Shubhashaya News

‘ಮುರುಘಾ ಶ್ರೀ’ಗಳ ವಿರುದ್ಧದ ‘ಧಾರ್ಮಿಕ ಸಂಸ್ಥೆ ದುರುಪಯೋಗ’ ಕೇಸ್ ರದ್ದು – ಹೈಕೋರ್ಟ್ ಆದೇಶ

ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶ್ರೀಗಳ ವಿರುದ್ಧ ದಾಖಲಾಗಿರುವಂತ ಅತ್ಯಾಚಾರ, ಪೋಕ್ಸೋ ಪ್ರಕರಣವನ್ನು ಮುಂದುವರೆಸಿ, ಅವರ ವಿರುದ್ಧದ ಧಾರ್ಮಿಕ ಸಂಸ್ಥೆ ದುರುಪಯೋಗ ಕೇಸನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಈ ಕುರಿತಂತೆ ಆರೋಪ ನಿಗದಿ ಪ್ರಶ್ನಿಸಿ ಮುರುಘಾ ಶ್ರೀಗಳು ಸಲ್ಲಿಸಿದ್ದಂತ ಮೇಲ್ಮನವಿಯ ಅರ್ಜಿಯನ್ನು ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರನ್ನೊಳಗೊಂಡಂತ ನ್ಯಾಯಪೀಠವು, ಜಾತಿ ನಿಂದನೆ, ಜೆಜೆ ಕಾಯ್ದೆ, ಸಾಕ್ಷ್ಯ ನಾಶ ಕುರಿತ ಆರೋಪ ರದ್ದುಗೊಳಿಸಿದರು.

ಅತ್ಯಾಚಾರ, ಪೋಕ್ಸೋ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ಅಸ್ತು ಎಂದಿದೆ. ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದಂತ ನ್ಯಾಯಪೀಠವು ಮುರುಘಾ ಶಅರೀಗಳ ವಿರುದ್ಧದ ಅತ್ಯಾಚಾರ, ಪೋಕ್ಸೋ ಕೇಸ್ ವಿಚಾರಣೆಗೆ ಸಮ್ಮತಿ, ಜಾತಿ ನಿಂದನೆ, ಜೆಜೆ ಕಾಯ್ದೆ, ಸಾಕ್ಷ್ಯ ನಾಶ ಕುರಿತ ಆರೋಪ ರದ್ದುಪಡಿಸಿದೆ.

ಇನ್ನೂ ಆರೋಪ ಪಟ್ಟಿಯಲ್ಲಿರುವ ಎಲ್ಲಾ ದಾಖಲೆಗಳನ್ನು ಆರೋಪಿ ಮುರುಘಾ ಶ್ರೀಗಳಿಗೆ ನೀಡುವಂತೆ ಕೋರ್ಟ್ ಸೂಚಿಸಿದೆ. ಅಲ್ಲದೇ ಹೈಕೋರ್ಟ್ ಆದೇಶ ಪರಿಗಣಿಸಿ, ಆರೋಪ ಮರು ನಿಗದಿಗೆ ಆದೇಶಿಸಿದೆ.

Comments are closed.

Don`t copy text!