುವಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಆದೇಶ ಹೊರಡಿಸಿದೆ.

2024ರ ಪರೀಕ್ಷೆ-2ಕ್ಕೆ ಪರೀಕ್ಷಾ ಕೇಂದ್ರಗಳನ್ನು ರಚಿಸುವುದು ಅತ್ಯಂತ ಪ್ರಮುಖ ಕಾರ್ಯವಾಗಿದೆ. ಪರೀಕ್ಷಾ ಕೇಂದ್ರ ರಚನೆಯ ನಂತರವೇ ಪ್ರವೇಶಪತ್ರ, ಕೇಂದ್ರ ನಾಮಯಾದಿ, ಶಾಲಾವಾರು ನಾಮಯಾದಿ, ಹಾಜರಾತಿ ಸಹಿತ ಅಂಕಪಟ್ಟಿ (ಎ.ಎಂ.ಎಲ್), ಪ್ರಶ್ನೆಪತ್ರಿಕೆ ಬೇಡಿಕೆ ಹಾಗೂ ಪರೀಕ್ಷಾ ಕೇಂದ್ರದ ಸಾದಿಲ್ವಾರು ಹಂಚಿಕೆಯ ಪ್ರಕ್ರಿಯೆ ಕೈಗೊಳ್ಳಬೇಕಾಗಿದೆ. ಆಯಾ ಭೌಗೋಳಿಕ ಪ್ರದೇಶದಲ್ಲಿನ ನಗರ/ಗ್ರಾಮೀಣ ಪ್ರದೇಶದ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಪರಿಗಣಿಸಿ ಕ್ಲಸ್ಟರ್‌ಸಹಿತ ಹಾಗೂ ಕ್ಲಸ್ಟರಹಿತ ಪರೀಕ್ಷಾ ಕೇಂದ್ರಗಳನ್ನು ರಚಿಸುವುದು.

 

Comments are closed.

Don`t copy text!