Shubhashaya News

ಬರದ ಊರಿಗೆ ನೀರು ತಂದ ಆಧುನಿಕ ಭಗೀರಥ ಹರ್ಷಾ ಗುತ್ತೇದಾರ

ಬೀರು ಬೇಸಿಗೆಯಿಂದ ತತ್ತರಿಸಿರುವ ಜನತೆ ಹನಿ ನೀರಿಗಾಗಿ ಹೈರಾಣುಗುತ್ತಿದ್ದರು. ಜೀವಜಲಕ್ಕಾಗಿ ಜನರು ಸೇರಿದಂತೆ ಜಾನವಾರುಗಳಿಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಝಳಕಿ (ಕೆ) ಗ್ರಾಮಸ್ಥರು ನೀರಿಗಾಗಿ ಬೃಹತ ಮಟ್ಟದ ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆದಿದ್ದರು ಆದರೂ, ಸರ್ಕಾರ ಎಂದಿನಂತೆ ತನ್ನ ಉಡಾಫೆಯ ಕಾರ್ಯಶೈಲಿನಿಂದ ಆ ಗ್ರಾಮಕ್ಕೆ ನೀರಿನ ವ್ಯವಸ್ಥೆ ಮಾಡಲಿಲ್ಲ. ಸಮಸ್ಯೆ ಅರಿತು ಗ್ರಾಮಕ್ಕೆ ಭೇಟಿ ನೀಡಿದ ಜಿ.ಪ ಮಾಜಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಅವರು ತಮ್ಮ ಸ್ವಂತ ಖರ್ಚಿನಿಂದ ಬೋರವೆಲ್ ಕೊರೆಯಿಸಿ ಆ ಗ್ರಾಮದವರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಗ್ರಾಮದ ಜನತೆ ಪಾಲಿಗೆ ಆಧುನಿಕ ಭಗೀರಥ ಆಗಿದ್ದಾರೆ.

ಜನರು ಕುಡಿಯುವ ನೀರಿಗಾಗಿ ಪಡುತ್ತಿರುವ ಕಷ್ಟವನ್ನು ಅರಿತು ತಮ್ಮ ಸ್ವಂತ ಹಣದಲ್ಲಿ ಜನರಿಗಾಗಿ ಬೋರ್‍ವೆಲ್ ಕೊರೆಯಿಸುವ ಮೂಲಕ ಹರ್ಷಾನಂದ ಗುತ್ತೇದಾರ ಮಾನವೀಯತೆ ಮೆರೆದಿದ್ದಾರೆ. ಅಪಾರ ಜನಪರ ಕಾಳಜಿ ಹೊಂದಿರುವ ಇವರು ಜನರಿಗೆ ಅನುಕೂಲ ಆಗಲೇಂದು ತಮ್ಮ ಸ್ವಂತ ಖರ್ಚಿನಲ್ಲಿ ಬೋರವೆಲ್ ಕೊರೆಯಿಸಿದ್ದಾರೆ.

ಪ್ರವಾಹ ಇರಲಿ, ನೆರೆ ಬರಲಿ, ಬರ ಇರಲಿ ಹೀಗೆ ಆಳಂದ ತಾಲೂಕಾ ಯಾವಾಗ್ಯಾವಾಗ ಸಂಕಷ್ಟಕ್ಕೆ ಸಿಲುಕುತ್ತದೋ ಆವಾಗ ಜನರ ಸಹಾಯಕ್ಕೆ ಧಾವಿಸುವುದು ಗುತ್ತೇದಾರ ಕುಟುಂಬದ ಮುಖ್ಯ ಗುಣ. ಆಳಂದ ತಾಲೂಕಿನಲ್ಲಿ ದಾನ, ಧರ್ಮ ಎಂದರೆ ಥಟ್ಟನೇ ನೆನಪಾಗುವ ಹೆಸರು ಗುತ್ತೇದಾರ ಕುಟುಂಬ. ಅವರು ಕುಟುಂಬದವರು ಆರಂಭಿಸಿದ್ದ ಸಹಾಯಗುಣ ಹರ್ಷಾನಂದ ಗುತ್ತೇದಾರ ಈಗಲೂ ಮುಂದುವರೆಸಿದ್ದಾರೆ.

ಝಳಕಿ (ಕೆ) ಮಾರ್ಗದಲ್ಲಿ ಐದಾರು ಕಿಲೋಮೀಟರ್ ವರೆಗೂ ಎಲ್ಲಿಯೂ ನೀರಿನ ಅನುಕೂಲ ಇರಲಿಲ್ಲ. ಸಾರ್ವಜನಿಕರು, ರೈತರು, ಜಾನುವಾರುಗಳು ನೀರಿಲ್ಲದೆ ಬೇಸಿಗೆಯಲ್ಲಿ ಪರದಾಡುವಂತಾಗಿತ್ತು. ಇದನ್ನು ಅರಿತ ಹರ್ಷಾನಂದ ಗುತ್ತೇದಾರ ಬೋರವೆಲ್ ಕೊರೆಯುವ ನಿರ್ಧಾರ ಮಾಡಿದ್ದು, ಈ ಭಾಗದ ರೈತರಿಗೆ ಹಾಗೂ ಜನರಿಗೆ ಮತ್ತು ಜಾನುವಾರುಗಳಿಗೆ ನೀರಿನ ಅನುಕೂಲ ಕಲ್ಪಿಸಿದ್ದಾರೆ.

ಹರ್ಷಾನಂದ ಗುತ್ತೇದಾರ ಅವರು ತಮ್ಮ ಸ್ವಂತದ 2 ಲಕ್ಷ ರೂ. ಹಣವನ್ನು ಖರ್ಚು ಮಾಡಿ 2 ಬೋರವೆಲ್ ಕೊರೆಸಿದ್ದಾರೆ ಆದರೆ ಮೊದಲ ಬೊರವೆಲ್ ವಿಫಲವಾಗಿದ್ದು ನಂತರ ಎರಡನೇ ಬೊರವೆಲ್ ಸುಮಾರು 250 ಅಡಿ ಆಳದಲ್ಲಿ ಕೊರೆಸಿದ್ದಾರೆ. ಎರಡನೇ ಬಾರಿ ಕೊರೆದಿರುವ ಈ ಕೊಳವೆ ಬಾವಿಗೆ 3 ಇಂಚು ಸಿಹಿ ನೀರು ಸಿಕ್ಕಿದ್ದು, ಎಲ್ಲರಿಗೂ ಕುಡಿಯಲು ಯೋಗ್ಯವಾದ ಶುದ್ಧ ನೀರಿನ ಅನುಕೂಲವಾಗಿದೆ. ಸರ್ಕಾರ, ಚುನಾಯಿತ ಜನಪ್ರತಿನಿಧಿಗಳು ಮಾಡಬೇಕಿದ್ದ ಕೆಲಸವನ್ನು ಇವರು ಮಾಡಿದ್ದು , ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ಈ ಸಂದರ್ಭದಲ್ಲಿ ಮಾತನಾಡಿದ ಹರ್ಷಾನಂದ ಗುತ್ತೇದಾರ, ನಾವು ಸಾಮಾಜಿಕವಾಗಿ, ಆರ್ಥಿಕವಾಗಿ ಸದೃಢವಾಗಿ ಬೆಳೆಯಲು ಕ್ಷೇತ್ರದ ಜನರ ಕೃಪಾಶೀರ್ವಾದ ಇದೆ. ಹಾಗಾಗಿ ನಾವು ಜನರಿಗೆ ಅರ್ಪಿಸಿದ ಭಕ್ತಿಯ ಕಾಣಿಕೆ ಇದಾಗಿದ್ದು, ಜನರು ಈ ನೀರನ್ನು ಒಳ್ಳೆಯದಕ್ಕೆ ಬಳಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ.

ಅದಕ್ಕೆ ಹೇಳುವುದು ಜನಸೇವೆಯಲ್ಲಿ ಪರಮಾತ್ಮನನ್ನು ಕಾಣು ಎನ್ನುವುದು. ಇದಕ್ಕೆ ತಕ್ಕಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಆಳಂದನ ಯುವ ನಾಯಕ ಹರ್ಷಾನಂದ ಗುತ್ತೇದಾರ. ಇವರ ಈ ಸೇವಾ ಕಾರ್ಯ ಮುಂದುವರೆಯುವಲ್ಲಿ ಭಗವಂತ ಅವರಿಗೆ ಇನ್ನಷ್ಟು ಶಕ್ತಿ ತುಂಬಲಿ.

Comments are closed.

Don`t copy text!